ವಿಶ್ವಾದ್ಯಂತ “ಕಣ್ಣಪ್ಪ” ಚಿತ್ರದಲ್ಲಿ ಪ್ರಭಾಸ್ : ಏಪ್ರಿಲ್ 25 ರಂದು ಸಿನಿಮಾ ಬಿಡುಗಡೆ
ಕಾಯುವಿಕೆ ಕೊನೆಗೂ ಮುಗಿದಿದೆ..ಬಹುನಿರೀಕ್ಷಿತ ಪ್ಯಾನ್ ಇಂಡಿಯನ್ ಕಣ್ಣಪ್ಪ ಚಿತ್ರದಿಂದ ದೊಡ್ಡ ಅಪ್ಡೇಟ್ ಸಿಕ್ಕಿದೆ. ಕಣ್ಣಪ್ಪ ಚಿತ್ರದಲ್ಲಿ ನಟ ರೆಬೆಲ್ ಸ್ಟಾರ್ ಪ್ರಭಾಸ್ ನಟಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ ಕಣ್ಣಪ್ಪ ಚಿತ್ರದಲ್ಲಿನ ಪ್ರಭಾಸ್ ಅವರ ಫಸ್ಟ್ ಲುಕ್ ರಿವೀಲ್ ಮಾಡಿದೆ ಚಿತ್ರತಂಡ

ಭಾರತೀಯ ಚಿತ್ರರಂಗದಲ್ಲಿಯೇ ಬಹುನಿರೀಕ್ಷೆ ಹುಟ್ಟುಹಾಕಿರುವ ಕಣ್ಣಪ್ಪ ಚಿತ್ರದಲ್ಲಿ ಸ್ಟಾರ್ ತಾರಾಗಣವಿದೆ. ಸೌತ್ನ ಬಹುತೇಕ ಎಲ್ಲ ಇಂಡಸ್ಟ್ರಿಯ ಕಲಾವಿದರು ನಟಿಸಿದ್ದಾರೆ. ಪ್ರಭಾಸ್ ಪಾತ್ರ. ಇದೀಗ ಇದೇ ಪ್ರಭಾಸ್, ಕಣ್ಣಪ್ಪ ಚಿತ್ರದಲ್ಲಿ ರುದ್ರನಾಗಿ ಕಾಣಿಸಿಕೊಳ್ಳಲಿದ್ದಾರೆ. ಪಾತ್ರದ ಮೊದಲ ಲುಕ್ ಅನಾವರಣವಾಗಿದ್ದು, ರುದ್ರನ ಅವತಾರದಲ್ಲಿ ಪ್ರಭಾಸ್ ರಗಡ್ ಆಗಿಯೇ ಕಂಡಿದ್ದಾರೆ.
ಹರಡಿದ ತಲೆಗೂದಲು, ಕೈಯಲ್ಲಿ ಅರ್ಧ ಚಂದ್ರಾಕೃತಿ ಕೋಲು, ಕೊರಳಲ್ಲಿ ರುದ್ರಾಕ್ಷಿ ಮಾಲೆ, ಹೆಗಲಿಗೆ ಕೇಸರಿ ವಸ್ತ್ರ ಧರಿಸಿ, ಹಣೆಗೆ ವಿಭೂತಿ ಧರಿಸಿ ಮಂದಹಾಸದ ನಗುವಿನಲ್ಲಿಯೇ ರುದ್ರನ ಪಾತ್ರ ಕಂಡಿದೆ. ಅತ್ಯಾಧುನಿಕ ತಂತ್ರಜ್ಞಾನದ ಜತೆಗೆ ನೋಡುಗನಿಗೆ ಹೊಸ ಲೋಕದ ಪರಿಚಯ ಮಾಡಿಕೊಡಲು ಚಿತ್ರತಂಡ ತುದಿಗಾಲ ಮೇಲೆ ನಿಂತಿದೆ.
ಅಂದಹಾಗೆ, ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದ ಈ ಚಿತ್ರವನ್ನು ಬಹುಕೋಟಿ ವೆಚ್ಚದಲ್ಲಿ ವಿಷ್ಣು ಮಂಚು ಅವರ ತಂದೆ ಎಂ. ಮೋಹನ್ ಬಾಬು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಶಿವನ ಪಾತ್ರದಲ್ಲಿ ಅಕ್ಷಯ್ ಕುಮಾರ್ ಪೋಸ್ಟರ್ವೊಂದನ್ನು ಕಣ್ಣಪ್ಪ ಚಿತ್ರತಂಡ ಬಿಡುಗಡೆ ಮಾಡಿತ್ತು. ಈ ಸಿನಿಮಾ ಮೂಲಕ ಅವರು ಟಾಲಿವುಡ್ಗೆ ಪದಾರ್ಪಣೆ ಮಾಡಿದ್ದಾರೆ. ಇದೀಗ ರುದ್ರನಾಗಿ ಪ್ರಭಾಸ್ ಪಾತ್ರ ರಿವೀಲ್ ಆಗುತ್ತಿದ್ದಂತೆ, ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ಕೇನ್ಸ್ ಚಲನಚಿತ್ರೋತ್ಸವದಲ್ಲಿ ವಿಷ್ಣು ಮಂಚು, ಮೋಹನ್ ಬಾಬು ಮತ್ತು ಪ್ರಭುದೇವ ಅವರು ಪ್ರದರ್ಶಿಸಿದ ಚಿತ್ರದ ಟೀಸರ್ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿದೆ. ಅದ್ಭುತ ದೃಶ್ಯಗಳು, ಮೈನವಿರೇಳಿಸುವ ಸೆಟ್ ಈ ವೀರತೆಯ ಮಹಾಕಾವ್ಯದ ಬಗ್ಗೆ ಕೌತುಕ ಹೆಚ್ಚಿಸಿತ್ತು.
ಚಿತ್ರದಲ್ಲಿ ಕಣ್ಣಪ್ಪ ಪಾತ್ರದಲ್ಲಿ ವಿಷ್ಣು ಮಂಚು ನಟಿಸಿದರೆ, ಪ್ರೀತಿ ಮುಕುಂದನ್, ಮೋಹನ್ ಲಾಲ್, ಅಕ್ಷಯ್ ಕುಮಾರ್, ಕಾಜಲ್ ಅಗರ್ವಾಲ್ ಮತ್ತು ಪ್ರಭಾಸ್ ಸೇರಿ ಇನ್ನೂ ಹತ್ತಾರು ಘಟಾನುಘಟಿ ಕಲಾವಿದರು ಪಾತ್ರವರ್ಗದಲ್ಲಿದ್ದಾರೆ. ಕಣ್ಣಪ ಚಿತ್ರ ಏಪ್ರಿಲ್ 25ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

