ನಾದಬ್ರಹ್ಮ ಹಂಸಲೇಖ ಅವರಿಗೆ ಪದ್ಮಶ್ರೀ ಪ್ರಶಸ್ತಿಗಾಗಿ ಅಭಿಯಾನ – ನಟ ನೆನಪಿರಲಿ ಪ್ರೇಮ್
“ಸಾಹಿತಿಗಳ ಬರವಣಿಗೆ ಇಲ್ಲದೆ ನಾಯಕ ನಟರ ಮೆರವಣಿಗೆ ಇಲ್ಲ, ನಾಯಕರನ್ನು ತೆರೆಯ ಮೇಲೆ ಮೆರವಣಿಗೆ ಮಾಡುವ ಚಿತ್ರ ಸಾಹಿತಿಗಳಿಗೆ ಸೂಕ್ತ ಗೌರವ ಮತ್ತು ಮನ್ನಣೆ ಸಿಗುತ್ತಿಲ್ಲ. ಯಾರ್ಯಾರಿಗೋ ಪದ್ಮ ಪ್ರಶಸ್ತಿ ಲಭಿಸಿದೆ, ಕನ್ನಡದ ಹೆಮ್ಮೆಯ ಸಂಗೀತಗಾರ,ಸಾಹಿತಿ ನಾದಬ್ರಹ್ಮ ಹಂಸಲೇಖ ಅವರಿಗೆ ಇನ್ನೂ ಪದ್ಮಶ್ರೀ ಪ್ರಶಸ್ತಿ ಬಂದಿಲ್ಲದಿರುವುದು ಶೋಚನೀಯ ಸಂಗತಿ, ಹೀಗಾಗಿ ಪ್ರಶಸ್ತಿಗಾಗಿ ಅಭಿಯಾನ ಆರಂಭಿಸುವುದಾಗಿ ನಟ ನೆನಪಿರಲಿ ಪ್ರೇಮ್ ಹೇಳಿದ್ದಾರೆ.”

300ಕ್ಕೂ ಹೆಚ್ಚು ಚಿತ್ರಗಳಿಗೆ ಸಾಹಿತ್ಯ ಮತ್ತು ಸಂಗೀತ ನೀಡಿರುವ ಹಂಸಲೇಖ ಅವರಿಗೆ ಪದ್ಮಶ್ರೀ ಪ್ರಶಸ್ತಿ ಜೊತೆಗೆ ಜ್ಞಾನಪೀಠ ಪ್ರಶಸ್ತಿಗಾಗಿ ಅಭಿಯಾನ ಆರಂಭಿಸಲಾಗುವುದು, ಈ ನಿಟ್ಟಿನಲ್ಲಿ ಸಹಿ ಸಂಗ್ರಹ ಅಭಿಯಾನ ಆರಂಭಿಸಲಾಗುವುದು ಎಂದು ಮಾಹಿತಿ ಹಂಚಿಕೊಂಡರು
ಕವಿರತ್ನ ಡಾ, ನಾಗೇಂದ್ರ ಪ್ರಸಾದ್ ಅವರ ಸಾರ್ಥಕ ಸುವರ್ಣ ಕಾರ್ಯಕ್ರಮದ ಅಂಗವಾಗಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಹಂಚಿಕೊಂಡ ಅವರು, ನಾಯಕ ನಟರಿಗಾದರೆ ಅವರ ಅಭಿಮಾನಿಗಳು ನಮ್ಮ ಅಣ್ಣನಿಗೆ, ಬಾಸ್‍ಗೆ ಪ್ರಶಸ್ತಿ ಬಂದಿಲ್ಲ ಎಂದು ಧ್ವನಿ ಎತ್ತುತ್ತಾರೆ, ಆದರೆ ಚಿತ್ರ ಸಾಹಿತಿಗಳಿಗೆ ಅವರ ಪರವಾಗಿ ಯಾರೂ ಧ್ವನಿ ಎತ್ತುವುದಿಲ್ಲ, ಹೀಗಾಗಿ ನಾವು ಅವರ ಪರವಾಗಿ ಧ್ವನಿ ಎತ್ತುತ್ತೇವೆ ಎಂದರು
ಹಿರಿಯ ಗೀತಸಾಹಿತಿಗಳಾದ ಚಿ,ಉದಯ್ ಶಂಕರ್ ಬಳಿಕ ನಾದಬ್ರಹ್ಮ ಹಂಸಲೇಖ ಮುಂಚೂಣಿಯಲ್ಲಿದ್ದಾರೆ ಅವರಿಗೆ ಪದ್ಮಶ್ರೀ, ಜ್ಞಾನಪೀಠ ಪ್ರಶಸ್ತಿ ಬರಲಿಮ ನಂತರದ ದಿನಗಳಲ್ಲಿ ಕವಿರತ್ನ ಡಾ, ನಾಗೇಂದ್ರ ಪ್ರಸಾದ್ ಅವರಿಗೂ ಬರಲಿ. ಚಿತ್ರಸಾಹಿತಿಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಶಸ್ತಿಗಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು

ಡಾ.ನಾಗೇಂದ್ರ ಪ್ರಸಾದ್ ಬರೆದಿರುವ 3 ಸಾವಿರ ಹಾಡುಗಳಲ್ಲಿ ಬಹುತೇಕ ಹಿಟ್ ಆಗಿವೆ, ಆ ಮೂಲಕ ಚಿತ್ರದ ಯಶಸ್ವಿಗೆ ಕಾರಣವಾಗುವ ಜೊತೆಗೆ ನಾಯಕ-ನಾಯಕಿಯರಿಗೆ ಒಳ್ಳೆಯ ಹೆಸರು ತಂದುಕೊಟ್ಟಿವೆ. ಈ ನಿಟ್ಟಿನಲ್ಲಿ ಪ್ರತಿಷ್ಠಿತ ಪ್ರದ್ಮಶ್ರೀ ಬರುವುದು ಸೂಕ್ತ. ಡಾ, ನಾಗೇಂದ್ರ ಪ್ರಸಾದ್ ಅವರ ಸಾರ್ಥಕ ಸುವರ್ಣ ಕಾರ್ಯಕ್ರಮದ ಬಳಿಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಸಾರ್ಥಕ ಸುವರ್ಣ ಕಾರ್ಯಕ್ರಮದಲ್ಲಿ ಸ್ಟಾರ್ ನಟನಾಗಿ ಅಲ್ಲ, ನಾಗೇಂದ್ರ ಪ್ರಸಾದ್ ಸ್ನೇಹಿತನಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಮಾಹಿತಿ ಹಂಚಿಕೊಂಡರು

