Television Cultural and Sports Club to organize Women's Day tomorrow

ಟೆಲಿವಿಷನ್ ಕಲ್ಚರಲ್ ಮತ್ತು ಸ್ಪೋರ್ಟ್ ಕ್ಲಬ್ ನಿಂದ ನಾಳೆ ಮಹಿಳಾ ದಿನಾಚಾರಣೆ ಆಯೋಜನೆ - CineNewsKannada.com

ಟೆಲಿವಿಷನ್ ಕಲ್ಚರಲ್ ಮತ್ತು ಸ್ಪೋರ್ಟ್ ಕ್ಲಬ್ ನಿಂದ ನಾಳೆ ಮಹಿಳಾ ದಿನಾಚಾರಣೆ ಆಯೋಜನೆ

ಟೆಲಿವಿಷನ್ ಕಲ್ಚರಲ್ ಮತ್ತು ಸ್ಪೋರ್ಟ್ ಕ್ಲಬ್ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚಾರಣೆಯನ್ನು ಮಾರ್ಚ್ 8 ರಂದು ಉತ್ತರ ಹಳ್ಳಿಯಲ್ಲಿರುವ ಕ್ಲಬ್‍ನಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ತನಕ ನಡೆಯಲಿರುವ ಕಾರ್ಯಕ್ರಮದಲ್ಲಿ ವಿವಿಧ ಮನರಂಜನಾ ಕಾರ್ಯಕ್ರಮ ಹಾಗು ಕ್ರೀಡಾ ಚಟುವಟಿಕೆ ಆಯೋಜಿಸಲಾಗಿದೆ.

ಮಹಿಳಾ ದಿನಾಚಾರಣೆ ಕಾರ್ಯಕ್ರಮದಲ್ಲಿ ಕಿರುತೆರೆಯ ಪ್ರಮುಖರು ಭಾಗಿಯಾಗಲಿದ್ದಾರೆ. ಕಾರ್ಯಕ್ರಮದಲ್ಲಿ ಮಹಿಳೆಯರಿಗಾಗಿ ಮಾತ್ರ ಪ್ರವೇಶ ನೀಡಲು ನಿರ್ಧರಿಸಲಾಗಿದೆ, ಕಾರ್ಯಕ್ರಮದಲ್ಲಿ ಭಾಗಿಯಾಗುವ ಮಹಿಳೆಯರು ಕಡ್ಡಾಯವಾಗಿ ಪಿಂಕ್ ಬಣ್ಣದ ವಸ್ತ್ರ ಸಂಹಿತೆ ಪಾಲಿಸಲು ಸೂಚಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗುವ ಮಹಿಳೆಯರು ನೋಂದಣಿ ಶುಲ್ಕ 500 ರೂಪಾಯಿ ನಿಗಧಿ ಪಡಿಸಲಾಗಿದೆ.

ಮಹಿಳಾ ವಿಭಾಗದ ಮುಖ್ಯಸ್ಥೆ ಹಾಗು ಕಲಾವಿದೆ ಲಕ್ಷ್ಮಿ ಸಿದ್ದಯ್ಯ ಮುಂದಾಳತ್ವದಲ್ಲಿ ಅಂತರಾಷ್ಟ್ರಿಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಟೆಲಿವಿಷನ್ ಕಲ್ಚರಲ್ ಮತ್ತು ಸ್ಪೋರ್ಟ್ ಕ್ಲಬ್‍ನ 20 ವರ್ಷದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಮಹಿಳಾ ದಿನಾಚಾರಣೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಹೆಗ್ಗಳಿಕೆಯ ವಿಷಯ.

ನಾಳೆ ನಡೆಯಲಿರುವ ಮಹಿಳಾ ದಿನಾಚಾರಣೆ ಕಾರ್ಯಕ್ರಮದಲ್ಲಿ ಸುಮಾರು 200 ಕ್ಕೂ ಅಧಿಕ ಮಂದಿ ಭಾಗಿಯಾಗಲಿದ್ದಾರೆ. ಕಿರುತೆರೆಯ ಕಲಾವಿದರು, ತಂತ್ರಜ್ಞರು ಸೇರಿದಂತೆ ಟಿವಿ ಉದ್ಯದಮಲ್ಲಿ ತೊಡಗಿಸಿಕೊಂಡಿರುವ ಎಲ್ಲರು ನಾಳೆ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ ಎಂದು ಕಾರ್ಯಕ್ರಮ ಆಯೋಜಕಿ ಲಕ್ಷ್ಮಿ ಸಿದ್ದಯ್ಯ ಮಾಹಿತಿ ನೀಡಿದ್ದಾರೆ.

ಗಾಯನ, ಸ್ಪಷ್ಟ ಕನ್ನಡ ಓದುವುದು, ರಂಗೋಲಿ ಸ್ಪರ್ಧೆ, ಲಕ್ಕಿ ಲೇಡಿ ಸ್ಪರ್ಧೆ, ಮ್ಯೂಸಿಕಲ್ ಸ್ಪರ್ಧೆ ಸೇರಿದಂತೆ ಹಲವು ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಇಡೀ ದಿನ ಕಾರ್ಯಕ್ರಮ ಆಯೋಜಿಸಲಾಗಿದೆ. ತೀರ್ಪುಗಾರರಾಗಿ ಗಾಯಕಿ ಸವಿತಕ್ಕ, ಬರಹಗಾರರಾದ ಕುಸಮ ಆಯರಹಳ್ಳಿ, ದೀಪಾ ರವಿಶಂಕರ್ ಭಾಗಿಯಾಗಲಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ಡಾ, ನಾಗಲಕ್ಷ್ಮಿ ಚೌಧರಿ, ನಟಿ ಲಕ್ಷ್ಮಿ ಗೋಪಾಲ ಸ್ವಾಮಿ ಸೇರಿದಂತೆ ಹಲವು ಭಾಗಿಯಾಗಲಿದ್ದು ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ ಹಿರಿಯ ನಟಿ ಗಿರಿಜಾ ಲೋಕೇಶ್ ಸೇರಿದಂತೆ ಹಲವು ಪ್ರಮುಖರು ಭಾಗಿಯಾಗಲಿದ್ದಾರೆ.

ಇದೇ ವೇಳೆ ಹಿರಿಯ ನಟಿ ಶೈಲಶ್ರೀ ಸುದರ್ಶನ್ , ನಟಿ ಶ್ರೀಲಲಿತಾ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದ್ದಾರೆ.

Actress Lakshmi SIddaiah

ಕ್ಲಬ್ ಪದಾಧಿಕಾರಿಗಳು

ಟೆಲಿವಿಷನ್ ಕಲ್ಚರಲ್ ಮತ್ತು ಸ್ಪೋರ್ಟ್ ಕ್ಲಬ್ ಪದಾಧಿಕಾರಿಗಳಾದ ಅಧ್ಯಕ್ಷ ರವಿ ಆರ್ ಗರಣಿ, ಉಪಾಧ್ಯಕ್ಷ ಗಿರೀಶ್ ರಾವ್ (ಜೋಗಿ) ಕಾರ್ಯದರ್ಶಿ ಬಿ,ಎಸ್ ಲಿಂಗದೇವರು, ಖಜಾಂಚಿ ಎಸ್ ಎಸ್ ಭಾಸ್ಕರ್, ಜಂಟಿ ಕಾರ್ಯದರ್ಶಿಗಳಾದ ರಮೇಶ್ ಪಂಡಿತ್, ಶ್ರೀದೇವಿ, ಸಮಿತಿ ಸದಸ್ಯರಾದ ಸಂಜೀವ್ ತಗಡೂರು, ಸತೀಶ್ ಕೃಷ್ಣ, ಗಿರೀಶ್ ರೆಡ್ಡಿ, ಗುರುಪ್ರಸಾದ್ ಎಂ, ಹರೀಶ್ ರಾಯಪ್ಪ, ರವಿಶಂಕರ್, ಲಕ್ಷ್ಮಿಸಿದ್ದಯ್ಯ , ನಾಗೇಶ್, ಶಿವಕುಮಾರ್ ವಿ, ಸಕ್ರೆಬೈಲು ಶ್ರೀನಿವಾಸ್,ಶೈಲೇಶ್, ಕೆ ಕಮಲ ಸೇರಿದಂತೆ ಕ್ಲಬ್ ಪದಾಧಿಕಾರಿಗಳು ಮಹಿಳಾ ದಿನಾಚಾರಣೆಯಲ್ಲಿ ಭಾಗಿಯಾಗಲಿದ್ದಾರೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin