Song from the innovative story film "Arindam" released

ಹೊಸತನದ ಕಥೆಯ “ಅರಿಂದಮ್” ಚಿತ್ರದ ಹಾಡು ಬಿಡುಗಡೆ - CineNewsKannada.com

ಹೊಸತನದ ಕಥೆಯ “ಅರಿಂದಮ್” ಚಿತ್ರದ ಹಾಡು ಬಿಡುಗಡೆ

ವಯಸಿಗೆ ಮೀರಿದಂಥ ನಡವಳಿಕೆ, ಬುದ್ದಿಶಕ್ತಿ ಹೊಂದಿದ ಯುವಕನೋರ್ವನ ಜೀವನದಲ್ಲಿ ದುಷ್ಟಶಕ್ತಿಗಳ ವಿರುದ್ದ ನಡೆಯುವ ಹೋರಾಟ ಹಾಗೂ ಪ್ರೀತಿ, ಪ್ರೇಮದ ಸುತ್ತ ನಡೆಯುವ ಘಟನೆಗಳೇ ಅರಿಂದಮ್. ಕಲ್ಕಿ ಅಗಸ್ತ್ಯ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದ ಎರಡು ಲಿರಿಕಲ್ ಹಾಡುಗಳ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.

ನಾಯಕನಾಗೂ ಕಾಣಿಸಿಕೊಂಡಿರುವ ಕಲ್ಕಿ ಅಗಸ್ತ್ಯ ಮಾತನಾಡಿ ಮೂಲತಃ ಧಾರವಾಡದವನು. ಉತ್ಸಾಹಿ ಯುವಕರೆಲ್ಲ ಸೇರಿ ಒಂದು ಸದಭಿರುಚಿಯ ಸಿನಿಮಾ ಮಾಡಿದ್ದೇವೆ. ಕಾಳಿ ಎಂಬ ಯುವಕನ ಜೀವನದ ಏಳು ಬೀಳುಗಳು, ಪ್ರೀತಿ ಪ್ರೇಮದ ಕಥೆಯನ್ನು ಈ ಚಿತ್ರದ ಮೂಲಕ ಹೇಳಲು ಪ್ರಯತ್ನಿಸಿದ್ದೇವೆ. ಇದು 2008ರಲ್ಲಿ ನಡೆಯುವ ಕಥೆ. ಅರಿ ಅಂದ್ರೆ ಶತೃ ದಮ್ ಅಂದ್ರೆ ನಾಶ ಮಾಡುವವನು ಶಿವ, ವಿಷ್ಣುವಿನ ಪ್ರತಿರೂಪ ಎಂದರ್ಥ.

ಕಾಳಿ 20 ವರ್ಷದವನಾದರೂ 40 ವರ್ಷದ ವ್ಯಕ್ತಿಯಂತೆ ವರ್ತಿಸುತ್ತಾನೆ. ಆತ ಕಡಿಮೆ ಮಾತಾಡ್ತಾನೆ, ಆದರೆ ಒಂದು ಮಾತಾಡಿದರೂ ಅದರಲ್ಲಿ ಹತ್ತು ಮಾತಿನ ತೂಕವಿರುತ್ತೆ. ಚಿಕ್ಕ ವಯಸಿನಲ್ಲೇ ತಾಯಿಯನ್ನು ಕಳೆದುಕೊಂಡ ಕಾಳಿ ತನ್ನವರು ಎನಿಸಿಕೊಂಡವರ ರಕ್ಷಣೆಗೆ ನಿಂತಾಗ ಆತನ ವಿರುದ್ದ ಒಂದು ಚಕ್ರವ್ಯೂಹವೇ ಸೃಷ್ಟಿಯಾಗುತ್ತೆ. ನಂತರ ಅದರಿಂದ ಆತ ಹೇಗೆ ಹೊರಬರುತ್ತಾನೆ ಎಂಬುದನ್ನು ಅರಿಂದಮ್ ಚಿತ್ರದ ಮೂಲಕ ಹೇಳ ಹೊರಟಿದ್ದೇನೆ. ಈಗಾಗಲೇ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು, ಸದ್ಯದಲ್ಲೇ ಡ್ಯುಯೆಟ್ ಹಾಡನ್ನು ರಿಲೀಸ್ ಮಾಡುತ್ತೇವೆ ಎಂದು ವಿವರಿಸಿದರು

ನಾಯಕಿ ಶ್ವೇತಾ ಭಟ್ ಮಾತನಾಡುತ್ತ ನಾನು ಮೊದಲಬಾರಿಗೆ ಬಣ್ಣ ಹಚ್ಚಿದ ಚಿತ್ರವಿದು. ಇದಾದ ನಂತರ ಮಹಾನಟಿಯಲ್ಲಿ ಭಾಗವಹಿಸಿ ಫೈನಲಿಸ್ಟ್ ಆದೆ. ಒಂದೆರಡು ಸೀರಿಯಲ್ ಹಾಗೂ ಚಿತ್ರಗಳಲ್ಲಿ ನಟಿಸಿದೆ. ಮಹಾನಟಿ ಶೋ ದೊಡ್ಡ ಹೆಸರು ಕೊಟ್ಟಿದೆ. ಈ ಸಿನಿಮಾದಲ್ಲಿ ನನ್ನದು ಒಬ್ಬ ಇನ್ನೋಸೆಂಟ್ ಹುಡುಗಿಯ ಪಾತ್ರ. ಆಕೆ ತನ್ನ ಜೀವನದಲ್ಲಿ ಯಾವ ರೀತಿಯ ಸಂದರ್ಭಗಳನ್ನು ಎದುರಿಸುತ್ತಾಳೆ ಎಂದು ಚಿತ್ರದಲ್ಲಿ ಹೇಳಲಾಗಿದೆ. ದಾಂಡೇಲಿಯಲ್ಲಿ ಎರಡು ತಿಂಗಳ ಕಾಲ ಚಿತ್ರೀಕರಿಸಲಾಗಿದೆ ಎಂದರು.

ಸಂಗೀತ ನಿರ್ದೇಶಕ ಸಂತೋಷ್ ಜೋಶ್ವ ಮಾತನಾಡಿ ಇದು ನನ್ನ ಮೂರನೇ ಚಿತ್ರ. 2 ಮಾಸ್ ಒಂದು ಲವ್ ಸಾಂಗ್ ಚಿತ್ರದಲ್ಲಿದೆ. ಬಿಜಿಎಂನಲ್ಲಿ ಎಲ್ಲ ರೀತಿಯ ಎಮೋಷನ್ಸ್ ಟ್ರೈ ಮಾಡಿದ್ದೇವೆ ಎಂದರು. ಉಳಿದಂತೆ ರಮಣ್, ಪ್ರವೀಣ್, ವಿನೋದ್ ಮುಂತಾದವರು ತಮ್ಮ ಪಾತ್ರಗಳ ಕುರಿತಂತೆ ಮಾತನಾಡಿದರು.ಕಯಾಜ್ ಅವರ ಛಾಯಾಗ್ರಹಣ, ಸುಬ್ಬು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin