“ಫೈರ್ ಫ್ಲೈ” ಚಿತ್ರ ತಂಡದೊಂದಿಗೆ ಕೆಲಸ ಮಾಡಿದ್ದು ಖುಷಿಕೊಟ್ಟ ಸಂಗತಿ: ಹಿರಿಯ ಕಲಾವಿದ ಮೂಗು ಸುರೇಶ್
“ಫೈರ್ ಪ್ಲೈ” ಚಿತ್ರವನ್ನು ಹಿರಿಯ ನಟ ಶಿವರಾಜ್ ಕುಮಾರ್ ಅವರ ಪುತ್ರಿ ನಿವೇದಿತಾ ಶಿವರಾಜ್‍ಕುಮಾರ್ ಚೊಚ್ಚಲ ಬಾರಿಗೆ ನಿರ್ಮಾಣ ಮಾಡುತ್ತಿದ್ದು ವಂಶಿ ಕೃಷ್ಣ ಆಕ್ಷನ್ ಕಟ್ ಹೇಳುವ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ.
ಫೈರ್ ಫ್ಲೈ ಚಿತ್ರದಲ್ಲಿ ಹಿರಿ-ಕಿರಿಯ ಕಲಾವಿದರ ದಂಡು ಚಿತ್ರದಲ್ಲಿ ನಟಿಸಿದೆ. ಈ ಚಿತ್ರದಲ್ಲಿ ಕಾಣಿಸಿಕೊಂಡ ಹಿರಿಯ ಕಲಾವಿದ ಮೂಗು ಸುರೇಶ್ ಚಿತ್ರದಲ್ಲಿ ನಟಿಸಿದ ಅನುಭವ ಹಂಚಿಕೊಂಡು ಖುಷಿ ಪಟ್ಟಿದ್ದಾರೆ.
ಫೈರ್ ಪ್ಲೈ ಚಿತ್ರದ ಮೇಕಿಂಗ್ ಹೊಸತನದಿಂದ ಕೂಡಿತ್ತು. ಇದುವರೆಗಿನ ಸಿನಿಮಾ ಅನುಭವದಲ್ಲಿ ಯುವಜನರನ್ನು ಜೊತೆ ಕೆಲಸ ಮಾಡಿದ್ದಯ ಖುಷಿ ತಂದಿದೆ. ಅದರಲ್ಲಿಯೂ ಪರಸ್ಪರ ಹೊಂದಾಣಿಕೆ, ಪೂರ್ವಯೋಜಿತ ಮತ್ತು ಸಮತೋಲಿತ ಯೋಜನೆ ಚೆನ್ನಾಗಿ ಮೂಡಿ ಬಂದಿತ್ತು. ಜೊತೆಗೆ ಇಡೀ ತಂಡ ಮಗು ತರ ನೋಡಿಕೊಂಡಿದ್ದು ಇನ್ನಷ್ಟು ಸಂತಸ ತಂದಿದೆ ಎಂದಿದ್ದಾರೆ.
ಚಿತ್ರದಲ್ಲಿ ರಾಜಣ್ಣನ ಪಾತ್ರ ಮಾಡಿದ್ದೇನೆ. ಇದೊಂದು ಪ್ರಮುಖವಾದ ಪಾತ್ರ. ಅಭಿನಯಕ್ಕೆ ಒಂದಷ್ಟು ಸನ್ನಿವೇಶಗಳು ಇದ್ದಾಗ ನಟನೆ ಮಾಡಲು ಮತ್ತಷ್ಟು ಹುಮ್ಮಸ್ಸು ಬರುತ್ತಿತ್ತು. ಪಾತ್ರಕ್ಕಿರುವ ಸೆಂಟಿಮೆಂಟ್ರ, ಮಾನವೀಯತೆ ತುಂಬಾ ಜನರಿಗೆ ಇಷ್ಟವಾಗಲಿದೆ. ನನ್ನ ವೃತ್ತಿ ಬದುಕಿನಲ್ಲಿ ಇಂತಹ ಪಾತ್ರ ಸಿಕ್ಕಿದ್ದು ಖುಷಿ ಕೊಟ್ಟಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದುವರೆಗೂ ನಿರ್ಮಾಪಕನ್ನು ಭೇಟಿ ಮಾಡಿಲ್ಲ ಆದರೆ ಚಿತ್ರೀಕರಣದ ಸೆಟ್‍ನಲ್ಲಿ ಅವರನ್ನು ನೋಡಿದ್ದೆ. ಅವರು ಸಿನಿಮಾ ತಂಡಕ್ಕೆ ಮತ್ತು ನಿರ್ದೇಶಕರಿಗೆ ನೀಡಿರುವ ಸ್ವಾತಂತ್ರ್ಯ ನೋಡಿ ಖುಷಿ ಆಯಿತು. ಕನ್ನಡ ಚಿತ್ರರಂಗಕ್ಕೆ ಇಂತಹ ನಿರ್ಮಾಪಕರ ಅಗತ್ಯವಿದೆ. ಕೆಲವು ನಿರ್ಮಾಪಕರು ಹಣ ಹಾಕಿದ್ದೇನೆ ಎನ್ನುವ ಕಾರಣಕ್ಕೆ ತಲೆ ಮೇಲೆ ಕೂರುತ್ತಾರೆ. ಆಗ ಕ್ರಿಯೇಟಿವಿಟಿಯೇ ಹಾಳಾಗಿ ಬಿಡುತ್ತದೆ ಹೊಸ ತಂಡದ ಮೇಲೆ ನಂಬಿಕೆ ಇಟ್ಟು ನಿರ್ದೇಶಕರು ಮತ್ತು ತಂಡಕ್ಕೆ ಸ್ವಾತಂತ್ರ್ಯ ನೀಡಿರು ನಿರ್ಮಾಪಕಿ ನಿವೇದಿತಾ ಶಿವರಾಜ್ ಕುಮಾರ್ ಮಾದರಿ ನಿರ್ಮಾಪಕಿಯಾಗುವ ಎಲ್ಲಾ ಲಕ್ಷಣಗಳಿವೆ ಜೊತೆಗೆ ಅಜ್ಜಿ ಪಾರ್ವತಮ್ಮ ರಾಜ್ ಕುಮಾರ್ ಅವರ ರೀತಿ ಬೆಳೆಯುವ ಲಕ್ಷಣವಿದೆ ಎಂದು ಮೆಚ್ಚುಗೆ ಮತ್ತು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಮೂಗು ಸುರೇಶ್.
ಫೈರ್ ಫ್ಲೈ ಚಿತ್ರದಲ್ಲಿ ಎಲ್ಲರೂ ಹೊಸಬರು. ತಂಡ ಬೆಳಿಬೇಕು ಎನ್ನುವ ಉತ್ಸಾಹವಿದೆ. ಜೊತೆಗೆ ಶ್ರದ್ದೆಯಿಂದ ಕೆಲಸ ಮಾಡ್ತಾರೆ. ಜೊತೆಗೆ ಅವರಲ್ಲಿ ಹೊಂದಾಣಿಕೆ ಇದೆ. ಇದು ಇಷ್ಟವಾಯಿತು. ಮೈಸೂರು ಮತ್ತು ಕನಕಪುರದಲ್ಲಿ ಕೆಲಸ ಮಾಡುವಾಗ ಹೂ ತೋಟದಲ್ಲಿ ರಾತ್ರಿ ಚಿತ್ರೀಕರಣ ಮಾಡುವಾದ ತುಂಬಾ ಚೆಳಿ ಇತ್ತು. ನಿದ್ದೆ ಬರ್ತಾ ಇತ್ತು. ನಿರ್ದೇಶಕರು ಲೈಟ್ಸ್ ಆನ್ ಅನ್ನುತ್ತಿದ್ದಂತೆ ಹೊಸ ಲೋಕ ಸೃಷ್ಠಿ ಆಗೋದು, ನಟನೆ ಮಾಡಲು ತುಂಬಾ ಹುರುಪು ಬರುತ್ತಿತ್ತು ಎಂದಿದ್ದಾರೆ.
ನಿರ್ದೇಶಕರೂ ಕೂಟ ನಟರಾಗಿರುವ ಹಿನ್ನೆಲೆಯಲ್ಲಿ ಎಷ್ಟು ಬೇಕೋ ಅಷ್ಟು ಚಿತ್ರೀಕರಣ ಮಾಡುತ್ತಿದ್ದರು ಜೊತೆಗೆ ಚಿತ್ರೀಕರಣಕ್ಕೆ ತುಂಬಾ ಪ್ಲಾನ್ ಮಾಡಿಕೊಂಡಿದ್ದರು ನನ್ನ ನಟನೆ ಹೇಗೆ ಬರುತ್ತಿದೆ ಎನ್ನುವುದನ್ನು ಛಾಯಾಗ್ರಾಹಕರು ತುಂಬಾ ಚೆನ್ನಾಗಿ ಸೆರೆ ಹಿಡಿಯುತ್ತಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹೊಸ ಅಯಾಮ ಸೃಷ್ಠಿಯಾಗುವ ವಿಶ್ವಾಸವಿದೆ ಎಂದಿದ್ಧಾರೆ ಮೂಗು ಸುರೇಶ್