“ಸೆಲೆಬ್ರಿಟಿ ವುಮೆನ್ಸ್ ಕಬ್ಬಡಿ ಲೀಗ್” ನ ಥೀಮ್ ಸಾಂಗ್ ಬಿಡುಗಡೆ
ನಿರ್ಮಾಪಕ, ನಿರ್ದೇಶಕ, ನಟ ನವರಸನ್ “ಸೆಲೆಬ್ರಿಟಿ ವುಮೆನ್ಸ್ ಕಬ್ಬಡಿ ಲೀಗ್” ಆಯೋಜಿಸುವ ಮೂಲಕ ಕ್ರೀಡಾಲೋಕಕ್ಕೂ ಪಾದಾರ್ಪಣೆ ಮಾಡಿದ್ದು ಸಿಡಬ್ಯು ಕೆಎಲ್ ಲಾಂಛನ ಮತ್ತು ನಟ ,ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಸಂಯೋಜಿಸಿರುವ “ಕಬ್ಬಡಿ ಕಬ್ಬಡಿ” ಥೀಮ್ ಸಾಂಗ್ ಬಿಡುಗಡೆ ಮಾಡಲಾಯಿತು

ವಿಧಾನ ಪರಷತ್ ಸದಸ್ಯ ಟಿ.ಎ ಶರವಣ ಅವರು . ಏಪ್ರಿಲ್ 5 ಹಾಗೂ 6 ರಂದು ಪಂದ್ಯಗಳು ನಡೆಯಲಿದೆ ಎನ್ನುವುದನ್ನು ಪ್ರಕಟಿಸಿದರು.
ಥೀಮ್ ಸಾಂಗ್ ಅನ್ನು ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಬಿಡುಗಡೆ ಮಾಡಿದರು. ಈ ವೇಳೆ ತಂಡಗಳ ಮಾಲೀಕರಾದ ಟಿ.ಎ ಶರವಣ, ನಿರ್ಮಾಪಕರಾ್ ಚೇತನ್ ಗೌಡ, ಸುರೇಶ್ ಗೌಡ, ರಾಜೇಶ್ ಗೌಡ, ಗೋವಿಂದರಾಜು ಹಾಗೂ ಗಜೇಂದ್ರ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಆಯೋಜಕರಾದ ನವರಸನ್ ಮಾತನಾಡಿ ಕಳೆದ ಕೆಲವು ದಿನಗಳ ಹಿಂದಷ್ಟೇ ” ಸಿಡಬ್ಯು ಕೆಎಲ್ಕೆಎಲ್ ಲಾಂಛನ ಬಿಡುಗಡೆ ಮಾಡಲಾಗಿತ್ತು. ನಟ ಚಂದನ್ ಶೆಟ್ಟಿ ತಮ್ಮ ಪುನೀತ್ ಈಗಿನ ಎಐ ತಂತ್ರಜ್ಞಾನದ ಮೂಲಕ ಹಾಡನ್ನು ಸಿದ್ದ ಮಾಡಿಕೊಟ್ಟಿದ್ದಾರೆ. ಮುಂದಿನ ಎಲ್ಲಾ ಕಾರ್ಯಕ್ರಮಗಳಲ್ಲೂ ಈ ಥೀಮ್ ಸಾಂಗ್ ಅನ್ನು ಬಳಸಿಕೊಳ್ಳಲಾಗುವುದು. ಏಪ್ರಿಲ್ 5 ಹಾಗೂ 6 ನಮ್ಮ “ಪಂದ್ಯಗಳು ಅದ್ದೂರಿಯಾಗಿ ನಡೆಯಲಿದೆ ಎಂದರು.

ಎಲ್ಲಾ ತಂಡಗಳ ಮಾಲೀಕರು ಹಾಗೂ ನಾಯಕಿಯರು ಸಿಡಬ್ಯು ಕೆಎಲ್ ” ಕುರಿತು ಮಾಹಿತಿ ಹಂಚಿಕೊಂಡರು

