“ನಿದ್ರಾದೇವಿ ನೆಕ್ಸ್ಟ್ ಡೋರ್” ಚಿತ್ರಕ್ಕೆ ಸ್ಯಾಂಡಲ್ವುಡ್ ಸಲಗ ದುನಿಯಾ ವಿಜಯ್ ಸಾಥ್: ಹಾಡುಗಳ ಬಿಡುಗಡೆ
ಈ ವರ್ಷದ ಬಹುನಿರೀಕ್ಷಿತ ಕನ್ನಡ ಸಿನಿಮಾಗಳಲ್ಲಿ “ನಿದ್ರಾದೇವಿ ನೆಕ್ಸ್ಟ್ ಡೋರ್” ಸಿನಿಮಾ ಕೂಡ ಒಚಿದು, ಈಗಾಗಲೇ ಟೀಸರ್ ಮೂಲಕ ಗಮನಸೆಳೆದ ಈ ಚಿತ್ರದ ಮೊದಲ ಹಾಡು ರಿಲೀಸ್ ಆಗಿದೆ. ಸ್ಯಾಂಡಲ್ ವುಡ್ ಸಲಗ ದುನಿಯಾ ವಿಜಯ್ ಕುಮಾರ್ ಸ್ಲಿಪ್ ಲೆಸ್ ಆಂಥೆಮ್ ಬಿಡುಗಡೆ ಮಾಡಿರುವುದು ಇಡೀ ಚಿತ್ರಕ್ಕೆ ಆನೆ ಬಲ ಬಂದಿದೆ. ಪ್ರವೀರ್ ಶೆಟ್ಟಿ ನಾಯಕನಾಗಿ ನಟಿಸಿರುವ ಚಿತ್ರಕ್ಕೆ ಸುರಾಗ್ ಸಾಗರ್ ಆಕ್ಷನ್ ಕಟ್ ಹೇಳಿದ್ದಾರೆ.

ದುನಿಯಾ ವಿಜಯ್ ಕುಮಾರ್ ಮಾತನಾಡಿ, ಸಾಂಗ್ ತುಂಬಾ ಚೆನ್ನಾಗಿದೆ. ಹೀರೋ ಕೂಡ ಮುದ್ದಾಗಿ ಕಾಣಿಸುತ್ತಾರೆ. ಹೀರೋಯಿನ್ ಕೂಡ ಚೆನ್ನಾಗಿ ಕಾಣಿಸುತ್ತಾರೆ. ಪ್ರವೀರ್ ಡ್ಯಾನ್ಸ್ ಎನರ್ಜಿ ನೋಡಿ ಖುಷಿಯಾಯ್ತುಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಮನದುಂಬಿ ಹರಸಿದರು.
ನಟ ಪ್ರವೀರ್ ಶೆಟ್ಟಿ ಮಾತನಾಡಿ, ಈ ದಿನಕ್ಕೆ ಬಹಳ ದಿನದಿಂದ ಕಾಯುತ್ತಿದ್ದೆ. ಹಾಡು ಬಿಡುಗಡೆಯಾಗಿದೆ. ಈ ಹಾಡು ಹಿಂದೆ ತುಂಬಾ ಜನ ಕಷ್ಟಪಟ್ಟಿದ್ದಾರೆ. ನಿರ್ದೇಶಕರು, ಅವರ ಪತ್ನಿ, ನಕುಲ್, ಗುಬ್ಬಿ ಎಲ್ಲರೂ ಒಟ್ಟಿಗೆ ಸೇರಿ ಹಾಡು ಮಾಡಿದ್ದಾರೆ. ತಾರಕ್ ಮಾಸ್ಟರ್ ತುಂಬಾ ಚೆನ್ನಾಗಿ ಕೊರಿಯೋಗ್ರಫಿ ಮಾಡಿದ್ದಾರೆ ಎಂದು ಹೇಳಿದರು.
ನಿರ್ಮಾಪಕ ಜಯರಾಮ್ ಮಾತನಾಡಿ ಸಿನಿಮಾ ಮಾಡುವುದು, ಅದನ್ನು ಸಪೋರ್ಟ್ ಮಾಡುವುದು ಒಂದು ಕಡೆಯಾದರೆ, ಸಿನಿಮಾ ಮಾಡಿ ಆದಮೇಲೆ ನಿಜವಾದ ಜರ್ನಿ ಶುರುವಾಗುವುದು. ಈಗ ಆ ಜರ್ನಿ ನೋಡುತ್ತಿದ್ದೇನೆ. ಜನರಿಗೆ ತಲುಪಿಸುವುದು ಕಷ್ಟ ಅನ್ನುವುದು ಅರಿವಾಗುತ್ತಿದೆ. ಪ್ರತಿ ಹೆಜ್ಜೆಯಲ್ಲಿ ದೊಡ್ಡ ದೊಡ್ಡ ಹೀರೋಗಳು ಸಾಥ್ ಕೊಟ್ಟಿದ್ದಾರೆ. ಹೊಸ ಪ್ರೊಡಕ್ಷನ್ಸ್ ಹೌಸ್ ಆದರೂ ಬಹಳ ಸಪೋರ್ಟ್ ಸಿಕ್ಕಿದೆ. ಸಿನಿಮಾ ಬಹಳ ಚೆನ್ನಾಗಿ ಬಂದಿದೆ. ಇಡೀ ಸ್ಟಾರ್ ಕಾಸ್ಟ್ ಅದ್ಭುತವಾಗಿ ನಟಿಸಿದ್ದಾರೆ ಎಂದರು.

ನಿರ್ದೇಶಕ ಸುರಾಗ್ ಮಾತನಾಡಿ, ಕಷ್ಟಪಟ್ಟು ಮಾಡಿದ ಸಾಂಗ್ ದೊಡ್ಡ ಸ್ಕ್ರೀನ್ ಮೇಲೆ ನೋಡಲು ಖುಷಿಯಾಯ್ತು. ದುನಿಯಾ ವಿಜಯ್ ಸರ್ ಸಾಂಗ್ ರಿಲೀಸ್ ಮಾಡಿ ಕೊಟ್ಟಿದ್ದಕ್ಕೆ ಧನ್ಯವಾದಗಳು. ಹಾಡಿನಲ್ಲಿ ನಟ ಪ್ರವೀರ್ ತುಂಬಾ ಕಷ್ಟಪಟ್ಟು ಡ್ಯಾನ್ ಮಾಡಿದ್ದಾರೆ. ಕಾಲು ಕ್ರ್ಯಾಂಪ್ ಆಗಿದ್ದರೂ ಕೂಡ ಬೇಕಿಂಗ್ ಸೋಡಾ ತೆಗೆದುಕೊಂಡು 16 ಗಂಟೆ ಬ್ಯಾಕ್ ಟು ಬ್ಯಾಕ್ ಡ್ಯಾನ್ ಮಾಡಿದ್ದಾರೆ ಎಂದರು.
“ನಿದ್ರಾದೇವಿ ನೆಕ್ಸ್ಟ್ ಡೋರ್” ಸಿನಿಮಾದ ಸ್ಲಿಪ್ ಲೆಸ್ ಆಂಥೆಮ್ ಸಾಂಗ್ ನಲ್ಲಿ ಪ್ರವೀರ್ ಶೆಟ್ಟಿ ಸಖತ್ ಸ್ಟೆಪ್ ಹಾಕಿದ್ದಾರೆ. ನಿದ್ದೆ ಬಾರದ ವ್ಯಕ್ತಿಯ ಪಾಡನ್ನು ವಿವರಿಸುವ ಹಾಡಿಗೆ ಗುಬ್ಬಿ ಮತ್ತು ಸೈಫ್ ಖಾನ್ ಸಾಹಿತ್ಯ ಬರೆದಿದ್ದು, ಧ್ವನಿಯಾಗಿದ್ದಾರೆ. ರಾಪ್ ಶೈಲಿ ರೀತಿ ಮೂಡಿಬಂದಿರುವ ಗೀತೆಗೆ ನಕುಲ್ ಅಭಯಂಕರ್ ಟ್ಯೂನ್ ಹಾಕಿದ್ದಾರೆ. ಈ ಹಾಡಿನಲ್ಲಿ ಪ್ರವೀರ್ ಅಭಿನಯ ನೋಡಿದ್ರೆ ಅವರು ಚಿತ್ರರಂಗದ ರೈಸಿಂಗ್ ಸ್ಟಾರ್ ಆಗಿ ಕಾಣಿಸಿಕೊಂಡಿದ್ದಾರೆ.

ರಿಷಿಕಾ ನಾಯಕ್ ಜೋಡಿಯಾಗಿ ಸಾಥ್ ಕೊಟ್ಟಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗು ಶ್ರುತಿ ಹರಿಹರನ್, ಹಿರಿಯ ನಟ ಕೆ.ಎಸ್.ಶ್ರೀಧರ್, ಸುಧಾರಾಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶ್ರೀವತ್ಸ, ಅನೂಪ್, ಐಶ್ವರ್ಯ ಗೌಡ , ಮಾಸ್ಟರ್ ಸುಜಯ್ ರಾಮ್, ಕಾರ್ತಿಕ್ ಪತ್ತಾರ್ ಮತ್ತು ಅನುರಾಗ್ ಪಾಟೀಲ್ ಸೇರಿದಂತೆ ಇತರರು ತಾರಾಬಳಗದಲ್ಲಿದ್ದಾರೆ. ಸುರಾಗ್ ಅವರಿಗೆ ಅವರ ಪತ್ನಿ ಸಹನಾ ಸಹ ನಿರ್ದೇಶಕರಾಗಿ ಈ ಹಾಡಿಗೆ ಸಾಥ್ ಕೊಟ್ಟಿದ್ದಾರೆ. ಭರತ್ ಪರಶುರಾಮ್ ಸ್ಲಿಪ್ ಲೆಸ್ ಆಂಥೆಮ್ ಸಾಂಗ್ ಹಾಡಿಗೆ ಕ್ಯಾಮೆರಾ ಹಾಡಿದ್ದಾರೆ.
ಚಿತ್ರಕ್ಕೆ ನಕುಲ್ ಅಭ್ಯಂಕರ್ ಸಂಗೀತ, ಅಜಯ್ ಕುಲಕರ್ಣಿ ಛಾಯಾಗ್ರಹಣ, ಊಲಾಸ್ ಹೈದೂರ್ ಪೆÇ್ರಡಕ್ಷನ್ ಡಿಸೈನ್, ಅರ್ಜುನ್ ರಾಜ್ ಸಾಹಸ ನಿರ್ದೇಶನ ಮತ್ತು ಹೇಮಂತ್ ಕುಮಾರ್ ಡಿ ಸಂಕಲನವಿದೆ.

