ಕೌಟಂಬಿಕ ಧಾರಾವಾಹಿ ‘ನಿನಗಾಗಿ’ಯಲ್ಲಿ ಮಹತ್ವದ ತಿರುವು
ಕುಟುಂಬದ ಸದಸ್ಯರೆಲ್ಲ ಒಂದಾಗಿ ಕುಳಿತು ನೋಡುವ “ನಿನಗಾಗಿ” ಧಾರಾವಾಹಿಯ ಕತೆ ಹೊಸತೊಂದು ತಿರುವು ಪಡೆದಿದೆ. ‘ಹೊಸ ಪ್ರಪಂಚ ಹೊಸ ಸವಾಲು ಹತ್ತಾರು ತಿರುವುಗಳನ್ನು ವೀಕ್ಷಕರ ಮುಂದೆ ಇಡಲು ಸಜ್ಜಾಗಿದೆ.
ಪ್ರೊಮೋ ನೋಡಿದಾಗ ಧಾರಾವಾಹಿ ಬೇರೊಂದು ಹೊಸ ಕತೆ ಹೇಳುವಂತೆ ಅನ್ನುವಂತೆ ಭಾಸವಾಗುತ್ತದೆ. ಇದುವರೆಗೆ ಜೀವಾ – ರಚನಾ – ವಜ್ರೇಶ್ವರಿ ಕತೆ ಹೇಳುತ್ತಿದ್ದ ‘ನಿನಗಾಗಿ’ ಹೊಸತೊಂದು ಮಾರ್ಗ ಹಿಡಿದಂತೆ ಅನ್ನಿಸಲಿದೆ. ಜೀವಾನ ತಂದೆ ಶ್ರೀಮಂತ ಆಭರಣದ ವ್ಯಾಪಾರಿಯಾಗಿದ್ದು ಕುಟುಂಬದ ಕತೆ ಹೇಳಲಾಗುತ್ತಿದೆ.
ಜೀವಾ ತನ್ನ ತಂದೆಯ ಆಸೆ ಈಡೇರಿಸುವ ಶಪಥ ಮಾಡುತ್ತಿರುವಾಗ ರಚನಾ ಕೂಡಾ ಜೊತೆಯಾಗುತ್ತಾಳೆ. ಹೀಗೆ ಅವರಿಬ್ಬರ ಹೊಸ ಪ್ರಪಂಚ, ಹೊಸ ಸವಾಲುಗಳ ಸಾಧ್ಯತೆಯನ್ನು ಪ್ರೊಮೋ ಹೇಳುತ್ತಿದೆ. ಕುತೂಹಲದ ವಿಷಯವೆಂದರೆ ನಟ ಶ್ರೀನಿವಾಸ ಪ್ರಭು ಬಹಳ ದಿನಗಳ ನಂತರ ಜೀವಾನ ತಂದೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
‘ಇಂಡಿಯನ್’ ರಿಯಾಲಿಟಿ ಶೋ ಮತ್ತು ‘ಮೇಘ ಮಯೂರಿ’ ಧಾರಾವಾಹಿಯಲ್ಲಿ ಮಿಂಚಿದ್ದ ಪ್ರದೀಪ ‘ನಿನಗಾಗಿ’ ಧಾರಾವಾಹಿಯಿಂದ ಮತ್ತೆ ಕಿರುತೆರೆಗೆ ಮರಳಿದ್ದಾರೆ. ವಾರದ ಏಳೂ ದಿನ ಪ್ರತಿರಾತ್ರಿ ಎಂಟು ಗಂಟೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ‘ನಿನಗಾಗಿ’ ಧಾರಾವಾಹಿ ಹೊಸ ತಿರುವುಗಳಿಂದ ಜನರ ಮನವನ್ನು ಗೆಲ್ಲಲು ಸಜ್ಜಾಗಿದೆ.

