Benkiiya Bale preeti Kole" movie to release on April 4th
ಏಪ್ರಿಲ್ 4 ರಂದು “ಬೆಂಕಿಯ ಬಲೆ ಪ್ರೀತಿಯ ಕೊಲೆ” ಚಿತ್ರ ಬಿಡುಗಡೆ
“ಪರಚಂಡಿ”, “ಆಘಾತ್ ಹ್ಯಾಂಗರ್”, ” ಕುಚುಕು”, “ಅಲೆಕ್ಸಾ”, “ಕುಂಟೆಬಿಲ್ಲೆ”, ” ಫಾದರ್” ಮುಂತಾದ ಚಿತ್ರಗಳಲ್ಲಿ ನಟಿಸಿರುವ ನಟ ಮೈಸೂರಿನ ಶಿವಾಜಿ ನಿರ್ಮಿಸಿ ನಿರ್ದೇಶಿಸಿ, ನಟಿಸಿರುವ “ಬೆಂಕಿಯ ಬಲೆ ಪ್ರೀತಿಯ ಕೊಲೆ” ಚಿತ್ರ ಇದೇ ಏಪ್ರಿಲ್ 4 ರಂದು ಬಿಡುಗಡೆಯಾಗಲಿದೆ

ವಿಶ್ವವನ್ನೇ ತಲ್ಲಣಗೊಳಿಸಿದ್ದ ಭಯಂಕರ ಕರೋನ ಲಾಕ್ ಡೌನ್ ನಂತರ ಬೆಂಗಳೂರಿನ ಕಲಾವಿದರ ಸಂಫದಲ್ಲಿ ಪ್ರದರ್ಶನಗೊಂಡ ಮೊದಲ ಕನ್ನಡ ಚಿತ್ರವಿದು. ಅಷ್ಟೇ ಅಲ್ಲ. ರಾಷ್ಟ್ರದ ಹಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಹಾಗೂ ಕುಟುಂಬದವರು ಸಹ ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿರುವುದು ವಿಶೇಷ.
ಹಲವು ವಿಶೇಷಗಳಿರುವ ಈ ಚಿತ್ರದ ತಾರಾಬಳಗದಲ್ಲಿ ಶಿವಾಜಿ, ಮಂಡ್ಯ ರಮೇಶ್. ಜಿ.ಬಿ ಸಿದ್ದೇ ಗೌಡ್ರು, ಧೀರಜ, ಮಹಾದೇವಮೂರ್ತಿ, ಶಿವಲಿಂಗೇಗೌಡ. ಮಲ್ಲಿಕಾರ್ಜುನ್, ನಿರಂಜನ್ ದೇಶಪ್ರೇಮಿ. ಸಲ್ಮಾನ್ ಲೋಕೇಶ್. ಮಿರ್ಲೆ ಮಂಜು. ವರ್ಣ ಸಿದ್ದರಾಜು ಪ್ರೀತಿ ಎಶಿಕಾ ಪವಿತ್ರ, ಸುಮ ಮುಂತಾದವರಿದ್ದಾರೆ.

