ಮನರಂಜನೆಯ ಮರುಕಲ್ಪನೆಯ ಹೊಸ ಆವಿಷ್ಕಾರ “ಜೀ ‘ ವಾಟ್ಸ್ ನೆಕ್ಸ್ಟ್” ನಲ್ಲಿ
ಎಲ್ಲರ ಅಚ್ಚುಮೆಚ್ಚಿನ ಮಾಧ್ಯಮ ಸಂಸ್ಥೆ ಜೀû 854 ಮಿಲಿಯನ್ ವೀಕ್ಷಕರನ್ನು 208 ಮಿಲಿಯನ್ ಮನೆಗಳ ಮೂಲಕ ತಲುಪಿ ತನ್ನ ಹೊಸ ಬ್ರ್ಯಾಂಡ್ ಟ್ಯಾಗ್ ಲೈನ್ “ನಿಮ್ಮ ನಂಬಿಕೆಯ “ಝೆಡ್” ಅನ್ನುವ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗಿದೆ. ಈ ಭಾಂಧವ್ಯಕ್ಕೆ ಮತ್ತಷ್ಟು ಪುಷ್ಟಿಗೊಳಿಸಲು “ಜೀû ‘ವಾಟ್ಸ್ ನೆಕ್ಸ್ಟ್” ಅನ್ನುವ ಮೂಲಕ ನೆಟ್ವರ್ಕ್ ಟ್ರಾನ್ಸ್ ಫಾರ್ಮೇಷನ್ ಕಂಟೆಂಟ್ ತಂತ್ರಜ್ಞಾನದ ಪವರ್ ಹೌಸ್ ಮೂಲಕ ಮಾಡಲು ಹೊರಟಿದೆ.
“ಜೀû ‘ವಾಟ್ಸ್ ನೆಕ್ಸ್ಟ್” ಇಂಡಸ್ಟ್ರಿಯಲ್ಲಿಯೇ ಮೊದಲ ಪ್ರಯತ್ನವಾಗಿದ್ದು ಜೀû ತನ್ನ ಪಾರ್ಟರ್ ಜೊತೆಗೂಡಿ ಮನರಂಜನೆಯ ಮರುಕಲ್ಪನೆ ಮಾಡುತ್ತಿದೆ. ಇದರಲ್ಲಿ ಜೀûಯ ಕಂಟೆಂಟ್ ಹೇಗೆ ನಿರಾಯಾಸವಾಗಿ ಡಿವೈಸ್‍ಗಳಲ್ಲಿ ಎಲ್ಲಾ ಪ್ಲಾಟ್ಫಾರ್ಮ್ ಗಳಲ್ಲಿ ಕ್ರಿಯೇಟಿವಿಟಿ ಮತ್ತು ತಂತ್ರಜ್ಞಾನದ ಜೊತೆಗೆ ನಮ್ಮ ಸಂಸ್ಕೃತಿ ಎಲ್ಲವನ್ನು ಹೇಗೆ ಸರಿದೂಗಿಸುತ್ತದೆ ಎಂಬುದನ್ನು ತೋರಿಸಿಕೊಡುತ್ತದೆ.
ಮಾರುಕಟ್ಟೆದಾರರಿಗೆಒಳ್ಳೆಯ ಅವಕಾಶವಾಗಿದ್ದು ಇಲ್ಲಿ 30 ಸೆಕೆಂಡ್‍ಗಳ ಜಾಹಿರಾತು ಹೇಗೆ ಕ್ಯಾರೆಕ್ಟರ್ ಗಳಾಗಿ ಬದಲಾಗುತ್ತದೆ ಮತ್ತು ಜೀ ಇದನ್ನು ಹೇಗೆ ವಿನ್ಯಾಸ ಗೊಳಿಸುತ್ತದೆ ಎಂದು ತೋರಿಸಿಕೊಡುವುದಲ್ಲದೇ ಭಾರತದ ಮನರಂಜನೆಯ ಮುಂದಿನ ಭವಿಷ್ಯಕ್ಕೆ ಪಾರ್ಟ್ನರ್ ಗಳನ್ನೂ ಆಹ್ವಾನಿಸುತ್ತದೆ.
“ಜೀû ‘ವಾಟ್ಸ್ ನೆಕ್ಸ್ಟ್” ಮೂಲಕ ‘ಜೀ ಪವರ್’ ಮತ್ತು ‘ಜೀ ಸೋನಾರ್ ಬಾಂಗ್ಲಾ ವಾಹಿನಿ ಬಿಡುಗಡೆ ಮಾಡಲು ಜೀ ಮುಂದಾಗಿದೆ. ಜೀ ಪವರ್ ಕರ್ನಾಟಕದ ಯುವ ಪೀಳಿಗೆಯ ಪ್ರೇಕ್ಷಕರಿಗಾಗಿ ವಿನ್ಯಾಸಗೊಳಿಸಲಾದ ಕನ್ನಡ ಹೈಬ್ರಿಡ್ ಚಾನೆಲ್ ಆಗಿದೆ. ಹೊಸ ಚಾನೆಲ್ ದಿಟ್ಟ, ಯುವಪೀಳಿಗೆಯ ಮಹತ್ವಾಕಾಂಕ್ಷೆಯ ಕಥೆಗಳ ಮೂಲಕ ಕನ್ನಡಿಗರ ಮನಗೆಲ್ಲಲು ಸಜ್ಜಾಗಿದೆ.
ಆಗಸ್ಟ್ ಕರ್ನಾಟಕದ ಎಲ್ಲಾ ಜಿಲ್ಲೆಗಳನ್ನು ಮಲ್ಟಿಮೀಡಿಯಾ ಅಭಿಯಾನದೊಂದಿಗೆ ಅಧಿಕೃತವಾಗಿ ಲಾಂಚ್ ಆಗಲಿದೆ. ಇನ್ನು ಈ ಹೊಸ ಚಾನೆಲ್ ನಲ್ಲಿ ಶುರುವಿಗೆ 5 ಧಾರಾವಾಹಿಗಳು, 1 ದಿನನಿತ್ಯ ಪ್ರಸಾರ ಆಗುವ ರಿಯಾಲಿಟಿ ಶೋ, ಜೊತೆಗೆ ದಿನವೂ ಸಿನೆಮಾ ಪ್ರಸಾರ ಆಗಲಿದೆ.
ದೇಶದಾದ್ಯಂತ 11 ಭಾಷೆಗಳಲ್ಲಿ 50 ಚಾನೆಲ್ ಗಳೊಂದಿಗೆ ಮನರಂಜನೆಯಲ್ಲಿ ವೀಕ್ಷಕರಿಗೆ ಮೊದಲ ಆಯ್ಕೆ ಆಗಿರುವ ಜೀ ನೆಟ್‍ವರ್ಕ್ ಅನ್ನು ಹೈಲೈಟ್ ಮಾಡಲಾಗಿದೆ. ಜೀ ತನ್ನ ವಿಭಿನ್ನ ಕಥೆಗಳ ಮೂಲಕ ಭಾರತದ ಪ್ರತಿಯೊಂದು ಭಾಷೆಯ ವೀಕ್ಷಕರಿಗೂ ಭಾವನಾತ್ಮಕವಾಗಿ ಹಾಗು ದೃಶ್ಯಾತ್ಮಕವಾಗಿ ಹತ್ತಿರವಾಗಿದೆ. ಈ ಕಥೆಗಳಲ್ಲಿ ನಮ್ಮ ಜೀವನದ ಮೇಲೆ ಪ್ರಭಾವ ಬೀರುವ ಕೆಲವು ಪಾತ್ರಗಳು ಕೂಡ ಇರಲಿವೆ.

ಜೀ ಪವರ್ ಬಿಡುಗಡೆಯ ಕುರಿತು ಮಾತನಾಡಿದ ಜೀ ದಕ್ಷಿಣ ಮತ್ತು ಪಶ್ಚಿಮ ವಿಭಾಗದ ಮುಖ್ಯ ಕ್ಲಸ್ಟರ್ ಅಧಿಕಾರಿ ಸಿಜು ಪ್ರಭಾಕರನ್, “ಕರ್ನಾಟಕದಲ್ಲಿ ಕನ್ನಡಿಗರ ಮನದಾಳ ಅರಿತು ಅವರಿಗೆ ತಕ್ಕಂತೆ ಕನ್ನಡದ ಸಂಸ್ಕೃತಿಗೆ ಹೊಂದುವಂತೆ ಕಥೆಗಳನ್ನು ಮಾಡಿ ಜೀû ಕನ್ನಡ ಕಿರುತೆರೆಯ ಲೀಡರ್ ಆಗಿ ಹೊರಹೊಮ್ಮಿದೆ. ಕನ್ನಡಿಗರು ಎಲ್ಲಾ ತರಹದ ಕಂಟೆಂಟ್ ಗಳನ್ನೂ ಹೃತ್ಪೂರ್ವಕವಾಗಿ ಸ್ವಾಗತಿಸುತ್ತಾರೆ ಮತ್ತು ನಮಗೆ ಇದರಿಂದ ಮತ್ತಷ್ಟು ಹೆಚ್ಚಿನ ಪ್ರಯತ್ನಕ್ಕೆ ಕೈಹಾಕುವ ಹುಮ್ಮಸ್ಸು ಬರುತ್ತದೆ ಎನ್ನುವ ನಂಬಿಕೆ ಇದೆ ಎಂದಿದ್ದಾರೆ.
ಜೀ ವಾಹಿನಿ ಪೂರ್ವ, ಉತ್ತರ ಮತ್ತು ಪ್ರೀಮಿಯಂ ಕ್ಲಸ್ಟರ್‍ನ ಮುಖ್ಯ ಕ್ಲಸ್ಟರ್ ಅಧಿಕಾರಿ ಸಾಮ್ರಾಟ್ ಘೋಷ್ ಮಾತನಾಡಿ “ಪಶ್ಚಿಮ ಬಂಗಾಳ ವಿಶೇಷವಾಗಿ ಬಂಗಾಳಿ ಸಾಮಾನ್ಯ ಮನರಂಜನಾ ವಿಭಾಗದಲ್ಲಿ ಬೆಳೆಯುತ್ತಿರುವ ಟಿವಿ ಮಾರುಕಟ್ಟೆಯಾಗಿದೆ. ನಾವೀನ್ಯತೆ ಮತ್ತು ಹೊಸ ಮನರಂಜನೆಗೆ ಸಿದ್ಧವಾಗಿದೆ ಎಂದು ಹೇಳಿದರು.

