"Land Lord" to be telecast on Zee5 for Ugadi festival

ಯುಗಾದಿ ಹಬ್ಬಕ್ಕೆ ಜೀ5ನಲ್ಲಿ “ಲ್ಯಾಂಡ್ ಲಾರ್ಡ್” ಚಿತ್ರ ಪ್ರಸಾರ - CineNewsKannada.com

ಯುಗಾದಿ ಹಬ್ಬಕ್ಕೆ ಜೀ5ನಲ್ಲಿ “ಲ್ಯಾಂಡ್ ಲಾರ್ಡ್” ಚಿತ್ರ ಪ್ರಸಾರ

ಚಿತ್ರಮಂದಿರಗಳಲ್ಲಿ ಎಲ್ಲರ ಮನೆ ಮಾತಾಗಿದ್ದ ಆಕ್ಷನ್ ಡ್ರಾಮಾ “ಲ್ಯಾಂಡ್ ಲಾರ್ಡ್”ದೇ ಮಾರ್ಚ್ 19ಕ್ಕೆ ಜೀ 5ನಲ್ಲಿ ಬಿಡುಗಡೆ ಆಗಲಿದೆ.ಜಡೇಶ್ ಕೆ ಹಂಪಿ ನಿರ್ದೇಶನದ ಚಿತ್ರ 1980ರಲ್ಲಿ ಗ್ರಾಮೀಣ ಕರ್ನಾಟಕದಲ್ಲಿ ನಡೆಯುವ ಕಥೆ ಹೇಳುತ್ತದೆ.

ದುನಿಯಾ ವಿಜಯ್, ರಚಿತಾ ರಾಮ್, ರಾಜ್ ಬಿ ಶೆಟ್ಟಿ, ರಿಥನ್ಯಾ ವಿಜಯ್, ಉಮಾಶ್ರೀ, ಭಾವನಾ ರಾವ್, ಸಂಪತ್ ಮೈತ್ರೇಯ ಮುಂತಾದವರು ನಟಿಸಿದ್ದಾರೆ.ಬಹುತಾರಾಗಣವನ್ನು ಹೊಂದಿರುವ ಚಿತ್ರ ಈಗಾಗಲೇ ಪ್ರೇಕ್ಷಕರ ಗಮನ ಸೆಳೆದಿದ್ದು, ಇದೀಗ ಜೀ5ನಲ್ಲಿ ಬಿಡುಗಡೆ ಆಗುತ್ತಿದೆ.

ನಟ ದುನಿಯಾ ವಿಜಯ್ ಮಾತನಾಡಿ “ಚಿತ್ರದಲ್ಲಿ ರಾಚಯ್ಯ ಎಂಬ ಪಾತ್ರ ಮಾಡಿದ್ದೇನೆ.ರಾಚಯ್ಯ ಒಬ್ಬ ಅಂತರ್ಮುಖಿ. ಹೆಚ್ಚು ಮಾತನಾಡದೇ ಒಳಗಿನ ಭಾವನೆ ವ್ಯಕ್ತಪಡಿಸುವ ಪಾತ್ರ ನನಗೆ ಸವಾಲಾಗಿತ್ತು. ಇದೀಗ ಈ ಚಿತ್ರವು ಜೀ5ನಲ್ಲಿ ಬಿಡುಗಡೆ ಆಗುತ್ತಿರುವುದು ನನಗೆ ಸಂತಸ ತಂದಿದೆ. ಪ್ರೇಕ್ಷಕರ ಅಭಿಪ್ರಾಯಕ್ಕಾಗಿ ಕಾಯುತ್ತಿದ್ದೇನೆ ಎಂದಿದ್ಧಾರೆ

ನಟಿ ರಚಿತಾ ರಾಮ್ ಮಾತನಾಡಿ “ಚಿತ್ರದ ಕಥೆ ಸರಳವಾಗಿದ್ದರೂ, ಕಥೆಯಲ್ಲಿರುವ ಭಾವನೆಗಳು ಆಳವಾಗಿವೆ. ಅಗಾಧವಾದ ಭಾವನೆಗಳನ್ನು ವ್ಯಕ್ತಪಡಿಸುವ ಕಥೆಯೇ “ಲ್ಯಾಂಡ್ ಲಾರ್ಡ್”. ಇದರಲ್ಲಿ ನನ್ನದು ಬಹಳ ವಿಶೇಷವಾದ ಪಾತ್ರ ಎಂದು ಮಾಹಿತಿ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin