ಹಿರಿಯ ನಿರ್ದೇಶಕ ಸಾಯಿ ಪ್ರಕಾಶ್ ಅವರ “ಶ್ರೀ ಸತ್ಯಸಾಯಿ ಅವತಾರ ” ಚಿತ್ರ ಸದ್ದಿಲ್ಲದೆ ಆರಂಭ
ಹಿರಿಯ ನಿರ್ದೇಶಕ ಓಂಸಾಯಿ ಪ್ರಕಾಶ್ ಅವರು ಸಾಯಿಬಾಬಾ ಅವರ ಪರಮ ಭಕ್ತರು ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಬಾಬಾ ಅವರ ಮೇಲಿನ ಗೌರವದ ಪ್ರತೀಕವಾಗಿ ಓಂಸಾಯಿ ಪ್ರಕಾಶ್ ಅವರು ಹೊಸ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಅದುವೇ ” ಶ್ರೀ ಸತ್ಯ ಸಾಯಿ ಅವತಾರ”.
ಪುಟ್ಟಪರ್ತಿ ಸೇರಿದಂತೆ ಹಲವು ಕಡೆ ಈಗಾಗಲೇ ಚಿತ್ರೀಕರಣ ಆರಂಭವಾಗಿದೆ. ಮುಂದಿನ ವರ್ಷ ಸಾಯಿಬಾಬ ಅವರ ಶತಮಾನೋತ್ಸವ ಇರುವ ಹಿನ್ನೆಲೆಯಲ್ಲಿ ಆಸಮಯಲ್ಲಿ ಚಿತ್ರ ಬಿಡುಗಡೆ ಮಾಡಲು ತಂಡ ಯೋಚನೆ ಹಾಕಿಕೊಂಡಿದ್ದಾರೆ.
” ಸಾಮ್ರಾಟ್ ಮಾಂಧಾತ” ಚಿತ್ರತಂಡ ಹರಸಲು ಬಂದಿದ್ದ ಹಿರಿಯ ನಿರ್ದೇಶಕ ಓಂಸಾಯಿ ಪ್ರಕಾಶ್ ಅವರು ಸಾಯಿಬಾಬ ಅವರ ಕುರಿತ ಅವತಾರಗಳನ್ನು ಚಿತ್ರದ ಮೂಲಕ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ.
ಇದು ಸಾಯಿಪ್ರಕಾಶ್ ಅವರ 106 ನೇ ಚಿತ್ರ ” ಶ್ರೀಸತ್ಯಸಾಯಿ ಅವತಾರ. ಸಾಯಿಬಾಬಾ ಅವರ ಭಕ್ತರು ವಿಶ್ವದ ಎಲ್ಲಾ ದೇಶಗಳಲ್ಲಿ ಇರುವ ಹಿನ್ನೆಲೆಯಲ್ಲಿ ಪ್ಯಾನ್‍ವಲ್ರ್ಡ್ ಸಿನಿಮಾವನ್ನು ತೆರೆಗೆ ಕಟ್ಟಿಕೊಡಲು ತಯಾರಿ ಮಾಡಲಾಗುತ್ತಿದೆ. ಸದ್ಯ ಬಾಲ ಬಾಬನ ಪಾತ್ರದ ಚಿತ್ರೀಕರಣ ಪೂರ್ಣಗೊಂಡಿದೆ ಎಂದು ಮಾಹಿತಿ ಹಂಚಿಕೊಂಡರು.
ಬಾಬಾನ ಪಾತ್ರಕ್ಕೆ ಮೂರು ಮಂದಿಯನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ ಸೂಕ್ತರಾದವನ್ನು ಅದ್ಯದಲ್ಲಿಯೇ ಆಯ್ಕೆ ಮಾಡಲಾಗುವುದು. ಚಿತ್ರದಲ್ಲಿ ಹಿರಿಕಿರಿಯ ಕಲಾವಿದರದಂಡು ಚಿತ್ರದಲ್ಲಿದೆ. ಹೊಸಬರಿಗೆ ಹೆಚ್ಚು ಅವಕಾಶ ಮಾಡಿಕೊಡಲಾಗಿದೆ. ಜಗತ್ತಿನೆಲ್ಲೆಡೆ ಬಾಬಾ ಭಕ್ತರು ಇರುವ ಹಿನ್ನೆಲೆಯಲ್ಲಿ ಎಲ್ಲರಿಗೂ ಚಿತ್ರ ಇಷ್ಟವಾಗಲಿದೆ. ಸದ್ಯದಲ್ಲಿಯೇ ಇನ್ನಷ್ಟು ಮಾಹಿತಿ ಹಂಚಿಕೊಳ್ಳಲಾಗುವುದು ಎಂದರು.
ಸಾಯಿಬಾಬಾ ಅವರ ಪವಾಡಗಳ ಕುರಿತು ಅನೇಕ ಚಿತ್ರಗಳು ತೆರೆಗೆ ಬಂದಿವೆ. ಇದುವರೆಗೂ ಬಂದಿರದ ಅಪರೂಪದ ಕಥೆಯನ್ನು ಮುಂದಿಟ್ಟುಕೊಂಡು ” ಶ್ರೀಸತ್ಯಸಾಯಿ ಅವತಾರ ” ಚಿತ್ರವನ್ನು ಓಂ ಸಾಯಿ ಪ್ರಕಾಶ್ ನಿರ್ದೇಶನ ಮಾಡುತ್ತಿದ್ದು ಅದು ಅವರ 106ನೇ ನಿರ್ದೇಶನದ ಚಿತ್ರ.