ಲಿಟಲ್ ಎಲ್ಲೀ ಪ್ರಿಸ್ಕೂಲ್” ಎರಡು ವರ್ಷಗಳಲ್ಲಿ ಕರ್ನಾಟಕದಲ್ಲಿ 100 ಶಾಲೆ ವಿಸ್ತರಿಸುವ ಗುರಿ

ದೇಶದ ಅಗ್ರಗಣ್ಯ ಪ್ರಿಸ್ಕೂಲ್ ಸರಪಳಿಯಾದ ಲಿಟಲ್ ಎಲ್ಲೀ, ಮುಂದಿನ ಎರಡು ವರ್ಷಗಳಲ್ಲಿ ಕರ್ನಾಟಕದಾದ್ಯಂತ ತನ್ನ ಜಾಲವನ್ನು 100 ಶಾಲೆಗಳಿಗೆ ವಿಸ್ತರಿಸುವ ಮಹತ್ವಾಕಾಂಕ್ಷೆಯ ಯೋಜನೆ ಪ್ರಕಟಿಸಿದೆ. ಈ ಕ್ರಮದಿಂದ ರಾಜ್ಯದಾದ್ಯಂತ ಗುಣಮಟ್ಟದ ಆರಂಭಿಕ ಶಿಕ್ಷಣವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಪ್ರಸ್ತುತ, ಲಿಟಲ್ ಎಲ್ಲೀ ಬೆಂಗಳೂರು, ಮಂಗಳೂರು, ಮೈಸೂರು ಮತ್ತು ಹಾಸನ ಸೇರಿದಂತೆ ಕರ್ನಾಟಕದಲ್ಲಿ 108 ಪ್ರಿಸ್ಕೂಲ್‌ಗಳನ್ನು ನಡೆಸುತ್ತಿದೆ. ಸಂಸ್ಥೆ ಈ ನಗರಗಳಲ್ಲಿ ಉಪಸ್ಥಿತಿ ಬಲಪಡಿಸುವುದರ ಜೊತೆಗೆ, ತುಮಕೂರು, ಧಾರವಾಡ, ರಾಯಚೂರು ಮತ್ತು ಬೆಳಗಾವಿಯಂತಹ ಎರಡು ಮತ್ತು ಮೂರನೇ ಹಂತದ ನಗರಗಳಿಗೂ ವಿಸ್ತರಿಸಲು ಯೋಜಿಸಿದೆ.
ಲಿಟಲ್ ಎಲ್ಲೀ ಭಾರತದ 17 ನಗರಗಳಲ್ಲಿ ಹಾಗೂ ದುಬೈ ಮತ್ತು ಸಿಯಾಟಲ್‌ನಲ್ಲಿ 150ಕ್ಕೂ ಹೆಚ್ಚು ಶಾಲೆಗಳನ್ನು ನಡೆಸುತ್ತಿದೆ. ಹೆಚ್ಚಿನ ಮಹತ್ವಾಕಾಂಕ್ಷೆಯೊಂದಿಗೆ, ಮುಂದಿನ ಮೂರು ವರ್ಷಗಳಲ್ಲಿ ಭಾರತದಾದ್ಯಂತ ತನ್ನ ಜಾಲವನ್ನು 300 ಶಾಲೆಗಳಿಗೆ ವಿಸ್ತರಿಸಲು ಗುರಿ ಹೊಂದಿದೆ, ಇದರಿಂದ ಪೂರ್ವ ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಲಿದೆ.
2004ರಲ್ಲಿ ಸ್ಥಾಪನೆಯಾದ ಲಿಟಲ್ ಎಲ್ಲೀ, ಪ್ರತಿ ವರ್ಷ 9,000ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ. ಮಾಂಟೆಸ್ಸರಿ, ವಾಲ್ಡೋರ್ಫ್, ಗಾರ್ಡ್ನರ್ ಅವರ ಬಹು ಬುದ್ಧಿವಂತಿಕೆ ಸಿದ್ಧಾಂತ ಮತ್ತು ಬ್ಲೂಮ್ಸ್ ಟ್ಯಾಕ್ಸಾನಮಿ ಸೇರಿದಂತೆ ಹಲವಾರು ಶಿಕ್ಷಣ ವಿಧಾನಗಳನ್ನು ಸಂಯೋಜಿಸಿದ ವಿಶಿಷ್ಟ “H.A.P.P.Y” ಪಠ್ಯಕ್ರಮ ಹನೀಡುತ್ತದೆ.ಬದಲಾಗುತ್ತಿರುವ ಅಗತ್ಯಗಳಿಗೆ ಅನುಗುಣವಾಗಿ ಸಮಗ್ರ ಮತ್ತು ರಚನಾತ್ಮಕ ಕಲಿಕಾ ಅನುಭವ ನೀಡುತ್ತದೆ.ಈ ಗುಂಪು ಪ್ರಮುಖ ಕಂಪನಿಗಳ ಉದ್ಯೋಗಿಗಳಿಗಾಗಿ ಎಲ್ಲೀ ಚೈಲ್ಡ್ ಕೇರ್ ಎಂಬ ಕಾರ್ಪೊರೇಟ್ ಶಿಶುಪಾಲನಾ ಸೇವೆಯನ್ನೂ ನೀಡುತ್ತಿದೆ.
ಲಿಟಲ್ ಎಲ್ಲೀ ಸಹ-ಸಂಸ್ಥಾಪಕ ಮತ್ತು ನಿರ್ದೇಶಕ ಪ್ರೀತಿ ಭಂಡಾರಿ ಮಾತನಾಡಿ ಸಮಗ್ರ ಬಾಲ್ಯ ಶಿಕ್ಷಣದ ಮಹತ್ವದ ಬಗ್ಗೆ ಪೋಷಕರಲ್ಲಿ ಹೆಚ್ಚುತ್ತಿರುವ ಅರಿವು ನಮ್ಮ ವಿಸ್ತರಣಾ ನಿರ್ಧಾರಗಳಿಗೆ ಪ್ರೇರಣೆಯಾಗಿದೆ.ಬದಲಾವಣೆಯು ಮಹಾನಗರಗಳಲ್ಲಿ ಮಾತ್ರವಲ್ಲದೆ, ಗುಣಮಟ್ಟದ ಆರಂಭಿಕ ಶಿಕ್ಷಣಕ್ಕಾಗಿ ಬೇಡಿಕೆ ಹೆಚ್ಚುತ್ತಿರುವ ಟಿಯರ್ 2 ಮತ್ತು ಟಿಯರ್ 3 ನಗರಗಳಲ್ಲೂ ಕಂಡುಬರುತ್ತಿದೆ. ಈ ವಿಸ್ತರಣಾ ಯೋಜನೆಯು ಗುಣಮಟ್ಟದ ಶಿಕ್ಷಣವನ್ನು ನೀಡುವ ಮತ್ತು ಯುವ ಮನಸ್ಸುಗಳನ್ನು ಪೋಷಿಸುವ ಲಿಟಲ್ ಎಲ್ಲೀಯ ಬದ್ಧತೆಯನ್ನು ಮತ್ತಷ್ಟು ದೃಢಪಡಿಸುತ್ತದೆ” ಎಂದು ಹೇಳಿದ್ದಾರೆ
ಲಿಟಲ್ ಎಲ್ಲೀ ಸಿಇಒ ಅಮಿತ್ ತಿವಾರಿ ಮಾತನಾಡಿ , “ದಕ್ಷಿಣದಲ್ಲಿ ಬಲವಾದ ಉಪಸ್ಥಿತಿ ಕಟ್ಟಿಕೊಂಡು, ದಕ್ಷಿಣ ಭಾರತದಲ್ಲಿ ಮತ್ತಷ್ಟು ವಿಸ್ತರಣೆಗೆ ಆದ್ಯತೆ ನೀಡುತ್ತಿದ್ದೇವೆ. ಪ್ರಸ್ತುತ 17 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಸಂಸ್ಥೆಯು 2027ರ ವೇಳೆಗೆ ದೇಶಾದ್ಯಂತ 40 ನಗರಗಳಿಗೆ ವಿಸ್ತರಿಸುವ ಗುರಿ ಹೊಂದಿದೆ. ನಮ್ಮ ವಿಸ್ತರಣೆಯು ಸಂಪೂರ್ಣವಾಗಿ ಫ್ರಾಂಚೈಸಿ ಮಾದರಿಯ ಮೂಲಕ ನಡೆಯಲಿದ್ದು, ಸ್ಥಳೀಯ ಉದ್ಯಮಿಗಳಿಗೆ ಲಿಟಲ್ ಎಲ್ಲೀ ತಂಡದ ಭಾಗವಾಗಲು ಅವಕಾಶ ನೀಡಲಿದೆ ಎಂದಿದ್ದಾರೆ