"Nagapanchami" is the story of a naga girl born to forget hatred and share love.

ಬರ್ತಿದೆ ದ್ವೇಷ ಮರೆಸಿ, ಪ್ರೀತಿ ಹಂಚಲು ಜನ್ಮವೆತ್ತಿದ ನಾಗಕನ್ನಿಕೆಯ ಕಥೆ “ನಾಗಪಂಚಮಿ” - CineNewsKannada.com

ಬರ್ತಿದೆ ದ್ವೇಷ ಮರೆಸಿ, ಪ್ರೀತಿ ಹಂಚಲು ಜನ್ಮವೆತ್ತಿದ ನಾಗಕನ್ನಿಕೆಯ ಕಥೆ “ನಾಗಪಂಚಮಿ”

ಕನ್ನಡ ಕಿರುತೆರೆಯಲ್ಲಿ ಮನರಂಜನೆಗೆ ಹೊಸ ಮುನ್ನುಡಿ ಬರೆದ ‘ಸ್ಟಾರ್ ಸುವರ್ಣ’ ವಾಹಿನಿಯು ಇದೀಗ ಪ್ರೇಕ್ಷಕರಿಗೆ ನಾಗಕನ್ನಿಕೆಯ ಕಥೆಯನ್ನು ಹೇಳಲು ಸಜ್ಜಾಗಿದೆ ಅದೇ “ನಾಗಪಂಚಮಿ”.

ಅಲೌಕಿಕ ಶಕ್ತಿಯಿಂದಾಗಿ ಶಿವನ ಸನ್ನಿಧಾನದಲ್ಲಿ ಕಥಾನಾಯಕಿ ‘ಪಂಚಮಿ’ ಜನಿಸಿರುತ್ತಾಳೆ. ವಿಚಿತ್ರ ರೀತಿಯಲ್ಲಿ ಜನ್ಮಪಡೆದ ಕಾರಣ ಊರಿನ ಜನ ಪಂಚಮಿಯನ್ನು ಅನಿಷ್ಟವೆಂದು ದೊಷಿಸುತ್ತಿದ್ದರೆ ಪಂಚಮಿ ನಾಗಕನ್ನಿಕೆಯಾಗಿ ಹೇಗೆ ಬದಲಾಗುತ್ತಾಳೆ ಎಂಬುದೇ ಕುತೂಹಲ.

ಆಕೆಗೆ ತಿಳಿಯಲಾರದ ಶಕ್ತಿಯೊಂದು ಅವಳ ರೂಪದಲ್ಲಿ ಊರಿನ ಜನರಿಗೆ ಮಾಡುವ ಸಹಾಯ, ಪವಾಡಗಳು ನೋಡುಗರಿಗೆ ಮೈನವಿರೇಳಿಸುವಂತೆ ಮಾಡುತ್ತದೆ. ಇನ್ನು ಕಥಾನಾಯಕ ಮೋಕ್ಷ, ಈತನ ಕುಟುಂಬ ವಂಶ ಪಾರಂಪರೆಯಿಂದ ಅಲ್ಪಾಯುಷ್ಯರಾಗಿ ಮುಂದುವರಿಯುವಂತೆ ಶಾಪಗ್ರಸ್ತವಾಗಿರುತ್ತದೆ. ನಾಗದೇವತೆಯ ಆರಾಧನೆಯನ್ನು ಮಾಡಿಕೊಂಡು ಬಂದಿರುವ ಪಂಚಮಿ, ಮೋಕ್ಷನ ಕುಟುಂಬವನ್ನು ಹೇಗೆ ರಕ್ಷಿಸುತ್ತಾಳೆ ಎಂಬುದೇ ‘ನಾಗಪಂಚಮಿ’ ಧಾರಾವಾಹಿಯ ಕಥಾಹಂದರ.

‘ನಾಗಪಂಚಮಿ’ ಧಾರಾವಾಹಿಯು ಅದ್ಧೂರಿ ತಾರಾಬಳಗವನ್ನು ಹೊಂದಿದ್ದು. ಪೃಥ್ವಿ ಶೆಟ್ಟಿ, ದರ್ಶಿನಿ ಗೌಡ, ಚೈತ್ರ ಹಳ್ಳಿಕೆರೆ, ಸುನಿಲ್ ಪುರಾಣಿಕ್, ಪ್ರಿಯಾಂಕಾ ಶಿವಣ್ಣ, ಮೇಘನಾ ಖುಷಿ, ಪ್ರೀತಿ ಶ್ರೀನಿವಾಸ್ ಸೇರಿದಂತೆ ಇನ್ನು ಅನೇಕ ಕಲಾವಿದರು ಅಭಿನಯಿಸಿದ್ದಾರೆ.

ಮಧ್ಯಾಹ್ನದ ಮನರಂಜನೆಯಲ್ಲಿ ಶುರುವಾಗ್ತಿದೆ ದ್ವೇಷ ಮರೆಸಿ, ಪ್ರೀತಿ ಹಂಚಲು ಜನ್ಮವೆತ್ತಿದ ನಾಗಕನ್ನಿಕೆಯ ಕಥೆ “ನಾಗಪಂಚಮಿ” ಇದೇ ಜುಲೈ 31 ರಿಂದ ಸೋಮವಾರದಿಂದ – ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ.

ವೀಕ್ಷಕರ ಗಮನಕ್ಕೆ,
“ಬದಲಾದ ಸಮಯದಲ್ಲಿ” ಬರ್ತಿದೆ ಇಡೀ ದೇಶ ಗೆದ್ದ ಗೃಹಿಣಿಯ ಕಥೆ “ಅನುಪಮ” ಇದೇ ಸೋಮವಾರದಿಂದ ಬೆಳಗ್ಗೆ 11.30 ಕ್ಕೆ ಹಾಗು ರಾತ್ರಿ 10.30 ಕ್ಕೆ ತಪ್ಪದೇ ವೀಕ್ಷಿಸಿ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin