ಹೊಸ ಇನ್ಸಿಂಗ್ಸ್ ಆರಂಭಿಸಿದ ನಟಿ ರಾಗಿಣಿ: ಮೇ 18 ರಂದು “ಚಿತ್ರಸಂತೆ” ಪ್ರಶಸ್ತಿ ಪ್ರದಾನ ಸಮಾರಂಭ
ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ವಿಭಿನ್ನ ಚಿತ್ರಗಳಲ್ಲಿ ನಟಿಸಿ ಜನಮಾನಸದಲ್ಲಿ ಉಳಿದಿರುವ ನಟಿ ರಾಗಿಣಿ ದ್ವಿವೇದಿ, ಇದೀಗ ಹೊಸ ವೆಂಚರ್ ಆರಂಭಿಸಿದ್ದಾರೆ. ನಟಿ ರಾಗಿಣಿ ದ್ವಿವೇದಿ ವೆಂಚುರ್ಸ್ ಪ್ರೈವೈಟ್ ಲಿಮಿಟೆಡ್ ಆರಂಭಿಸುವ ಮೂಲಕ ಚಿತ್ರರಂಗದಲ್ಲಿ ವಿವಿದ ಯೋಜನೆ ಕೈಗೆತ್ತಿಕೊಳ್ಳುವ ಉದ್ದೇಶ ಹೊಂದಿದ್ದಾರೆ.

ನಟಿ ರಾಗಿಣಿ ಅವರ ಜೊತೆಗೆ ಚಿತ್ರಸಂತೆ, ಎವಿಆರ್ ಸಂಸ್ಥೆ ಸೇರಿದಂತೆ ವಿವಿಧ ಸಂಸ್ಥೆಗಳು ಕೈಜೋಡಿಸಿವೆ. ಈ ತಿಂಗಳ 24 ರಂದು ರಾಗಿಣಿ ಹುಟ್ಟುಹಬ್ಬಕ್ಕೂ ಮುನ್ನ ಹೊಸ ಯೋಜನೆ ಪ್ರಕಟಿಸಿದ್ದು ಇದೇ ತಿಂಗಳ 18 ರಂದು ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಗಿರೀಶ್ ಗೌಡ ನೇತೃತ್ವದಲ್ಲಿ ಕಳೆದ ಹದಿಮೂರು ವರ್ಷಗಳಿಂದ “ಚಿತ್ರಸಂತೆ” ಪ್ರಶಸ್ತಿ ಪ್ರದಾನ ಸಮಾರಂಭ ಅದ್ದೂರಿಯಾಗಿ ಆಯೋಜಿಸಿಕೊಂಡು ಬರುತ್ತಿದ್ದು, ಈ ವರ್ಷದ ಪ್ರಶಸ್ತಿ ಸಮಾರಂಭ ಮೇ 18 ರಂದು ಅದ್ದೂರಿಯಾಗಿ ನಡೆಯಲಿದೆ.
ನಟಿ ರಾಗಿಣಿ ದ್ವಿವೇದಿ, ಮಾತನಾಡಿ ಚಿತ್ರರಂಗದಲ್ಲಿ ದಶಕಗಳಿಗೂ ಹೆಚ್ಚು ಸಮಯದಿಂದ ಕೆಲಸ ಮಾಡಿದ್ದು ಚಿತ್ರರಂಗದಲ್ಲಿ ಇರುವ ಹಿನ್ನೆಲೆಯಲ್ಲಿ ಏನಾದರೂ ಕೊಡುಗೆ ನೀಡುವ ಉದ್ದೇಶ ಹೊಂದಲಾಗಿದೆ. ನನ್ನೊಂದಿಗೆ ಹಲವು ಸಮಾನ ಮನಸ್ಕ ಮಂದಿ ಕೈಜೋಡಿಸಿದ್ದು, ಇದರಿಂದ ಚಿತ್ರ ನಿರ್ಮಾಣ, ವಿವಿಧ ಕಾರ್ಪರೇಟ್, ಸಿನಿಮಾ ಮತ್ತು ಸಂಗೀತ ಕಾರ್ಯಕ್ರಮ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಳ್ಳುವ ಉದ್ದೇಶಹೊಂದಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.

ಜೊತೆಗೆ ಉತ್ತಮ ಕಥೆಗಾರರಿಗೆ ಅವಕಾಶ, 12 ರಿಂದ 18 ತಿಂಗಳಲ್ಲಿ ಚಿತ್ರ ನಿರ್ಮಾಣ ಮಹಿಳಾ ಪ್ರದಾನ ಚಿತ್ರ ನಿರ್ಮಾಣ, ಪ್ರಾಜೆಕ್ಟ್ ಶಕ್ತಿ ಯೋಜನೆ ಮೂಲಕ ಹೆಣ್ಣು ಮಕ್ಕಳ ಶಿಕ್ಷಣ, ಆರೋಗ್ಯದ ಕುರಿತು ಜಾಗೃತಿ, ಅವರ ಜೀವನಕ್ಕೆ ಸಹಕಾರ, ವೆಬ್ ಸೀರೀಸ್ ನಿರ್ಮಾಣ ಸೇರಿದಂತೆ ಹತ್ತು ಹಲವು ಯೋಜನೆ ಕೈಗೊಳ್ಳುವ ಉದ್ದೇಶವಿದೆ,ಆರಂಭದಿಂದ ಸಹಕಾರ ನೀಡಿದ್ದಿದ್ದೀರಿ ಅದನ್ನು ಮುಂದುವರಿಸಿ ಎಂದು ಕೇಳಿಕೊಂಡರು.
ಗಿರೀಶ್ ಗೌಡ ಮಾತನಾಡಿ ಚಿತ್ರಸಂತೆ” ವಾರ್ಷಿಕ ಪ್ರಶಸ್ತಿ ಸಮಾರಂಭಕ್ಕೆ ಹದಿಮೂರರ ಸಡಗರ. ಚಿತ್ರರಂಗದ ಗಣ್ಯರಿಗೆ ವಿವಿಧ ಆಯಾಮಗಳಲ್ಲಿ ಈ ಪ್ರತಿವರ್ಷ ಈ ಪ್ರಶಸ್ತಿ ನೀಡಲಾಗುವುದು. ಈವರೆಗೂ ಸ್ಯಾಂಡಲ್ ವುಡ್ ನ ಅನೇಕ ಸೂಪರ್ ಸ್ಟಾರ್ ಗಳು ನಮ್ಮ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಂಡು, ಪ್ರಶಸ್ತಿ ಸ್ವೀಕರಿಸಿ ನಮ್ಮ ಸಂಸ್ಥೆಯ ಗೌರವ ಹೆಚ್ಚಿಸಿದ್ದಾರೆ. ಎಂದರು
ನಟ ರಾಜವರ್ಧನ್ ಸೇರಿದಂತೆ ಮತ್ತಿತರಿದ್ದರು

