“ಅಪ್ಪು ಕಪ್ ಸೀಸನ್ 3” ಜರ್ಸಿ ಅನಾವರಣ : ಗೋವಾದಲ್ಲಿ ಫೈನಲ್ಸ್
ಚೇತನ್ ಸೂರ್ಯ ಅವರ ಸಂಸ್ಥೆಯ ಸಹಯೋಗದೊಂದಿಗೆ “ಅಪ್ಪು ಕಪ್” ಎರಡು ಸೀಸನ್ ಅದ್ದೂರಿಯಾಗಿ ನಡೆದಿದೆ. ಲೀಗ್‍ನ ಪೂರ್ವಭಾವಿಯಾಗಿ “ಅಪ್ಪು ಸಂಭ್ರಮ” ಹಾಗು ಜರ್ಸಿ ಅನಾವರಣ ಮಾಡಲಾಯಿತು. ವಿಧಾನ ಪರಿಷತ್ ಸದಸ್ಯ ಟಿ ಎ ಸರವಣ ಸೇರಿದಂತೆ ಗಣ್ಯರು ಈ ಕ್ಷಣಕ್ಕೆ ಹಾಜರಿದ್ದರು.

ಟಿ. ಎ ಸರವಣ ಮಾತನಾಡಿ ಕಳೆದ ಎರಡು ಸೀಸನ್ ಗಳನ್ನು ಅದ್ದೂರಿಯಾಗಿ ನಡೆದಿದ್ದರು ಮೂರನೇ ಸೀಸನ್ ಕೂಡ ಯಶಸ್ವಿಯಾಗಲಿದೆ ಎನ್ನುವ ಭರವಸೆ ಇದೆ. ಸಾಯಿ ಗೋಲ್ಡ್ ಸಂಸ್ಥೆಯಿಂದ ಹತ್ತು ಲಕ್ಷ ರೂಪಾಯಿಗಳನ್ನು ಈ ಸೀಸನ್ ಗೆ ನೀಡುತ್ತಿದ್ದೇನೆ. ಜೊತೆಗೆ ಭಾಗವಹಿಸುವ ಪ್ರತಿಯೊಬ್ಬರಿಗೂ ಸಾಯಿ ಗೋಲ್ಡ್ ಪ್ಯಾಲೆಸ್ ವತಿಯಿಂದ ಉಡುಗೊರೆ ನೀಡಲಾಗುವುದು ಎಂದರು
ಅಪ್ಪು ಕಪ್” ನ ಆಯೋಜಕ ಚೇತನ್ ಸೂರ್ಯ ಮಾತನಾಡಿ, ಹತ್ತು ಕೆಜಿ ಕೂಕವಿರುವ ಅಪ್ಪು ಪ್ರತಿಮೆಯ ಬೆಳ್ಳಿ ಕಪ್ ಸತತ ಮೂರು ಸೀಸನ್ ಗಳನ್ನು ಗೆದ್ದ ತಂಡದ ಪಾಲಾಗುತ್ತದೆ. ಬಾರಿ ಸದ್ಯದಲ್ಲೇ ಬೆಂಗಳೂರಿನಲ್ಲಿ ಲೀಗ್ ಪಂದ್ಯಗಳು ಆರಂಭವಾಗಲಿದೆ. ಫೈನಲ್ ಪಂದ್ಯ ಗೋವಾದಲ್ಲಿ ನಡೆಯಲಿದೆ. “ಅಪ್ಪು ಕಪ್” ಯಶಸ್ವಿಯಾಗಲು ಸಹಕಾರ ನೀಡುತ್ತಿರುವ ಅಶ್ವಿನಿ ಪುನೀತ್ ರಾಜಕುಮಾರ್, ಸಾಯಿ ಗೋಲ್ಡ್ ಪ್ಯಾಲೆಸ್ ನ ಸರವಣ ಅವರು ಸೇರಿದಂತೆ ಪ್ರತಿಯೊಬ್ಬರಿಗೂ ಧನ್ಯವಾದ ಎಂದರು
ತಂಡಗಳ ವಿವರ

- “ವೀರ ಕನ್ನಡಿಗ ಬುಲ್ಸ್”
ಮಾಲೀಕರು – ಮೊನೀಶ್ ಸಿ,
ನಾಯಕ – ದಿಲೀಪ್ ರಾಜ್
ಸ್ಟಾರ್ ರಾಯಭಾರಿ ಸೃಜನ್ ಲೋಕೇಶ್
- ಬಿಂದಾಸ್ ರಾಯಲ್ ಚಾಲೆಂಜರ್ಸ್
ಮಾಲೀಕ -ಪರಿತೋಷ್ ಮೂರ್ತಿ
ನಾಯಕ – ದಿಗಂತ್
ಸ್ಟಾರ್ ರಾಯಭಾರಿ – ಅವಿನಾಶ್ ದಿವಾಕರ್
- “ಜಾಕಿ ರೈಡರ್ಸ್”
ಮಾಲೀಕರು- ಶ್ರೀಹರ್ಷ
ನಾಯಕ – ಮನೋರಂಜನ್ ರವಿಚಂದ್ರನ್
ಸ್ಟಾರ್ ರಾಯಭಾರಿ – ಪ್ರಿಯಾಂಕ ಉಪೇಂದ್ರ
- “ಮೌರ್ಯ ಸ್ಟ್ರೈಕರ್ಸ್”
ಮಾಲೀಕರು – ವಿಜೇತ್
ನಾಯಕ – ಪ್ರಮೋದ್ ಶೆಟ್ಟಿ
ಸ್ಟಾರ್ ರಾಯಭಾರಿ – ರಾಜವರ್ಧನ್
* ಯುವರತ್ನ ಚಾಂಪಿಯನ್ಸ್ “
ಮಾಲೀಕರು – ದಿವ್ಯ ರಂಗೇನಹಳ್ಳಿ
ನಾಯಕ – ಇಂದ್ರಜಿತ್ ಲಂಕೇಶ್
ಸ್ಟಾರ್ ರಾಯಭಾರಿ – ಧನ್ಯ ರಾಮಕುಮಾರ್
- ಪವರ್ ಪೈತಾನ್ಸ್
ಮಾಲೀಕರು – ರೂಪ
ನಾಯಕ – ಸದಾಶಿವ ಶೆಣೈ
ಸ್ಟಾರ್ ರಾಯಭಾರಿ – ಸಿಂಧೂ ಲೋಕನಾಥ್
- ಗಂಧದಗುಡಿ ವಾರಿಯರ್ಸ್
ಮಾಲೀಕ- ಸತೀಶ್ ಎಂ,
ನಾಯಕ – ಹರೀಶ್ ನಾಗರಾಜ್
ಸ್ಟಾರ್ ರಾಯಭಾರಿ _ ವಿಕ್ರಮ್ ರವಿಚಂದ್ರನ್
- “ಜೇಮ್ಸ್ ವಾರಿಯರ್ಸ್”
ಮಾಲೀಕ- ಸತ್ಯ
ನಾಯಕ – ರವಿಚೇತನ್
ಸ್ಟಾರ್ ರಾಯಭಾರಿ – ಅನಿರುದ್ಧ ಜಟ್ಕರ್
- ದೊಡ್ಮನೆ ಡ್ರಾಗನ್ಸ್”
ಮಾಲೀಕರು – ಸುರೇಶ್ ಮತ್ತು ನಿರಂತರ ಗಣೇಶ್
ನಾಯಕ ಪ್ರವೀಣ್ ತೇಜ್
ಸ್ಟಾರ್ ರಾಯಭಾರಿ – ವಸಿಷ್ಠ ಸಿಂಹ
*”ಅರಸು ಹಂಟರ್ಸ್”
ಮಾಲೀಕ- ಆನಂದ್
ನಾಯಕ – ಭುವನ್ ಗೌಡ
ಸ್ಟಾರ್ ರಾಯಭಾರಿ – ಇಮ್ರಾನ್ ಸರ್ದಾರಿಯಾ

