ಜೀ5 ಒಟಿಟಿಯಲ್ಲಿ ಸರಿಗಮಪ ಫಿನಾಲೆ ಪ್ರಸಾರ
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕರ್ನಾಟಕದ ಅತಿದೊಡ್ಡ ಸಿಂಗಿಂಗ್ ರಿಯಾಲಿಟಿ ಶೋ ಸರಿಗಮಪ ಫಿನಾಲೆಯನ್ನು ಭಾರತದ್ದೇ ಆದ ಅತಿದೊಡ್ಡ ಬಹುಭಾಷಾ ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಜೀ5 ನಲ್ಲಿ ನೇರಪ್ರಸಾರ ಮಾಡಲಾಗುತ್ತಿದೆ

ಕನ್ನಡ ಕಿರುತೆರೆಯಲ್ಲಿ ತನ್ನದೇ ಆದ ಛಾಪನ್ನು ಸೃಷ್ಟಿಸಿರುವ ರಿಯಾಲಿಟಿ ಶೋ ‘ಸ ರಿ ಗ ಮ ಪ’. ಟಿವಿಗಿಂತ ಮೊದಲು ಜೀ5 ನಲ್ಲಿ ‘ಸ ರಿ ಗ ಮ ಪ ಫಿನಾಲೆ’ ನೇರಪ್ರಸಾರವಾಗುವುದರ ಮೂಲಕ ಕನ್ನಡಿಗರ ಅಚ್ಚುಮೆಚ್ಚಿನ ರಿಯಾಲಿಟಿ ಶೋ ವಿಭಿನ್ನವಾಗಿ ಒಟಿಟಿ ಪ್ಲಾಟ್ಫಾರ್ಮ್ ಗೆ ಪಾದಾರ್ಪಣೆ ಮಾಡುತ್ತಿದೆ.
ಜೀ5 ಈ ಆವೃತ್ತಿಯ ‘ಮೋಸ್ಟ್ ಪಾಪ್ಯುಲರ್ ಸಿಂಗರ್’ ನ ಹುಡುಕಾಟದಲ್ಲಿದ್ದು ಇದರ ಆಯ್ಕೆಯಲ್ಲಿ ಚಂದಾದಾರರು ಪಾಲ್ಗೊಳ್ಳಬಹುದಾಗಿದೆ. ಆಯ್ಕೆ ಪ್ರಕ್ರಿಯೆಯು ಮೇ 16 ರಿಂದ ಮೇ 22 ರ ವರೆಗೆ ನಡೆಯಲಿದ್ದು ಚಂದಾದಾರರು ತಮ್ಮ ನೆಚ್ಚಿನ ಗಾಯಕನಿಗೆ ಜೀ 5 ಆಪ್ ಮೂಲಕ ವೋಟ್ ಮಾಡಬಹುದಾಗಿದೆ ಮತ್ತು ಆಸಕ್ತಿಕರ ಬಹುಮಾನಗಳ ವಿಜೇತರಾಗುವ ಎಲ್ಲಾ ಚಾನ್ಸ್ ಗಳು ಇವೆ.
.
‘ಸ ರಿ ಗ ಮ ಪ ಫಿನಾಲೆ’ಯ ನಿರೂಪಣಾ ಜವಾಬ್ದಾರಿಯನ್ನು ಅನುಶ್ರೀ ಹೊತ್ತಿದ್ದಾರೆ. ತೀರ್ಪುಗಾರರಾದ ವಿಜಯ ಪ್ರಕಾಶ್, ರಾಜೇಶ್ ಕೃಷ್ಣನ್ ಮತ್ತು ಅರ್ಜುನ್ ಜನ್ಯ ಫಿನಾಲೆಯಲ್ಲಿಯೂ ತಮ್ಮ ಗೈಡೆನ್ಸ್ ನ ಸ್ಪರ್ಧಿಗಳಿಗೆ ಕೊಡಲಿದ್ದಾರೆ.
ಜೀ 5 ಮತ್ತು ಜೀ ಕನ್ನಡ ಬಿಸಿನೆಸ್ ಹೆಡ್ ಆಗಿರುವ ದೀಪಕ್ ಶ್ರೀರಾಮುಲು ಪ್ರತಿಕ್ರಿಯಿಸಿ “ಪ್ರಾದೇಶಿಕ ಕಂಟೆಂಟ್, ಮ್ಯೂಸಿಕ್ ಇವೆಲ್ಲ ಜೀ 5 ನ ಬೆಳವಣಿಗೆಯ ಆಧಾರ ಸ್ಥಂಭವಾಗಿದೆ. ಕರ್ನಾಟಕದ ಸಂಗೀತ ಪರಂಪರೆಯನ್ನು ಎತ್ತಿಹಿಡಿಯುವ ಸ ರಿ ಗ ಮ ಪ ರಿಯಾಲಿಟಿ ಶೋ ಜೀ5 ನಲ್ಲಿ ನೇರಪ್ರಸಾರ ಆಗಯುತ್ತಿದ್ದು ಪ್ರಪಂಚದ ಎಲ್ಲಾ ಮೂಲೆಯ ಜನರು ಈ ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದೆ ಮತ್ತು ಇದು ನಮಗೆ ಹೆಮ್ಮೆಯ ವಿಷಯವೇ ಸರಿ ಎಂದಿದ್ದಾರೆ
ಡಿಜಿಟಲ್ ನಲ್ಲಿ ಮೊದಲು ಎಂಬ ಕಾನ್ಸೆಪ್ಟ್ ಒಂದಿಗೆ ಜೀ5 ನಲ್ಲಿ ರೀಜನಲ್ ಎಂಟರ್ಟೈನ್ಮೆಂಟ್ ನ ಪ್ರಸಾರ ಮಾಡುವ ಮೂಲಕ ಎಲ್ಲಾ ವರ್ಗದ ಜನರಿಗೆ ಈಗ ನಾವು ಮತ್ತಷ್ಟು ಹತ್ತಿರವಾಗಲಿದ್ದೇವೆ. ಡಿಜಿಟಲ್ ಪ್ಲಾಟ್ಫಾರ್ಮ್ ನಲ್ಲಿ ಇದೇ ಮೊದಲು ಈ ರೀತಿಯ ಹೆಜ್ಜೆಯನ್ನು ತೆಗೆದುಕೊಂಡಿರುವುದು ಮತ್ತು ಮುಂದಿನ ದಿನಗಳಲ್ಲಿ ನಮ್ಮಿಂದ ವೀಕ್ಷಕರು ಇನ್ನಷ್ಟು ಎಗ್ಸೈಟಿಂಗ್ ಪ್ರಯೋಗಗಳನ್ನು ನಿರೀಕ್ಷಿಸಬಹುದಾಗಿದೆ” ಎಂದಿದ್ದಾರೆ.
‘ಸ ರಿ ಗ ಮ ಪ ಫಿನಾಲೆ’ ನೇರಪ್ರಸಾರ ಜೀ 5 ಆಪ್ ನಲ್ಲಿ ಇದೇ ಮೇ 23 ರಂದು ಪ್ರಸಾರವಾಗಲಿದೆ.

