ಸರಿಗಮಪ ರಿಯಾಲಿಟಿ ಶೋ: ಟಿಕೆಟ್ ಟು ಫಿನಾಲೆ ಯಾರಿಗೆ
ಕನ್ನಡದ ಟಿ.ವಿ ಇತಿಹಾಸದಲ್ಲಿ ಅತಿ ಹೆಚ್ಚು ಜನಮನ್ನಣೆ ಗಳಿಸಿದ ಸಿಂಗಿಂಗ್ ರಿಯಾಲಿಟಿ ಶೋ ಸರಿಗಮಪ. 6 ವರುಷದಿಂದ 60 ವರುಷದವರೆಗಿನ ವಯೋಮಿತಿಯ ಸ್ಪರ್ಧಿಗಳು ಭಾಗವಹಿಸುತ್ತಿರುವ ಈ ಸೀಸನ್ ವಿಭಿನ್ನ ಪರಿಕಲ್ಪನೆಯೊಂದಿಗೆ ಮತ್ತಷ್ಟು ಆಸಕ್ತಿದಾಯಕವಾಗಿ ಮೂಡಿ ಬರುತ್ತಿದೆ

ಅಷ್ಟೇ ಅಲ್ಲದೇ ತೀರ್ಪುಗಾರರಾದ ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್, ಕಂಚಿನ ಕಂಠದ ಗಾಯಕ ವಿಜಯ ಪ್ರಕಾಶ್, ಮಾಜಿಕಲ್ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಮತ್ತು ಜನಪ್ರಿಯ ಆಂಕರ್ ಅನುಶ್ರೀ ಈ ಆವೃತ್ತಿಯ ಅತೀ ದೊಡ್ಡ ಹೈಲೈಟ್.
ಫಿನಾಲೆ ಹತ್ತಿರ ಬರುತ್ತಿದ್ದಂತೆ ಜನರ ಕುತೂಹಲ,ನಿರೀಕ್ಷೆ ಹೆಚ್ಚಾಗುವುದರ ಜೊತೆಗೆ ಸ್ಪರ್ಧೆಯೂ ಮತ್ತಷ್ಟು ಕಠಿಣವಾಗುತ್ತಿದೆ. ಈ ವಾರ ನಡೆಯಲಿರುವ ‘ಟಿಕೆಟ್ ಟು ಫಿನಾಲೆ’ಯಲ್ಲಿ 13 ಸ್ಪರ್ಧಿಗಳು- ಬಾಳು ಬೆಳಗುಂದಿ, ಭೂಮಿಕಾ, ದ್ಯಾಮೇಶ, ಕಾರ್ತಿಕ್, ಲಹರಿ, ಮನೋಜ್, ಅಮೋಘ ವರ್ಷ, ರಶ್ಮಿ ಡಿ, ಸುಧೀಕ್ಷಾ, ದೀಪಕ್, ಆಗಮ ಶಾಸ್ತ್ರೀ, ಶಿವಾನಿ, ಮತ್ತು ಆರಾಧ್ಯ ರಾವ್ ನಡುವೆ ಹಣಾಹಣಿ ನಡೆಯಲಿದೆ. ಇನ್ನು ನೇರವಾಗಿ ಫಿನಾಲೆಗೆ ಟಿಕೆಟ್ ಪಡೆಯಲಿರುವ ಆಒಬ್ಬ ಲಕ್ಕಿ ಸ್ಪರ್ಧಿ ಯಾರು ಎನ್ನುವುದು ಕುತೂಹಲ ಮೂಡಿಸಿದೆ..

ಈ ವಾರ ನಡೆಯಲಿರುವ ಟಿಕೆಟ್ ಟು ಫಿನಾಲೆ ಎಪಿಸೋಡ್ ಗೆ ಮತ್ತಷ್ಟು ರಂಗು ನೀಡಲು ಕನ್ನಡ ಚಿತ್ರರಂಗದ ಖ್ಯಾತ ನಟ ಶರಣ್ ಮತ್ತು ನಟಿ ಅದಿತಿ ಪ್ರಭುದೇವ ಆಗಮಿಸುತ್ತಿದ್ದಾರೆ. ಶರಣ್ ಕಾಮಿಡಿ, ಅದಿತಿ ಪ್ರಭುದೇವ ಚಾರ್ಮ್ ‘ಟಿಕೆಟ್ ಟು ಫಿನಾಲೆ’ ಎಪಿಸೋಡ್ ನ ಕಲರ್ ಫುಲ್ ಮಾಡೋದು ಅಲ್ಲದೇ ಸ್ಪರ್ಧಿಗಳ ಹುಮ್ಮಸ್ಸನ್ನು ಹೆಚ್ಚಿಸಲಿದೆ. ಸ ರಿ ಗ ಮ ಪ ಟಿಕೆಟ್ ಟು ಫಿನಾಲೆ’ ಎಪಿಸೋಡ್ ಇದೇ ಶನಿವಾರ ಮತ್ತು ಭಾನುವಾರ ಸಂಜೆ 7:30 ಕ್ಕೆ ಪ್ರಸಾರವಾಗಲಿದೆ.

