ಆತಿಥ್ಯ ಕ್ಷೇತ್ರದ ಮರು ವ್ಯಾಖ್ಯಾನಕ್ಕೆ ಅಕ್ಕೊರ್- ಇಂಟರ್ ಗ್ಲೋಬ್ ಸಹಯೋಗ
ಭಾರತದ ಆತಿಥ್ಯ ಕ್ಷೇತ್ರ ಪರಿವರ್ತಿಸುವ ನಿಟ್ಟಿನಲ್ಲಿ ಜಾಗತಿಕ ಆತಿಥ್ಯ ಕ್ಷೇತ್ರದ ನಾಯಕ ಅಕ್ಕೊರ್ ಮತ್ತು ಭಾರತದ ಅತ್ಯಂತ ಪ್ರಮುಖ ಪ್ರಯಾಣ ಸಂಸ್ಥೆ ಇಂಟರ್ ಗ್ಲೋಬ್ ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆತಿಥ್ಯ ಉದ್ಯಮ ಸೃಷ್ಟಿಸಲು ಅವರ ಸಹಯೋಗ ಪ್ರಕಟಿಸಿದೆ. ಸರಿಸಾಟಿ ಇರದ ಜಾಲ, ಬ್ರಾಂಡ್‍ಗಳ ಪೋರ್ಟ್ ಫೋಲಿಯೊ ಮತ್ತು ಎಲ್ಲ ಮಾರುಕಟ್ಟೆ ವಲಯಗಳಲ್ಲೂ ವಿತರಣೆ ಒದಗಿಸುತ್ತದೆ.
ಭಾರತದ ಏರುಗತಿಯಲ್ಲಿರುವ ಆತಿಥ್ಯ ಮಾರುಕಟ್ಟೆ ಸ್ವಾಧೀನಪಡಿಸಿಕೊಳ್ಳುವ ಮಹತ್ವಾಕಾಂಕ್ಷೆ ಮತ್ತು ಉದ್ಯಮಗಳಲ್ಲಿ ಜಾಗತಿಕ ನಾಯಕರ ಶಕ್ತಿಗಳನ್ನು ಸಂಯೋಜಿಸಿರುವ ಪ್ಲಾಟ್ ಫಾರಂ 2030ರ ವೇಳೆಗೆ ಅಕ್ಕೊರ್ ಬ್ರಾಂಡ್ಸ್ ಅಡಿಯಲ್ಲಿ 300 ಹೋಟೆಲ್ ಗಳ ಜಾಲ ನಿರ್ಮಿಸುವ ಗುರಿ ಹೊಂದಿದೆ.
ಅಕ್ಕೊರ್, ಮುಂಚೂಣಿಯ ಜಾಗತಿಕ ಆತಿಥ್ಯ ಸಮೂಹವಾಗಿದ್ದು ಭಾರತದಲ್ಲಿ ಕಳೆದ ಹಲವು ವರ್ಷಗಳಿಂದ ಪರಿಣಾಮಕಾರಿ ವ್ಯಾಪ್ತಿ ಹೊಂದಿದೆ ಮತ್ತು ಪ್ರಸ್ತುತ ದೇಶದಲ್ಲಿ 71 ಹೋಟೆಲ್ ಗಳನ್ನು ನಿರ್ವಹಿಸುತ್ತಿದ್ದು 40ಕ್ಕೂ ಹೆಚ್ಚು ಅಭಿವೃದ್ಧಿಪಡಿಸುತ್ತಿದ್ದು ಅದರಲ್ಲಿ ಇಕಾನಮಿಯಿಂದ ಐಷಾರಾಮಿ ಬ್ರಾಂಡ್ ಗಳವರೆಗೆ ವಿಸ್ತರಿಸಿವೆ.
ಈ ಸಹಯೋಗದ ಮೂಲಕ ಅಕ್ಕೊರ್ ತನ್ನ ಹೆಜ್ಜೆ ಗುರುತನ್ನು ಗಮನಾರ್ಹವಾಗಿ ವಿಸ್ತರಿಸಲಿದೆ ಮತ್ತು ಕಾರ್ಯಾಚರಣೆಗಳನ್ನು ಸುಸೂತ್ರಗೊಳಿಸಲಿದ್ದು ಇಕಾನಮಿಯಿಂದ ಲೈಫ್ ಸ್ಟೈಲ್ ಮತ್ತು ಲಕ್ಷುರಿಯವರೆಗೆ ಎಲ್ಲ ವಲಯಗಳನ್ನೂ ಭಾರತೀಯ ಮಾರುಕಟ್ಟೆಯಲ್ಲಿ ಸದೃಢ ಪ್ರಗತಿಗೆ ತನ್ನ ಬದ್ಧತೆ ಹೊಂದಿದೆ
ಇಂಟರ್ ಗ್ಲೋಬ್, ಮುಂಚೂಣಿಯ ಭಾರತೀಯ ಕಂಪನಿಯಾಗಿದ್ದು ಪ್ರಯಾಣ ಮತ್ತು ಆತಿಥ್ಯ ಕ್ಷೇತ್ರದಲ್ಲಿ ಸರಿಸಾಟಿ ಇರದ ಪರಿಣಿತಿಯನ್ನು ತಂದಿದ್ದು ವೈಮಾನಿಕ , ಹೋಟೆಲ್ಸ್ ಭಾರತ ಮತ್ತು ಅಂತಾರಾಷ್ಟ್ರೀಯವಾಗಿ ಏರ್ ಲೈನ್ ಮ್ಯಾನೇಜ್ಮೆಂಟ್ ಲಾಜಿಸ್ಟಿಕ್ಸ್, ಟ್ರಾವೆಲ್ ಮತ್ತು ಎಐ ಸನ್ನದ್ಧ ತಂತ್ರಜ್ಞಾನದಲ್ಲಿ ಅದರಲ್ಲಿ ಪೂರ್ವಸಿದ್ಧವಾದ ಉದ್ಯಮಶೀಲತೆಯ ಹಿನ್ನೆಲೆ ಹೊಂದಿದೆ. ಇಂಟರ್ ಗ್ಲೋಬ್ ಭಾರತದ ಅತ್ಯಂತ ದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೊದ ಅತ್ಯಂತ ದೊಡ್ಡ ಪಾಲುದಾರನಾಗಿದ್ದು 2025ರ ಹಣಕಾಸು ವರ್ಷದಲ್ಲಿ 400ಕ್ಕೂ ಹೆಚ್ಚು ವಿಮಾನಗಳು 130ಕ್ಕೂ ಹೆಚ್ಚು ತಾಣಗಳಿಗೆ ಸೇವೆ ಒದಗಿಸುತ್ತಿದ್ದು 2200ಕ್ಕೂ ಹೆಚ್ಚು ದೈನಂದಿನ ವಿಮಾನಗಳು ಸಂಚರಿಸುತ್ತಿವೆ. ಇದು ಮಾರುಕಟ್ಟೆ ಬಂಡವಾಳದ ದೃಷ್ಟಿಯಿಂದ ಜಾಗತಿಕವಾಗಿ ಅತ್ಯಂತ ಮೌಲ್ಯಯುತ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಿದೆ.
ಅಕ್ಕೊರ್ ಅಧ್ಯಕ್ಷ ಮತ್ತು ಸಿಇಒ ಸೆಬಾಸ್ಟಿಯನ್ ಬಝಿನ್, “ ಮೈಲಿಗಲ್ಲಿನ ಸಹಯೋಗ ಅಕ್ಕೊರ್ ಮತ್ತು ಅದರ ಬ್ರಾಂಡ್ ಗಳಿಗೆ ಭಾರತದಲ್ಲಿ ಪರಿವರ್ತನೀಯ ಕ್ಷಣವಾಗಿದೆ. ದೀರ್ಘಾವಧಿಯ ಯಶಸ್ವಿ ಮತ್ತು ವಿಶ್ವಾಸಾರ್ಹ ಪಾಲುದಾರ ಇಂಟರ್ ಗ್ಲೋಬ್ ಮತ್ತು ಭಾರತದಲ್ಲಿ ಅತ್ಯುತ್ತಮ ಆತಿಥ್ಯ, ತಂತ್ರಜ್ಞಾನ ಮತ್ತು ಉದ್ಯಮಶೀಲತೆ ಒಟ್ಟಿಗೆ ತರುವ ಮೂಲಕ ವಿಶ್ವದ ಅತ್ಯಂತ ಉತ್ಸಾಹಕರ ಪ್ರಯಾಣದ ಮಾರುಕಟ್ಟೆಗಳಲ್ಲಿ ಒಂದರಲ್ಲಿ ಅಸಾಧಾರಣ ಪ್ರಗತಿಯ ಸಾಮಥ್ರ್ಯ ಅನಾವರಣಗೊಳಿಸಲಿದ್ದೇವೆ” ಎಂದರು.
ಇಂಟರ್ ಗ್ಲೋಬ್ ಎಂಟಪ್ರ್ರೈಸಸ್ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್, “ಇಂಟರ್ ಗ್ಲೋಬ್ ನಲ್ಲಿ ಸದಾ ಪಾಲುದಾರರು ಹಾಗೂ ಸೇವೆ ಒದಗಿಸುವ ಅತಿಥಿಗಳಿಗೆ ಅರ್ಥಪೂರ್ಣ ಮತ್ತು ದೀರ್ಘಕಾಲೀನ ಬಾಂಧವ್ಯಗಳನ್ನು ನಿರ್ಮಿಸಲು ಬದ್ಧತೆಯಲ್ಲಿ ನಂಬಿಕೆ ಇರಿಸಿದ್ದೇವೆ. ಅಕ್ಕೊರ್ ನೊಂದಿಗೆ ಈ ಕಾರ್ಯತಂತ್ರೀಯ ಸಹಯೋಗದ ಮೂಲಕ ನಮ್ಮ ಎರಡು ದಶಕಗಳ ಸುದೀರ್ಘ ಬಾಂಧವ್ಯವನ್ನು ಮತ್ತಷ್ಟು ಸದೃಢಗೊಳಿಸಲು ಬಹಳ ಸಂತೋಷ ಹೊಂದಿದ್ದೇನೆ ಎಂದಿದ್ದಾರೆ

