Elimination in Varthur Santhosh's class is life-threatening

ವರ್ತೂರ್ ಸಂತೋಷ್ ಕ್ಲಾಸ್‍ನಲ್ಲಿ ಎಲಿಮಿನೇಷನ್ ಪ್ರಾಣ ಸಂಕಟ - CineNewsKannada.com

ವರ್ತೂರ್ ಸಂತೋಷ್ ಕ್ಲಾಸ್‍ನಲ್ಲಿ ಎಲಿಮಿನೇಷನ್ ಪ್ರಾಣ ಸಂಕಟ

ಬಿಗ್‍ಬಾಸ್ ಪಾಠಶಾಲೆ ತರಗತಿಯಿಂದ ತರಗತಿಗೆ ಸೀರಿಯಸ್ ಆಗುತ್ತ ನಡೆದಿದೆ. ಮೊದಲ ದಿನಕ್ಕೆ ಹೋಲಿಸಿದರೆ ನಿನ್ನೆಯ ತರಗತಿಗಳು ಸಾಕಷ್ಟು ಸೀರಿಯಸ್ ಆಗಿದ್ದವು. ನಮ್ರತಾ ಕ್ಲಾಸಿನಲ್ಲಿ ಎಲ್ಲರೂ ಡಾನ್ಸ್ ಮಾಡಿ ಖುಷಿಪಟ್ಟರೆ, ಸಂಗೀತಾ ಬಹುಗಂಭೀರವಾಗಿ ಅಧ್ಯಾತ್ಮದ ಪಾಠವನ್ನು ಹೇಳಿಕೊಟ್ಟಿದ್ದರು.

ತುಂಬ ಗಹನವಾಗಿಯೂ ಇದ್ದ ಅವರ ತರಗತಿ ಪ್ರೀತಿಯನ್ನು ಹರಡುವ ಸಂದೇಶದೊಂದಿಗೆ ಕೊನೆಗೊಂಡಿತ್ತು. ಸಿರಿ ಅವರ ತರಗತಿಯಲ್ಲಿ ಕಾರ್ತಿಕ್ ಮತ್ತು ವಿನಯ್ ಪರಸ್ಪರ ಹಾರ್ಟ್ ಕ್ರಾಫ್ಟ್ ಹಂಚಿಕೊಂಡು ಖುಷಿಗೊಂಡಿದ್ದರು.

ಹಾಗಾದರೆ ಇಂದಿನ ತರಗತಿಗಳು ಹೇಗೆ ನಡೆಯುತ್ತಿವೆ ಕಾರ್ತಿಕ್ ಪಾಲಿಟಿಕ್ಸ್ ತರಗತಿಯ ಝಲಕ್‍ನ ನಂತರ ಜಿಯೋ ಸಿನಿಮಾದಲ್ಲಿ ಬಿಡುಗಡೆ ಮಾಡಿರುವ ಪ್ರೊಮೊದ ಈಗ ವರ್ತೂರು ಸಂತೋಷ್ ಅವರ ಕ್ಲಾಸಿನ ಖದರ್ ಹೇಗಿದೆ ಎನ್ನುವುದರ ಸುಳಿವು ನೀಡಿದೆ.

ವರ್ತೂರು ಸಂತೋಷ್ ಮೇಷ್ಟ್ರಾಗಿರುವ ತರಗತಿಯಲ್ಲಿ ಒಬ್ಬರನ್ನೊಬ್ಬರು ಎಲಿಮಿನೇಟ್ ಮಾಡುವ ಚಟುವಟಿಕೆಯೂ ನಡೆದಿದೆ. ಸಂಗೀತಾ ಮತ್ತು ಪ್ರತಾಪ್ ಇಬ್ಬರೂ ಮೈಕಲ್ ಅವರನ್ನು ಎಲಿಮಿನೇಟ್ ಮಾಡಬೇಕು ಎಂದು ಹೇಳಿದ್ದಾರೆ. `ಮೈಕಲ್ ಸಣ್ಣ ಸಣ್ಣ ವಿಷಯಕ್ಕೂ ನನಗೆ ಚುಚ್ಚಿ ಮಾತಾಡುತ್ತಿದ್ದಾರೆ’ ಎಂದು ಸಂಗೀತಾ ಆರೋಪಿಸಿದ್ದರೆ, “ನನ್ನ ವಿರುದ್ಧ ಎಲ್ಲರ ಮನಸ್ಸಿನಲ್ಲಿಯೂ ತಪ್ಪು ಭಾವನೆ ಮೂಡಿಸುತ್ತಿದ್ದಾರೆ’ ಎಂದು ಪ್ರತಾಪ್ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಮೈಕಲ್, ಐ ಡೋಂಟ್ ಲೈಕ್ ಯು' ಎಂದು ನೇರವಾಗಿ ಹೇಳಿದ್ದಾರೆ.ಪ್ರತಾಪ್ ಅವರಿಗೆ ಸ್ವಂತ ಪರ್ಸನಾಲಿಟಿ ಇಲ್ಲ. ಸಿಂಪಥಿಯಲ್ಲಿದ್ದು ಬದುಕುವವನ ಬಳಿ ಮಾತಾಡಲು ನನಗೆ ಏನೂ ಇಲ್ಲ’ ಎಂದೂ ಉತ್ತರಿಸಿದ್ದಾರೆ.ಹಾಗಾದರೆ ವರ್ತೂರ್ ಕ್ಲಾಸ್‍ನಲ್ಲಿ ನಡೆದಿದ್ದು ರಿಯಲ್ ಎಲಿಮಿನೇಷನ್ನಾ ಅಥವಾ ಟಾಸ್ಕ್‍ನ ಭಾಗವಾ ಬಿಗ್‍ಬಾಸ್ ನೇರಪ್ರಸಾರವನ್ನು ಉಚಿತವಾಗಿ ನೋಡಿ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin