South United Football Club appoints Mohammed Rafique as CEO

ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಗೆ ಸಿಇಓ ಆಗಿಮುಖ್ಯ ಮೊಹಮ್ಮದ್ ರಫೀಕ್ ನೇಮಕ - CineNewsKannada.com

ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಗೆ ಸಿಇಓ ಆಗಿಮುಖ್ಯ ಮೊಹಮ್ಮದ್ ರಫೀಕ್ ನೇಮಕ

ಬೆಂಗಳೂರಿನ ಹಲಸೂರಿನಲ್ಲಿರುವ ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ತನ್ನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಮೊಹಮ್ಮದ್ ರಫೀಕ್ ಅವರನ್ನು ನೇಮಕ ಮಾಡಿದೆ

ಭಾರತೀಯ ಫುಟ್ಬಾಲ್ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಮೊಹಮ್ಮದ್ ರಫೀಕ್ ಹಿರಿಯ ವೃತ್ತಿಪರ ತಂಡಗಳಲ್ಲಿ ಉನ್ನತ ಸ್ಥಾನಗಳನ್ನು ಹೊಂದುವವರೆಗೂ ಎಲ್ಲಾ ಹಂತದ ಫುಟ್‌ಬಾಲ್ ನಿರ್ವಹಣೆಯಲ್ಲಿ ಕೆಲಸ ಮಾಡಿದ್ದಾರೆ.  ಫಿಫಾ, ಎಐಎಫ್ ಎಫ್ ಮತ್ತು ಸರ್ಕಾರದ ಸಂಸ್ಥೆಗಳ ಸಹಯೋಗದಲ್ಲಿ ಭಾರತೀಯ ಫುಟ್ಬಾಲ್‌ನಲ್ಲಿ ವಿಶೇಷ ಯೋಜನೆ ರೂಪಿಸಿ ಕಾರ್ಯಗತಗೊಳಿಸಿದ್ದಾರೆ. 

ಇಂಡಿಯನ್ ಸೂಪರ್ ಲೀಗ್ ತಂಡದ ಫುಟ್‌ಬಾಲ್ ನಿರ್ದೇಶಕ,  ಕೇರಳ ಬ್ಲಾಸ್ಟರ್ಸ್ ಎಫ್‌ಸಿ ಮತ್ತು ಬೆಂಗಳೂರಿನ ಓಜೋನ್ ಎಫ್‌ಸಿಯ ಸಿಇಒ ಸೇರಿ ಪ್ರಮುಖ  ನಾಯಕತ್ವದ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಕೇರಳ ಬ್ಲಾಸ್ಟರ್ಸ್ ತಂಡದ ಯಶಸ್ಸಿನಲ್ಲಿ ರಫೀಕ್ ಪ್ರಮುಖ ಪಾತ್ರ ವಹಿಸಿದ್ದಾರೆ.

ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನ ನೂತನ ಸಿಇಒ ಆಗಿ ನೇಮಕವಾಗಿರುವುದರ ಬಗ್ಗೆ ಸಂತಸ ವ್ಯಕ್ತ ಪಡಿಸಿದ ರಫೀಕ್ ಜವಾಬ್ದಾರಿ ನಿಭಾಹಿಸುವುದಕ್ಕೆ ಉತ್ಸುಹಕನಾಗಿದ್ದೇನೆ.ಈ ಯೋಜನೆಯ ಯಶಸ್ಸಿಗೆ ಮತ್ತಷ್ಟು ಸೇವೆ ಸಲ್ಲಿಸುವ ನನ್ನ ಗುರಿಗೆ ಇದು ಅತ್ಯುತ್ತಮ ವೇದಿಕೆಯಾಗಿದೆ. ನನ್ನ ಅನುಭವ ಮತ್ತು ಸಂಪರ್ಕಗಳನ್ನು ಬಳಸಿಕೊಂಡು ಯುವ ಆಟಗಾರರು ಪ್ರಗತಿ ಸಾಧಿಸಲು ಮತ್ತು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ತಲುಪಲು ಮಾರ್ಗವನ್ನು ನಿರ್ಮಿಸಲು ನಾನು ಉತ್ಸುಕರಾಗಿದ್ದೇನೆ ಎಂದಿದ್ದಾರೆ. 

ನಾರೋಮ್ ಮಹೇಶ್ ಸಿಂಗ್, ಕೆ.ಪಿ. ರಾಹುಲ್, ಮತ್ತು ವಿಭಿನ್ ಮೊಹನನ್ ಎಂಬ ಆಟಗಾರರ ಪ್ರಗತಿಯನ್ನು ಸಮೀಕ್ಷಿಸಿ, ISL‌ನಲ್ಲಿ ಅವರ ಮೊಟ್ಟ ಮೊದಲ ಪಂದ್ಯದಿಂದ ಹಿಡಿದು ಭಾರತೀಯ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಮಟ್ಟಕ್ಕೆ ತಲುಪಲು ರಫೀಕ್ ಸಹಾಯ ಮಾಡಿದ್ದಾರೆ.


Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin