Arjun Janya's directorial debut "45" will air on Zee5 from January 23rd.

ಅರ್ಜುನ್ ಜನ್ಯ ನಿರ್ದೇಶನದ “45” ಚಿತ್ರ ಜನವರಿ 23ರಿಂದ ಜೀ 5 ನಲ್ಲಿ ಪ್ರಸಾರ - CineNewsKannada.com

ಅರ್ಜುನ್ ಜನ್ಯ ನಿರ್ದೇಶನದ “45” ಚಿತ್ರ ಜನವರಿ 23ರಿಂದ ಜೀ 5 ನಲ್ಲಿ ಪ್ರಸಾರ

ಸೂಪರ್ ಹಿಟ್ “45” ಚಿತ್ರ ಜನವರಿ 23ರಿಂದ ಜೀ 5 ನಲ್ಲಿ ಪ್ರಸಾರವಾಗಲಿದೆ. ವಿಭಿನ್ನ ಕಥೆಗಳನ್ನು ಜನರಿಗೆ ತಲುಪಿಸುವಲ್ಲಿ‌ ಹೆಸರು ವಾಸಿಯಾಗಿರುವ ಜೀ 5, ಇದೀಗ ಬಹಳಷ್ಟು ಹೆಸರು ಮಾಡಿದ ಬಹು ತಾರಾಗಣದ “45” ಚಿತ್ರವನ್ನು ಪ್ರಸಾರ ಮಾಡಲಿದೆ

45″ ಚಿತ್ರ ಘೋಷಣೆಗೊಂಡಾಗಿನಿಂದ, ಬಿಡುಗಡೆಯ ವರೆಗೂ ಜನರಲ್ಲಿ ಒಂದು ಬಗೆಯ ಕುತೂಹಲ ಮೂಡಿಸಿತ್ತು. ಬಿಡುಗಡೆಯ ನಂತರ ತನ್ನ ವಿಭಿನ್ನವಾದ ಕಥಾ ಹಂದರದಿಂದ ಪ್ರೇಕ್ಷಕರ ಕಣ್ಮನ ಸೆಳೆದಿದೆ.

ಸಾಮಾನ್ಯ ಮನುಷ್ಯನ ಜೀವನದಲ್ಲಿ ಒಂದಿಷ್ಟು ಸವಾಲುಗಳು ಎದುರಾದಾಗ, ತನ್ನಲ್ಲೇ ನಡೆಯುವ ನಂಬಿಕೆ ಮತ್ತು ಭಯದ ನಡುವಿನ ಘರ್ಷಣೆ, ಸತ್ಯ ಮತ್ತು ಮಿಥ್ಯ, ಒಳ್ಳೆಯದು ಮತ್ತು ಕೆಟ್ಟದರ ನಡುವಿನ ಯುದ್ಧವನ್ನು “45” ಚಿತ್ರವೂ ಸಾಂಕೇತಿಕವಾಗಿ ಹೇಳುತ್ತದೆ.

ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ‌ ಶೆಟ್ಟಿ, ಕೌಸ್ತುಭಾ ಮಣಿ, ಜಿಶು ಸೇನ್ ಗುಪ್ತಾ ಮುಂತಾದವರ ಅಭಿನಯದ “45” ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಆಕ್ಷನ್ ಕಟ್ ಹೇಳಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ. ಎಂ ರಮೇಶ್ ರೆಡ್ಡಿ ನಿರ್ಮಾಣ ಮಾಡಿದ್ದಾರೆ.

ನಟ ಡಾ ಶಿವರಾಜ್ ಕುಮಾರ್ ಮಾತನಾಡಿ 45 ಒಂದು ವಿಭಿನ್ನವಾದ ಕಥೆಯಾಗಿದೆ. ಜೀವನದಲ್ಲಿ ನಾವು ಮಾಡುವ ಆಯ್ಕೆಗಳು, ನಿರ್ಧಾರಗಳು ಮತ್ತು ಅದರೊಂದಿಗೆ ಬರುವ‌ ಜವಾಬ್ದಾರಿಗಳನ್ನು, ಒಟ್ಟಾಗಿ ಹೇಳುವುದಾದರೆ ನಮ್ಮ ಜೀವನವನ್ನು ಬಿಂಬಿಸುವ ಕಥೆಯಾಗಿದೆ. ಜೀ5ನೊಂದಿಗೆ ನನ್ನ ಒಡನಾಟ ಬಹಳ ವಿಶೇಷವಾದದ್ದು. ಹೊಸ ಕಥೆಗಳಿಗೆ ಉತ್ತೇಜನ ನೀಡುವ ಜೀ 5 ನಂತಹ ಡಿಜಿಟಲ್ ವೇದಿಕೆಯಲ್ಲಿ ಈ ಚಿತ್ರ ಪ್ರಸಾರಗೊಳ್ಳುವುದು ನನಗೆ ಇನ್ನಷ್ಟು ಸಂತೋಷ ತಂದಿದೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ, ಮಾತನಾಡಿ ಚಿತ್ರ ತಾತ್ವಿಕ ಹಾಗೂ ಧಾರ್ಮಿಕ ಮೌಲ್ಯಗಳನ್ನು ಮನರಂಜನಾತ್ಮಕವಾಗಿ ಹೇಳುತ್ತದೆ. ಹೊಸ ರೀತಿಯ ಕಥೆಗಳನ್ನು ಪ್ರೋತ್ಸಾಹಿಸುವ ಜೀ5 ಕನ್ನಡ ಈ ಚಿತ್ರವನ್ನು ಪ್ರಸಾರ ಮಾಡುತ್ತಿರುವುದು ಸಂತಸದ ಸಂಗತಿ. ಈ ಚಿತ್ರವು ಕೇವಲ ಮನರಂಜನೆ ನೀಡುವುದಷ್ಟೇ ಅಲ್ಲದೆ, ಜನರಿಗೆ ಮೌಲ್ಯಗಳನ್ನು ತಿಳಿಸಿ, ಅವರ ಮೇಲೆ ಆಳವಾದ ಪ್ರಭಾವವನ್ನು ಬೀರುತ್ತದೆ ಎಂದಿದ್ದಾರೆ.

ತನ್ನ ವಿಭಿನ್ನವಾದ ಕಥಾ ಹಂದರ, ಹೊಸತನದೊಂದಿಗೆ “45” ಚಿತ್ರ ಜನವರಿ 23ರಿಂದ ಜೀ5ನಲ್ಲಿ ಪ್ರಸಾರವಾಗಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin