ವೆಬ್ ಸೀರೀಸ್ನತ್ತ ನಿರ್ದೇಶಕ ಪಿ.ಸಿ.ಶೇಖರ್ ಚಿತ್ತ: “ಜಸ್ಟ್ ಅಸ್” ಮೊದಲ ಪ್ರಯತ್ನ
ಕನ್ನಡ ಚಿತ್ರರಂಗದಲ್ಲಿ ಸದಭಿರುಚಿ ಚಿತ್ರ ನಿರ್ದೇಶಿಸಿರುವ ಪಿ.ಸಿ.ಶೇಖರ್ ಈಗ ಮೊದಲ ವೆಬ್ ಸಿರೀಸ್ ನಿರ್ದೇಶಿಸಿದ್ದಾರೆ. ಎಂಟು ಕಂತುಗಳ ಈ ವೆಬ್ ಸಿರೀಸ್ ಗೆ “ಜಸ್ಟ್ ಅಸ್” ಎಂದು ನಾಮಕರಣ ಮಾಡಿದ್ದಾರೆ. ಜನವರಿ ಒಂದರಂದು ಹೊಸವರ್ಷದ ಮೊದಲ ದಿನ ಈ ವೆಬ್ ಸಿರೀಸ್ ನ ಮೊದಲನೇ ಕಂತು ಪ್ರಸಾರವಾಗಲಿದೆ.

ನಿರ್ದೇಶಕ ಪಿ.ಸಿ.ಶೇಖರ್ ಮಾತನಾಡಿ ಇಷ್ಟು ದಿನ ಚಿತ್ರಗಳನ್ನು ನಿರ್ದೇಶಿಸುತ್ತಿದ್ದ ನಾನು, ಇದೇ ಮೊದಲ ಬಾರಿಗೆ ವೆಬ್ ಸಿರೀಸ್ ನಿರ್ದೇಶನ ಮಾಡಿದ್ದೇನೆ. ವಿವೇಕ್ ಹಾಗೂ ಮೇಘ ಜಾದವ್ ಎಂಬ ನೂತನ ಪ್ರತಿಭೆಗಳು ಈ ವೆಬ್ ಸಿರೀಸ್ ನಲ್ಲಿ ಅಭಿನಯಿಸಿದ್ದಾರೆ. ” ಒಂದು ವಿಭಿನ್ನ ಕಥೆ. ಎಂಜಿನಿಯರಿಂಗ್ ಮಾಡಬೇಕಾದರೆ ಬಿ.ಇ ಮಾಡಬೇಕು. ಡಾಕ್ಟರ್ ಆಗಬೇಕೆಂದರೆ ಎಂ.ಬಿ.ಬಿ.ಎಸ್ ಮಾಡಬೇಕು. ಕಾರು ಚಾಲನೆ ಮಾಡಬೇಕಾದರೂ ಸಹ ತರಬೇತಿ ಬೇಕು. ಹೀಗೆ ಎಲ್ಲದ್ದಕ್ಕೂ ಒಂದೊಂದು ರೀತಿ ಇದೆ ಎಂದರು.
ಮದುವೆ ವಿಷಯಕ್ಕೆ ಬಂದಾಗ ಹುಡುಗ – ಹುಡುಗಿಯನ್ನು ಮನೆಯವರು ಮಾತನಾಡಿ ಎಂದು ಹೇಳಿದಾಗ ಏನು ಮಾತನಾಡಬೇಕೆಂದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಹಾಗಾಗಿ ಸೈಕಿಯಾರ್ಟಿಸ್ಟ್ ಹಾಗೂ ಮ್ಯಾರೇಜ್ ಕೌನ್ಸಿಲರ್ ಮುಂತಾದವರನ್ನು ಭೇಟಿಯಾಗಿ ಕುರಿತು ಚರ್ಚೆ ಮಾಡಿ ಕೆಲವು ವಿಷಯಗಳನ್ನು ಸಂಗ್ರಹಮಾಡಿ ವೆಬ್ ಸುರೀಸ್ ಮೂಲಕ ಜನರಿಗೆ ತೋರಿಸುವ ಪ್ರಯತ್ನ ಮಾಡುತ್ತಿದ್ದೇನೆ. ಇದೇ ಕಥಾವಸ್ತು. ಇದರ ಜೊತೆಗೆ ಸೆಂಟಿಮೆಂಟ್ ಸನ್ನಿವೇಶಗಳು ಸಹ ಇರಲಿದೆ. ವಿವೇಕ್ ಹಾಗೂ ಮೇಘ ಜಾದವ್ ಪ್ರಮುಖಪಾತ್ರದಲ್ಲಿ ನಟಿಸಿರುವ ಈ ವೆಬ್ ಸಿರೀಸ್ ಗೆ ನನ್ನ ಜೊತೆಗೆ “ನಾಯಕ” ಹಾಗೂ “ಟೆರರಿಸ್ಟ್” ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ಮುರಳಿ ಕ್ರಿಶ್ ಛಾಯಾಗ್ರಹಣವಿದೆವಿದೆ ಎಂದು ಹೇಳಿದರು.

ಜಸ್ಟ್ ಅಸ್ ಒಂದು ಹಾಡಿದ್ದು, ಎಸ್ ಪ್ರದೀಪ್ ವರ್ಮ ಸಂಗೀತ ನೀಡಿದ್ದಾರೆ. ನಾಗಸಿಂಹ ಭಾರದ್ವಾಜ್ ಹಾಡನ್ನು ಬರೆದಿದ್ದಾರೆ. ಶ್ರಾವಂತಿ ಸುಶ್ರಾವ್ಯವಾಗಿ ಹಾಡಿದ್ದಾರೆ. ಟೈಟಲ್ ಸಾಂಗ್, ಒಖಿಗಿ ಆಲ್ಬಂ ಸಾಂಗ್ ತರಹ ಅದ್ಭುತವಾಗಿ ಮೂಡಿಬಂದಿದ್ದು, ವೆಬ್ ಸಿರೀಸ್ ನಲ್ಲಿ ಏನೆಲ್ಲಾ ಇರಬಹುದು ಎಂಬುದನ್ನು ಈ ಹಾಡಿನಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಡಿಸೆಂಬರ್ 22 ರಂದು ಈ ಹಾಡು ಬಿಡುಗಡೆಯಾಗಲಿದೆ. ಈಗಿನ ಯುವಜನತೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಮನೋರಂಜನೆಯ ಪ್ರಧಾನ ಮಾಡಿಕೊಂಡು ಎಂಟು ಕಂತುಗಳ ಈ ವೆಬ್ ಸಿರೀಸ್ ಮಾಡಿದ್ದೀನಿ. ನನ್ನ ಹೊಸಪ್ರಯತ್ನ ಹೊಸವರ್ಷದ ಮೊದಲದಿನದಿಂದ ನಿಮ್ಮ ಮುಂದೆ ಬರಲಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು
ನಟ ವಿವೇಕ್ ಮಾತನಾಡಿ ಮೈಸೂರಿನವನು. ರಂಗಭೂಮಿ ಕಲಾವಿದ. ನಟನದಲ್ಲಿ ಕಲಿತಿದ್ದೇನೆ. ಧಾರಾವಾಹಿಗಳಲ್ಲೂ ನಟಿಸಿದ್ದೇನೆ. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ಪಿ.ಸಿ.ಶೇಖರ್ ನಿರ್ದೇಶನದ ವಿಭಿನ್ನ ಕಥಾಹಂದರ ಹೊಂದಿರುವ”ಎusಣ us” ವೆಬ್ ಸಿರೀಸ್ ಬಹಳ ಚೆನ್ನಾಗಿ ಮೂಡಿಬಂದಿದೆ. ಈ ವೆಬ್ ಸಿರೀಸ್ ನಲ್ಲಿ ನಟಿಸಿರುವುದು ಖುಷಿಯಾಗಿದೆ ಎಂದು ಹೇಳಿದರು

ನಟಿ ಮೇಘಾ ಜಾದವ್ ಮಾತನಾಡಿ ಸಾಫ್ಟ್ವೇರ್ ಎಂಜಿನಿಯರ್. ಐಟಿ ಉದ್ಯೋಗಿ. ನಟನೆ ನನ್ನ ಹವ್ಯಾಸ. ಸಾಕಷ್ಟು ಧಾರಾವಾಹಿ ಹಾಗೂ ಚಲನಚಿತ್ರಗಳಿಗೆ ಕಂಠದಾನ ಕಲಾವಿದೆಯಾಗೂ ಕಾರ್ಯನಿರ್ವಹಿಸಿದ್ದೇನೆ. ಪಿ.ಸಿ.ಶೇಖರ್ ನಿರ್ದೇಶನದ “ಮಹಾನ್” ಚಿತ್ರದಲ್ಲಿ ಸಣ್ಣ ಪಾತ್ರ ನಿರ್ವಹಿಸಿದ್ದೇನೆ. ಆ ಮೂಲಕ “”ಜಸ್ಟ್ ಅಸ್” ” ವೆಬ್ ಸಿರೀಸ್ ನಲ್ಲಿ ನಟಿಸುವ ಅವಕಾಶ ದೊರಕಿತು. ಈ ವೆಬ್ ಸಿರೀಸ್ ನಲ್ಲಿ ಅಭಿನಯಿಸಿರುವುದು ಬಹಳ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.

