ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ನಟಿಸಿದ್ದು ನನ್ನ ಅದೃಷ್ಠ: ನಟಿ ಶರಣ್ಯ ಶೆಟ್ಟಿ ಖುಷಿ

“ಕೃಷ್ಣಂ ಪ್ರಣಯ ಸಖಿ” ಚಿತ್ರ ಇದೇ 15 ರಂದು ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ನಟ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಕನ್ನಡದ ಪ್ರತಿಭಾನ್ವಿತ ನಟಿ ಶರಣ್ಯ ಶೆಟ್ಟಿ ಕೂಡ ನಟಿಸಿದ್ದಾರೆ. ಈ ಚಿತ್ರದ ಮೂಲಕ ಚಿತ್ರರಂಗದಲ್ಲಿ ಭದ್ರನೆಲೆ ಕಂಡುಕೊಳ್ಳುವ ವಿಶ್ವಾಸದಲ್ಲಿದೆ.
“ಕೃಷ್ಣಂ ಪ್ರಯಣ ಸಖಿ” ಚಿತ್ರದಲ್ಲಿ ಮಾಳವಿಕ ನಾಯರ್ ಮತ್ತು ಶರಣ್ಯ ಶೆಟ್ಟಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಹಾಡು ಬಿಡುಗಡೆ ವೇಳೆ ಮಾತಿಗಿಳಿದ ನಟಿ ಶರಣ್ಯ ಶೆಟ್ಟಿ ಮಾತನಾಡಿ, “ದ್ವಾಪರ” ಹಾಡು ಮತ್ತೆ ಮತ್ತೆ ಗುನುಗುವಂತೆ ಮಾಡಿದೆ, ಜೇನ ಧನಿಯಲ್ಲಿ ಹಾಡು ಮಲಗಲೂ ಕೂಡ ಬಿಡುತ್ತಿಲ್ಲ ಅಷ್ಟು ಕಾಡುತ್ತಿದೆ. ಗಾಯಕ ಜಸ್‍ಕರಣ್ ಸಿಂಗ್ ಧ್ವನಿ ಚೆನ್ನಾಗಿದೆ. ಚಂದನ್ ಶೆಟ್ಟಿ ಅವರ ಹಾಡಿರುವ “ಮೈ ಮ್ಯಾರೇಜ್ ಈಸ್ ಫಿಕ್ಸ್” ಕೂಡ ಉತ್ತಮವಾಗಿ ಮೂಡಿ ಬಂದಿದೆ. ಈ ರೀತಿಯ ಸಂಗೀತಮಯ ಚಿತ್ರದಲ್ಲಿ ನಾನೂ ಕೂಡ ಒಬ್ಬ ನಾಯಕಿಯಾಗಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿಕೊಂಡರು.

ಚಿತ್ರದಲ್ಲಿ ನಟ ಗಣೇಶ್ ಅದ್ಬುತವಾಗಿ ಕಾಣಿಸಿಕೊಂಡಿದ್ದಾರೆ, ಅವರ ಹಾಡು ನಟನೆ, ಮೋಡಿ ಮಾಡುವಂತಿದೆ. ಚಿತ್ರದ ಆರಂಭದಲ್ಲಿಯೇ ನಿರ್ದೇಶಕ ಶ್ರೀನಿವಾಸರಾಜು ಅವರು ಚಿತ್ರದ ಪ್ರತಿಯೊಂದು ಹಾಡಗಳು ಹಿಟ್ ಆಗಲಿವೆ. ಮತ್ತೊಂದು ಸಂಗೀತಮಯ ಚಿತ್ರವಾಗಲಿದೆ ಎಂದು ಹೇಳಿದ್ದರು. ಹೇಳಿದಂತೆ ಮಾಡಿ ತೋರಿಸಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದಗಳು ಎಂದರು.

ಕೃಷ್ಣಂ ಪ್ರಯಣ ಸಖಿ ಚಿತ್ರದ ಮೂರು ಹಾಡು ಈಗಾಗಲೇ ಹಿಟ್ ಆಗಿವೆ. ಅದರ ಜೊತೆಗೆ ಈಗ “ ಹೇ ಗಗನವೇ” ಹಾಡು ಬಿಡುಗಡೆ ಆಗಿದೆ. ನಾನು ಕಾಣಿಸಿಕೊಂಡಿರುವ ಹಾಡನ್ನು ಹಿರಿಯ ಗೀತರಚನೆಕಾರರಾದ ಜಯಂತ್ ಕಾಯ್ಕಿಣಿ ಅವರು ಸಾಹಿತ್ಯ ಬರೆದಿದ್ದಾರೆ, ಆ ಹಾಡಿಗಾಗಿ ಎದುರು ನೋಡುತ್ತಿದ್ದೇನೆ ಎಂದು ಮಾಹಿತಿ ಹಂಚಿಕಂಡರು.
ಗಣೇಶ್ ಜೊತೆ ನಟನೆ ಕನಸು ನನಸಾದ ಸಮಯ:

“ಕೃಷ್ಣಂ ಪ್ರಯಣ ಸಖಿ” ಚಿತ್ರದಲ್ಲಿ ಜಾಹ್ನವಿ ಎನ್ನುವ ಬೋಲ್ಡ್ ಮತ್ತು ಗ್ಲಾಮರಸ್ ಹುಡುಗಿ ಪಾತ್ರ ಮಾಡಿದ್ದೇನೆ. ಚಿತ್ರದಲ್ಲಿ ಹಿರಿಯ ನಟ ಅವಿನಾಶ್ ಅವರು ನನ್ನ ತಂದೆಯ ಪಾತ್ರ ಮಾಡಿದ್ದಾರೆ. ಮಹಿಳಾ ಉದ್ಯಮಿ ಪಾತ್ರ. ಈ ಸಿನಿಮಾದಲ್ಲಿ ಜಯಂತ್ ಕಾಯ್ಕಿಣಿ ಅವರು ಬರೆದಿದಿರುವ ಹಾಡಿನಲ್ಲಿ ಕಾಣಿಸಿಕೊಂಡಿದ್ದೇನೆ, ಈ ಹಾಟ್, ರೋಮಾಂಟಿಕ್, ಬೋಲ್ಡ್ ಅಂಡ್ ಬ್ಯೂಟಿಫುಲ್ ಹಾಡು ಎಂದು ಮಾಹಿತಿ ನೀಡಿದರು.

ಸಿನಿಮಾದಲ್ಲಿ 45 ಕ್ಕೂ ಹೆಚ್ಚು ಹಿರಿಯ ಕಲಾವಿದರಿಂದ್ದರು ಅವರ ಜೊತೆ ನಟಿಸಿದ್ದು ಒಳ್ಳೆಯ ಅನುಭವ, ಗಣೇಶ್ ಸಾರ್ ಅವರನ್ನು ನೇರವಾಗಿ ನೋಡುವುದೇ ಖುಷಿ. ಅಂತಹುದರಲ್ಲಿ ಅವರ ಜೊತೆ ನಟಿಸಿ, ಹಾಡಿನಲ್ಲಿ ಕಾಣಿಸಿಕೊಳ್ಳುವುದು ಕನಸು ನನಸಾದ ಸಮಯ. ರೋಮಾಂಟಿಕ್ ಹಾಡಿನಲ್ಲಿ ಅದ್ಬುತವಾಗಿ ಕಾಣಿಸಿಕೊಳ್ಳುತ್ತಾರೆ.

ನಾನೂ ಅವರೊಂದಿಗೆ ಹಾಡಿನಲ್ಲಿ ಹೆಜ್ಜೆ ಹಾಕಿದ್ದು ಖುಷಿ ಕೊಟ್ಟಿದೆ. ನನ್ನ ಪಾತ್ರವನ್ನು 20 ದಿನಗಳ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೆ ಬೆಂಗಳೂರು ಮತ್ತು ವಿಯೆಟ್ನಾಂನಲ್ಲಿ ಹಾಡಿನ ಚಿತ್ರೀಕರಣ ನಡೆದಿದೆ. ಇದೇ 15 ರಂದು ಚಿತ್ರ ತೆರೆಗೆ ಬರಲು ಸಜ್ಜಾಗಿದೆ ಸಹಕಾರ ಇರಲಿ ಎಂದು ಕೇಳಿಕೊಂಡರು.