Star Suvarna honored as "Suvarna Sakhi" for women auto drivers.

ಮಹಿಳಾ ಆಟೋ ಚಾಲಕರಿಗೆ “ಸುವರ್ಣ ಸಖಿ”ಯಾಗಿ ಗೌರವಿಸಿದ ಸ್ಟಾರ್ ಸುವರ್ಣ. - CineNewsKannada.com

ಮಹಿಳಾ ಆಟೋ ಚಾಲಕರಿಗೆ “ಸುವರ್ಣ ಸಖಿ”ಯಾಗಿ ಗೌರವಿಸಿದ ಸ್ಟಾರ್ ಸುವರ್ಣ.

ಮನರಂಜನೆಯಲ್ಲಿ ಸುವರ್ಣ ಯುಗವನ್ನು ಸೃಷ್ಟಿಸಿ ಕನ್ನಡಿಗರ ಮನಗೆದ್ದು ಎರಡನೇ ಸ್ಥಾನಕ್ಕೆ ಜಿಗಿದಿರುವ ‘ಸ್ಟಾರ್ ಸುವರ್ಣ’ ವಾಹಿನಿಯು ಸದಾ ಮಹಿಳೆಯರ ಪರವಾಗಿ ಅನೇಕ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತಲೇ ಬರುತ್ತಿದೆ. ಇದೀಗ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ “ಸುವರ್ಣ ಸಖಿ” ಎಂಬ ವಿನೂತನ ಕಾರ್ಯಕ್ರಮ ಏರ್ಪಡಿಸಿ ಸಮಾಜಕ್ಕೆ ಮಾದರಿಯಾಗಿದೆ.

ಮಹಿಳೆ ಎಂದರೆ ಕೇವಲ ಒಂದು ಪದವಲ್ಲ, ಅದು ಶಕ್ತಿ, ಪ್ರೀತಿ, ತಾಳ್ಮೆ ಹಾಗು ತ್ಯಾಗದ ಪ್ರತೀಕ. ಆಧುನಿಕ ಸಮಾಜದಲ್ಲಿರೋ ಕಟ್ಟುಪಾಡುಗಳನ್ನೂ ಮೀರಿ ಪ್ರತಿ ಕ್ಷೇತ್ರದಲ್ಲೂ ಆಕೆ ಸಾಧನೆಯ ಶಿಖರ ಮುಟ್ಟುತ್ತಿದ್ದಾಳೆ.

ಮೊದಲೆಲ್ಲ ಪುರುಷರೇ ಆಟೋ ಚಾಲಕರಾಗಿದ್ದರು ಆದರೆ ಈಗ ತಾನು ಯಾವುದಕ್ಕೂ ಕಮ್ಮಿಯಿಲ್ಲ ಎಂಬ ದೃಢ ನಿರ್ಧಾರದೊಂದಿಗೆ ಮಹಿಳಾ ಆಟೋ ಮಣಿಯರು ರಸ್ತೆಗೆ ಲಗ್ಗೆಯಿಟ್ಟಿದ್ದಾರೆ.


ಇದೆಲ್ಲದರ ಜೊತೆ ತಮ್ಮ ಕಷ್ಟ, ನೋವು, ಕುಟುಂಬ ಎಲ್ಲವನ್ನು ಬದಿಗಿಟ್ಟು, ಸಮಾಜದಲ್ಲಿ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಮುನ್ನುಗ್ಗುತ್ತಿರುವ ಬೆಂಗಳೂರಿನ ಒಂದಷ್ಟು ಮಹಿಳಾ ಆಟೋ ಚಾಲಕಿಯರಿಗೆ ಸ್ಟಾರ್ ಸುವರ್ಣ ವಾಹಿನಿಯು ಗೌರವಿಸಿ, ಕಿಟ್ ನೀಡುವುದರೊಂದಿಗೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಸಾಬೀತು ಪಡಿಸಿದೆ. ‘ಸುವರ್ಣ ಸಖಿ’ ಎಂಬ ಅದ್ಬುತ ಕಾರ್ಯಕ್ರಮವನ್ನು ಆಯೋಜಿಸಿರುವುದಕ್ಕೆ ಸ್ಟಾರ್ ಸುವರ್ಣ ವಾಹಿನಿಯು ಹೆಮ್ಮೆ ಪಡುತ್ತದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin