ಮೇ 23ಕ್ಕೆ “ಮಂಕುತಿಮ್ಮನ ಕಗ್ಗ” ಚಿತ್ರ ತೆರೆಗೆ
ಹೆಸರಾಂತ ಸಾಹಿತಿ ಡಾ.ಡಿ.ವಿ.ಗುಂಡಪ್ಪ ಅವರ ಜನಪ್ರಿಯ ಪದ್ಯ ಪುಸ್ತಕ “ಮಂಕುತಿಮ್ಮನ ಕಗ್ಗ”. ಕನ್ನಡದಲ್ಲಿ ಈಗಾಗಲೇ ಕೆಲವು ಚಿತ್ರ ನಿರ್ದೇಶಿಸಿರುವ ರಾಜ ರವಿಶಂಕರ್ ಡಿ.ವಿ.ಜಿ ಅವರ “ಮಂಕುತಿಮ್ಮನ ಕಗ್ಗ”ವನ್ನು ಚಿತ್ರದ ಮೂಲಕ ತೆರೆಗೆ ತಂದಿದ್ದಾರೆ. ಎನ್ ಎ ಶಿವಕುಮಾರ್ ನಿರ್ಮಿಸಿರುವ ಹಾಗೂ ಮೀನಾ ಶಿವಕುಮಾರ್ ಸಹ ನಿರ್ಮಾಣವಿರುವ ಚಿತ್ರ ಮೇ 23 ರಂದು ಬಿಡುಗಡೆಯಾಗುತ್ತಿದೆ.

ಚಿತ್ರದಲ್ಲಿ ಡಿ.ವಿ.ಜಿ ಅವರ ಬಾಲ್ಯದ ದಿನಗಳ ಬಗ್ಗೆ ತೋರಿಸಲಾಗಿದೆ. ತಿಮ್ಮಣ್ಣ ಮೇಷ್ಟ್ರು ಪಾತ್ರದಲ್ಲಿ ಹಿರಿಯ ನಟ ರಾಮಕೃಷ್ಣ, ಬಾಲಕ ಸೋಮಿ (ಡಿ.ವಿ.ಜಿ) ಪಾತ್ರದಲ್ಲಿ ಮಾಸ್ಟರ್ ರಣವೀರ್, ಅಲಮೇಲು ಪಾತ್ರದಲ್ಲಿ ಭವ್ಯಶ್ರೀ ರೈ, ವೆಂಕರಮಣಯ್ಯ ಪಾತ್ರದಲ್ಲಿ ರವಿನಾರಾಯಣ್ ಹಾಗೂ ಅಜ್ಜಿಯ ಪಾತ್ರದಲ್ಲಿ ಲಕ್ಷ್ಮೀ ನಾಡಗೌಡ ಅಭಿನಯಿಸಿದ್ದಾರೆ. ಸಾಯಿಪ್ರಕಾಶ್, ನರಸೇಗೌಡ, ಶ್ರೀನಿವಾಸ್ ಕೆಮ್ತೂರ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಕಥೆ ವಿಸ್ತರಣೆ, ಚಿತ್ರಕಥೆ ಹಾಗೂ ಸಂಭಾಷಣೆ ನಿರ್ದೇಶಕ ರಾಜ ರವಿಶಂಕರ್ ಅವರದು. ಎ.ಟಿ.ರವೀಶ್ ಸಂಗೀತ ನಿರ್ದೇಶನ, ಸಿ.ನಾರಾಯಣ್ ಛಾಯಾಗ್ರಹಣ ಹಾಗೂ ಆರ್ ಡಿ ರವಿ ಸಂಕಲನ ಈ ಚಿತ್ರಕ್ಕಿದೆ.

