ಮರಳಿದ ಹರಿತ್ ನೋಹ್; ದಕ್ಷಿಣ ಆಫ್ರಿಕಾದ ಸಫಾರಿ ರಾಲಿಯಲ್ಲಿ ಭಾಗಿ
ಡಕಾರ್ ರಾಲಿಯಲ್ಲಿ ಕೈ ಮುರಿದುಕೊಂಡು ಸ್ಪರ್ಧೆಯಿಂದ ಹೊರಗುಳಿದ ಭಾರತದ ಅಗ್ರಸ್ಥಾನದಲ್ಲಿರುವ ರ‍್ಯಾಲಿ ರೈಡರ್ ಹರಿತ್ ನೋಹ್ ಮತ್ತೆ ಸ್ಪರ್ಧೆಗೆ ಮರಳಿದ್ದಾರೆ. 2024ರ ಡಕಾರ್ ರಾಲಿ ರೇಸ್ ಅನ್ನು ಗೆದ್ದಿದ್ದ ಹರಿತ್ ಇದೀಗ ದಕ್ಷಿಣ ಆಫ್ರಿಕಾದ ಸಫಾರಿ ರ‍್ಯಾಲಿಯಲ್ಲಿ ಮತ್ತೆ ಪಾಲ್ಗೊಳ್ಳಲಿದ್ದಾರೆ

ಎಫ್‌ಐಎ ಎಫ್‌ಐಎಂ ವರ್ಲ್ಡ್ ರಾಲಿ-ರೇಡ್ ಚಾಂಪಿಯನ್‌ಶಿಪ್ 2025ರ ಮೂರನೇ ಸುತ್ತಾಗಿ ನಡೆಯುವ ದಕ್ಷಿಣ ಆಫ್ರಿಕಾದ ಸಫಾರಿ ರಾಲಿಯಲ್ಲಿ, ಭಾರತದ ಹರಿತ್ ನೋಹ್ ಸ್ಪರ್ಧಿಸುತ್ತಿದ್ದಾರೆ. ಮೇ 18 ರಿಂದ 24 ರವರೆಗೆ ಸನ್ ಸಿಟಿ ರಿಸಾರ್ಟ್‌ನಿಂದ ರ‍್ಯಾಲಿ ಆರಂಭವಾಗಲಿದೆ.
ಶೆರ್ಕೋ ಟಿವಿಎಸ್ ರಾಲಿ ಫ್ಯಾಕ್ಟರಿ ತಂಡದ ಸದಸ್ಯರಾದ ಹರಿತ್, ಡಕಾರ್ 2025ರ ಪ್ರೊಲೋಗ್ ಹಂತದಲ್ಲಿ ಬಿದ್ದ ಪರಿಣಾಮ ಕೈ ಮುರಿದುಕೊಂಡಿದ್ದರು, ಹಂತವನ್ನು ಪೂರ್ಣಗೊಳಿಸಿದ್ದರು. ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಹರಿತ್ ಈಗ, ನಾಲ್ಕು ತಿಂಗಳ ಚಿಕಿತ್ಸೆಯ ನಂತರ ಮತ್ತೆ ಸ್ಪರ್ಧೆಗೆ ಮರಳಿದ್ದು, 2026ರ ಡಕಾರ್ ರಾಲಿಗೆ ತೀವ್ರ ಪೈಪೋಟಿ ನೀಡಲಿದ್ದಾರೆ.
ಈ ಬಗ್ಗೆ ಮಾತನಾಡಿದ ಹರಿತ್ ‘ಡಕಾರ್‌ನ ನಂತರ ನಾನೊಂದು ವಿಶ್ರಾಂತಿ ತೆಗೆದುಕೊಂಡೆ, ಆದರೆ ಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ ಮತ್ತು ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ. ಈ ರೇಸ್ ಪುನಃಪ್ರವೇಶ, ಆದ್ದರಿಂದ ಸ್ವಲ್ಪ ಆತಂಕ ಇದ್ದೇ ಇರುತ್ತದೆ, ಅದು ಸಹಜ. ದಕ್ಷಿಣ ಆಫ್ರಿಕಾದ ಸಫಾರಿ ರಾಲಿ ಎಲ್ಲರಿಗೂ ಹೊಸದು, ಮಾರ್ಗವು ಎಲ್ಲರಿಗೂ ಅಪರಿಚಿತ. ಪ್ರತಿಯೊಂದು ಕಿಲೋಮೀಟರ್ ಅನ್ನು ಗಮನದಿಂದ ತೆಗೆದುಕೊಳ್ಳುವುದು ನನ್ನ ತಂತ್ರ’ ಎಂದು ಹೇಳಿದ್ದಾರೆ.

