ಏಷ್ಯಾ ಪೆಸಿಫಿಕ್ ರ್ಯಾಲಿ ಚಾಂಪಿಯನ್‍ಶಿಪ್: ಬೆಂಗಳೂರಿನ ಕರ್ಣ ಕಡೂರ್ ಸಾಧನೆ

ಮದ್ರಾಸ್ ಇಂಟರ್‍ನ್ಯಾಷನಲ್ ಸಕ್ರ್ಯೂಟ್‍ನಲ್ಲಿ ಆರಂಭಗೊಂಡ ಏಷ್ಯಾ ಪೆಸಿಫಿಕ್ ರ್ಯಾಲಿ ಚಾಂಪಿಯನ್‍ಶಿಪ್‍ನಲ್ಲಿ ಹಾಲಿ ರಾಷ್ಟ್ರೀಯ ಚಾಂಪಿಯನ್ ಅರ್ಕಾ ಮೋಟಾರ್‍ಸ್ಪೋಟ್ರ್ಸ್‍ನ ಕರ್ಣ ಕಡೂರ್ ಮತ್ತು ಮೂಸಾ ಶೆರಿಫ್ ವೇಗದ ಸಮಯ ದಾಖಲಿಸಿ ಮುನ್ನೆಡೆ ಗಳಿಸಿದ್ದಾರೆ.
ಬೆಂಗಳೂರಿನ ಕರ್ಣ ಕಡೂರ್ ಅನುಭವಿ ಸಹ-ಚಾಲಕ ಕೇರಳದ ಮೂಸಾ ಶೆರಿಫ್ ಅವರೊಂದಿಗೆ 1.45-ಕಿಮೀ ಅನ್ನು 2 ನಿಮಿಷ 50.9 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದ್ದಾರೆ
ಮೊದಲ ಲ್ಯಾಪ್ ನಂತರ ಅಮಿತ್ರಜೀತ್ ಘೋಷ್ ಮತ್ತು ಅಶ್ವಿನ್ ನಾಯಕ್ ವೇಗವನ್ನು ಹೆಚ್ಚಿಸಿದ್ದು ಕರ್ಣ ಕಡೂರ್ ತಮ್ಮ ಎರಡನೇ ಲೂಪ್‍ನಲ್ಲಿ 1 ನಿಮಿಷ, 24.4 ಸೆಕೆಂಡುಗಳ ಲ್ಯಾಪ್‍ನೊಂದಿಗೆ ದಿನದ ವೇಗದ ಚಾಲಕರಾಗಿದ್ದಾರೆ
ಜೇಸನ್ ಸಾಲ್ಡಾನ್ಹಾ ಮತ್ತು ಪಿವಿ ಶ್ರೀನಿವಾಸ ಮೂರ್ತಿ ದಿನದ ಅಂತ್ಯದಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಘೋಷ್ ಮತ್ತು ನಾಯಕ್ ಮೂರನೇ ಸ್ಥಾನಕ್ಕೆ ತೃಪ್ತರಾದರು. ವಂಸಿ ಮೆರ್ಲಾ ಅವರಿಂದ ಪ್ರಚಾರ ಪಡೆದ ಮತ್ತು ಮದ್ರಾಸ್ ಮತ್ತು ಮೋಟಾರ್ ಸ್ಪೋಟ್ರ್ಸ್ ಕ್ಲಬ್ ಆಯೋಜಿಸಿದ ರ್ಯಾಲಿ ಶನಿವಾರ ಆರು ಸ್ಪೆಷಲ್ ಹಂತಗಳು ಮತ್ತು ಭಾನುವಾರ ಐದು ಹಂತಗಳನ್ನು ಒಳಗೊಂಡಿರಲಿದೆ.