ಇಂಡಿಯನ್ ‘ಬೌಲಿಂಗ್ ಲೀಗ್’ಗೆ ಮತ್ತೊಮ್ಮೆ ರೆಡಿಯಾದ ಸ್ಯಾಂಡಲ್ವುಡ್ ತಾರೆಯರು
ಕ್ರಿಕೆಟ್, ಕಬ್ಬಡಿ, ಬ್ಯಾಡ್ಮಿಂಟನ್ ಲೀಗ್ ಹೀಗೆ ಅನೇಕ ಲೀಗ್‍ಗಳ ಜೊತೆಗೆ ಇದೀಗ ಬೌಲಿಂಗ್ ಲೀಗ್ ಕೂಡ ಸದ್ದು ಮಾಡುತ್ತಿದೆ. ಸ್ಯಾಂಡಲ್‍ವುಡ್‍ನಲ್ಲಿ ಬೌಲಿಂಗ್ ಲೀಗ್ ಸೀಸನ್ 1 ಯಶಸ್ವಿಯಾದ ಬೆನ್ನಲ್ಲೇ ಇದೀಗ 2ನೇ ಲೀಗ್‍ಗೆ ತಾರೆಯರು ಸಜ್ಜಾಗಿದ್ದಾರೆ. ಈ ಬಾರಿಯ ಲೀಗ್ ನಲ್ಲಿ ಭಾಗಿಯಾಗಲು ತಾರೆಯರು ಕಾತುರದಿಂದ ಸಜ್ಜಾಗಿದ್ದಾರೆ.
ಬೌಲಿಂಗ್ ಲೀಗ್ ಅನ್ನು ಸ್ಯಾಂಡಲ್‍ವುಡ್‍ಗೆ ಪರಿಚಯಿಸಿದ್ದು ನಿರ್ಮಾಪಕ ಕಮರ್. ಕಳೆದ ವರ್ಷ ಬೌಲಿಂಗ್ ಲೀಗ್‍ಅನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಕಮರ್ ಈ ಬಾರಿ ಕೂಡ ಅದೇ ಹುರುಪಿನಲ್ಲಿ ಲೀಗ್ ಮಾಡಲು ಮುಂದಾಗಿದ್ದಾರೆ.
ನಟಿಯರಾದ ಕಾರುಣ್ಯಾ ರಾಮ್, ಧನ್ಯಾ ರಾಮ್ ಕುಮಾರ್, ರಕ್ಷಿತಾ ಶೆಟ್ಟಿ, ರಚನಾ ಇಂದರ್, ಬೃಂದಾ ಆಚಾರ್ಯ, ಸಾಕ್ಷಿ ಇನ್ನೂ ನಟರಾದ ತರುಣ್ ಚಂದ್ರ, ಕೆಂಪೇಗೌಡ, ಭರತ್ ಸೇರಿದಂತೆ ಅನೇಕರು ಹಾಜರಿದ್ದರು. ಈ ಬಾರಿಯ ಲೀಗ್‍ನಲ್ಲಿ ಒಟ್ಟು ಆರು ತಂಡಗಳಿರಲಿದ್ದು ತಾರೆಯರ ಜೊತೆಗೆ ಪತ್ರಕರ್ತರು ಕೂಡ ಲೀಗ್‍ನಲ್ಲಿ ಭಾವಹಿಸುತ್ತಿರುವುದು ವಿಶೇಷ.
ಕಳೆದ ಬಾರಿಯ ಲೀಗ್‍ನಲ್ಲಿ ಶ್ರೀನಗರ ಕಿಟ್ಟಿ ಮತ್ತು ತಂಡ ಗೆದ್ದು ಬೀಗಿದ್ದರು. ಈ ಬಾರಿಯ ಬೌಲಿಂಗ್ ಲೀಗ್ ಕಪ್ ಯಾರ ಮುಡಿಗೇರಲಿದೆ ಎಂದು ಕಾದು ನೋಡಬೇಕು. ಡಿಸೆಂಬರ್‍ನಲ್ಲಿ ಲೀಗ್ ಲೀಗ್ ಪ್ರಾರಂಭವಾಗಲಿದೆ ಎರಡು ದಿನಗಳು ನಡೆಯಲಿದ್ದು ಅನೇಕ ಸ್ಟಾರ್ಸ್ ಭಾಗಿಯಾಗಲಿದ್ದಾರೆ. ಇನ್ನು ಏನೆಲ್ಲ ವಿಶೇಷತೆ ಇರಲಿದೆ, ಯಾರೆಲ್ಲ ಕಲಾವಿದರು ಭಾಗಿಯಾಗುತ್ತಾರೆ ಎನ್ನುವ ಬಗ್ಗೆ ಸದ್ಯದಲ್ಲೇ ಮಾಹಿತಿ ಬಹಿರಂಗ ಪಡಿಸಲಿದೆ ಕಮರ್ ಫಿಲ್ಮ್ ಫ್ಯಾಕ್ಟರಿ.