ಏಷ್ಯಾ ಪೆಸಿಫಿಕ್ ರ್ಯಾಲಿ ಚಾಂಪಿಯನ್ಶಿಪ್ನ ಲೀಡರ್ಬೋರ್ಡ್ನಲ್ಲಿ ಕರ್ಣ ಕಡೂರ್ ಗೆ ಅಗ್ರಸ್ಥಾನ
ತಮಿಳುನಾಡಿನ ಮದ್ರಾಸ್ ನಲ್ಲಿ ನಡೆದ ಎಫ್ಐಎ ಏಷ್ಯಾ ಪೆಸಿಫಿಕ್ ಚಾಂಪಿಯನ್ಶಿಫ್ ಇಂಡಿಯಾ ಸ್ಪರ್ದೆಯಲ್ಲಿ ಕರ್ಣ ಕಡೂರ್, ಮೂಸಾ ಶರೀಫ್ ಮೊದಲ ಸ್ಥಾನ ಗಳಿಸಿದ್ದಾರೆ. ಐದು ವಿಶೇಷ ಹಂತಗಳ ಪೈಕಿ ನಾಲ್ಕರಲ್ಲಿ ರಾಷ್ಟ್ರೀಯ ಚಾಂಪಿಯನ್ ಕರ್ಣ ಕಡೂರ್ ಮತ್ತು ಮೂಸಾ ಶೆರಿಫ್ ಅವರು ಅಗ್ರಸ್ಥಾನ ಪಡೆದಿದ್ದಾರೆ.

ಅರ್ಕಾ ಮೋಟಾರ್ಸ್ಪೋರ್ಟ್ಸ್ ಅನ್ನು ಪ್ರತಿನಿಧಿಸುವ ಕರ್ಣ ಕಡೂರ್ ಮತ್ತು ಶರೀಫ್, ಹಾಲಿ ಎಪಿಆರ್ಸಿ ವಿಜೇತರು ಮತ್ತು ತಂಡದ ಆಟಗಾರರಾದ ಹರ್ಕ್ರಿಶನ್ ವಾಡಿಯಾ ಮತ್ತು ಕುನಾಲ್ ಕಶ್ಯಪ್ ಅವರ ಮೇಲೆ ಮುನ್ನಡೆ ಕಾಯ್ದುಕೊಂಡರು. ಮೊದಲ ಹಂತವಾದ 4.9 ಕಿಮೀ ನಲ್ಲಿ ಮೊದಲ ಸ್ಥಾನ ಪಡೆದು ಮತ್ತು ನಂತರ 19.2 ಕಿಮೀ ದೂರದ ಎಸ್ಎಸ್ 2 ರಲ್ಲಿಯೂ ಅತ್ಯುತ್ತಮ ಸಮಯ ದಾಖಲಿಸಿ ಈ ಹಿರಿಮೆ ತನ್ನದಾಗಿಸಿಕೊಂಡಿದ್ದಾತೆ.
ಕರ್ಣ ಕಡೂರ್ ಕೊನೆಯ ಎರಡು ಹಂತಗಳಲ್ಲಿ ಭಾರಿ ಮುನ್ನಡೆ ಸಾಧಿಸಿ ಸ್ಪರ್ಧೆಯ ಕೊನೆಯ ದಿನದಂದು ಟೈಮ್ಶೀಟ್ಗಳಲ್ಲಿ ಅಗ್ರಸ್ಥಾನ ಪಡೆದರು. ಹರ್ ಕೃಷ್ಣನ್ ವಾಡಿಯಾ ಮತ್ತು ಕುನಲ್ ಕಶ್ಯಪ್ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದರು. ರಡು ಬಾರಿ ರಾಷ್ಟ್ರೀಯ ಚಾಂಪಿಯನ್ ಅಮಿತ್ರಜಿತ್ ಘೋಷ್ ಮತ್ತು ಸಹಚಾಲಕ ಅಶ್ವಿನ್ ನಾಯಕ್ ಮೂರನೇ ಸ್ಥಾನ ಪಡೆದರು. ಲೀಡರ್ಬೋರ್ಡ್ನ ಮೊದಲ ನಾಲ್ಕು ಸ್ಥಾನಗಳನ್ನೂ ಅರ್ಕಾ ಮೋಟಾರ್ಸ್ಪೋರ್ಟ್ನ ಚಾಲಕರು ಪಡೆದುಕೊಂಡಿದ್ದಾರೆ. ನಾಳೆ ಐದು ವಿಶೇಷ ಹಂತಗಳೊಂದಿಗೆ ಮುಕ್ತಾಯಗೊಳ್ಳಲಿದೆ.
ಇಂದಿನಫಲಿತಾಂಶಗಳು:
* ಕರ್ಣ ಕಡೂರ್ / ಮುಸಾ ಶೆರಿಫ್ (ಅರ್ಕಾ ಮೋಟಾರ್ಸ್ಪೋರ್ಟ್ಸ್) – (01:05:25.4 ಸೆಕೆಂಡ್)
* ಹರ್ ಕೃಷ್ಣ ವಾಡಿಯಾ / ಕುನಾಲ್ ಕಾಶ್ಯಪ್ (ಅರ್ಕಾ ಮೋಟಾರ್ಸ್ಪೋರ್ಟ್ಸ್) – (01:06:34.2 ಸೆಕೆಂಡ್)
* ಅಮಿತ್ರಜಿತ್ ಘೋಷ್ / ಅಶ್ವಿನ್ ನಾಯಕ್ (ಅರ್ಕಾ ಮೋಟಾರ್ಸ್ಪೋರ್ಟ್ಸ್) – (01:06:39.8 ಸೆಕೆಂಡ್)
* ಫಿಲಿಪ್ಪೋಸ್ ಮತ್ತಾಯಿ / ಹರಿಶ್ ಕೆಎನ್ (ಅರ್ಕಾ ಮೋಟಾರ್ಸ್ಪೋರ್ಟ್ಸ್) – (01:06:51.3 ಸೆಕೆಂಡ್)
* ಫಾಬಿದ್ ಅಹ್ಮೆರ್ / ಮಿಲೆನ್ ಜಾರ್ಜ್ (ಚೆಟ್ಟಿನಾಡ್ ಸ್ಪೋರ್ಟಿಂಗ್) – (01:06:56.1 ಸೆಕೆಂಡ್)

