ಕದ್ರಿ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಬ್ರೋ ಗೌಡ’ ಪ್ರವೇಶ

ವಿಭಿನ್ನ ಕಥಾಹಂದರದ ರಾಘು' ಹಾಗೂ ಶೆಫ್ ಚಿದಂಬರ’ ಚಿತ್ರಗಳ ಮೂಲಕ ಗಮನ ಸೆಳೆದಿರುವ ನಿರ್ದೇಶಕ ಎಂ. ಆನಂದ್ ರಾಜ್ ,ಶಮಂತ್ ಅವರ ಚೊಚ್ಚಲ ಸಿನಿಮಾಗೆ ಆಕ್ಷನ್-ಕಟ್ ಹೇಳುತ್ತಿದ್ದು, ಈ ಚಿತ್ರಕ್ಕೆ `ಕದ್ರಿ’ ಎಂದು ಶೀರ್ಷಿಕೆ ಇಡಲಾಗಿದೆ.

ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಪ್ರಯೋಗವಾಗಿ ಮೂಡಿಬರುತ್ತಿರುವ `ಕದ್ರಿ’ ಚಿತ್ರವನ್ನು ‘ಕನ್ನಡದ ಜಾನಪದ ಭಯಾನಕ’ ಜಾನರ್‍ನಲ್ಲಿ ನಿರ್ಮಿಸಲಾಗುತ್ತಿದೆ. “ಕಲ್ಪನೆಗೂ ಮೀರಿದ ಕತ್ತಲೆ, ಕಾಲದಿಂದ ಅಚ್ಚಳಿಯದೆ ಉಳಿದಿರುವ ಭಯ” ಎಂಬ ಕುತೂಹಲಕಾರಿ ಅಡಿಬರಹದೊಂದಿಗೆ ಚಿತ್ರತಂಡ ಸಿನಿಮಾವನ್ನು ಘೋಷಿಸಿದ್ದು, ಇದು ಪ್ರೇಕ್ಷಕರಿಗೆ ಹೊಸ ಬಗೆಯ ಭಯಾನಕ ಹಾಗೂ ರೋಚಕ ಅನುಭವ ನೀಡುವ ಸುಳಿವು ನೀಡಿದೆ.

ಚಿತ್ರಕ್ಕೆ ಎಂ. ಆನಂದ್ ರಾಜ್ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಅಷ್ಟೇ ಅಲ್ಲದೆ, ನಾಗರಾಜ್ ಸಿ. ಅವರೊಂದಿಗೆ ಕೈಜೋಡಿಸಿ ಆನಂದ್ ರಾಜ್ ಚಿತ್ರ ನಿರ್ಮಿಸುತ್ತಿದ್ದಾರೆ. ಕಿರುತೆರೆಯಲ್ಲಿ ನಟನೆ ಮತ್ತು ವಿಭಿನ್ನ ಮ್ಯಾನರಿಸಂ ಮೂಲಕ ದೊಡ್ಡ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವ ಶಮಂತ್ ಅವರಿಗೆ, ಜಾನಪದ ಹಾರರ್ ಕಥಾಹಂದರವು ಬೆಳ್ಳಿತೆರೆಯಲ್ಲಿ ಭದ್ರ ಬುನಾದಿ ಹಾಕಿಕೊಡುವ ನಿರೀಕ್ಷೆಯಿದೆ.

`ಕದ್ರಿ’ ಚಿತ್ರಕ್ಕೆ ಅನುಭವಿ ತಂಡವೇ ಕೆಲಸ ಮಾಡುತ್ತಿದೆ. ಚಿತ್ರಕ್ಕೆ ಉದಯ ಲೀಲಾ ಛಾಯಾಗ್ರಹಣವಿದ್ದು, ವಿಜಯೇಂದ್ರ ಜೋಡಿದಾರ ಸಂಭಾಷಣೆ ಬರೆದಿದ್ದಾರೆ. ಸೂರಜ್ ಜೋಯಿಸ್ ಮತ್ತು ಜುಬೈರ್ ಮುಹಮ್ಮದ್ ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದು, ಸೂರಜ್ ಜೋಯಿಸ್ ಹಿನ್ನೆಲೆ ಸಂಗೀತದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಉಳಿದಂತೆ ನಾಗೇಂದ್ರ ಉಜ್ಜನಿ ಸಂಕಲನ, ಅನಿಲ್ ಕಬೀರ್ ಕಲಾ ನಿರ್ದೇಶನ, ರಾ ಸೀನಾ ಸಾಹಸ ನಿರ್ದೇಶನ ಹಾಗೂ ಅಭಿಷೇಕ್ ಮಠದ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಸದ್ಯ ಶೀರ್ಷಿಕೆಯ ಮೂಲಕವೇ ಸದ್ದು ಮಾಡುತ್ತಿರುವ `ಕದ್ರಿ’ ಚಿತ್ರತಂಡ, ಶೀಘ್ರದಲ್ಲೇ ಚಿತ್ರದ ಕುರಿತಾದ ಮತ್ತಷ್ಟು ಅಪ್‍ಡೇಟ್‍ಗಳನ್ನು ಹಂಚಿಕೊಳ್ಳಲಿದೆ.

Related Posts

‘ದೇವಿ ಮಹಾತ್ಮೆ’ ಚಿತ್ರ ಡಿಸೆಂಬರ್ 4 ರಂದು ಬಿಡುಗಡೆ : ಕೆಆರ್ ಜಿ ಸ್ಟುಡಿಯೋಸ್ ವಿತರಣೆ

ಹಿರಿಯ ನಟ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ದೇವಿ ಮಹಾತ್ಮೆ’ ಚಿತ್ರ ಡಿಸೆಂಬರ್ 4 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಚಿತ್ರದ ಆಡಿಯೋ ಹಕ್ಕುಗಳನ್ನು ಪ್ರತಿಷ್ಠಿತ ‘ಹೊಂಬಾಳೆ ಮ್ಯೂಸಿಕ್’ ಸಂಸ್ಥೆ ಪಡೆದುಕೊಂಡಿತ್ತು. ಇತ್ತೀಚೆಗಷ್ಟೇ ಹೊಂಬಾಳೆ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‍ನಲ್ಲಿ ಬಿಡುಗಡೆಯಾದ…

`ಲಕ್ಷ್ಮೀಪುತ್ರ’ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಶುಭ ಹಾರೈಸಿದ ಶಿವಣ್ಣ

ಉಪಾಧ್ಯಕ್ಷ’ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ನಟ ಚಿಕ್ಕಣ್ಣ ನಾಯಕನಾಗಿ ನಟಿಸಿರುವ ಎರಡನೇ ಸಿನಿಮಾ ಲಕ್ಷ್ಮಿ ಪುತ್ರ ಚಿತ್ರದ ಟ್ರೇಲರ್ ಅಧಿಕೃತವಾಗಿ ಬಿಡುಗಡೆಯಾಗಿದೆ. ಹಾಸ್ಯದ ಜೊತೆಗೆ ಭರ್ಜರಿ ಆಕ್ಷನ್ ಮತ್ತು ಭಾವನಾತ್ಮಕ ಕಥಾಹಂದರ ಹೊಂದಿರುವ ಚಿತ್ರದ ಟ್ರೇಲರ್ ಅನ್ನು ಕರುನಾಡ ಚಕ್ರವರ್ತಿ’…

Leave a Reply

Your email address will not be published. Required fields are marked *


Notice: ob_end_flush(): Failed to send buffer of zlib output compression (0) in /home/alydqcdn/public_html/wp-includes/functions.php on line 5581