” ಡ್ಯೂಡ್ ” ಶೀರ್ಷಿಕೆ ವಿವಾದ ಸುಖಾಂತ್ಯ; ತೇಜ್ ಚಿತ್ರಕ್ಕೆ ಸಾರಥಿ
ಡ್ಯೂಡ್ ಚಿತ್ರದ ಬಗ್ಗೆ ಎದ್ದಿದ್ದ ವಿವಾದ ಬಗೆ ಹರಿದೆ.ತೆಲುಗಿನ ಮೈತ್ರಿ ಮೂವಿ ಮೇಕರ್ಸ್ ಜೊತೆ ಮಾತುಕತೆ ನಡೆಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ

ಕನ್ನಡ,ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಸಿದ್ಧವಾಗುತ್ತಿರುವ ಚಿತ್ರದ ಶೀರ್ಷಿಕೆ ಸಮಸ್ಯೆ ಯಾವುದೇ ವಿವಾದವಿಲ್ಲದೇ ಬಗೆ ಹರಿದಿದೆ.
ಈ ಕುರಿತು ನಟ ,ನಿರ್ದೇಶಕ ತೇಜ್ ಸ್ಪಷ್ಟ ಪಡಿಸಿದ್ದು
ಕನ್ನಡ ಭಾಷೆಯಲ್ಲಿ ಡ್ಯೂಡ್ ಚಿತ್ರವ ರಿಲೀಸ್ ಮಾಡಿ, ಅದೇ ಸಮಯದಲ್ಲಿ ತೆಲುಗು ಹಾಗೂ ಮಲಯಾಳಂ ನಲ್ಲಿಯ ಡಬ್ ಮಾಡಿ ಬಿಡುಗಡೆ ಮಾಡಬೇಕು ಎನ್ನುವ ಆಸೆ ಇತ್ತು ಅದು ಈಡೇರದಿರುವುದು ಬೇಸರ ತರಿಸಿದೆ ಎಂದಿದ್ದಾರೆ.
ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಡ್ಯೂಡ್ ಹೆಸರಿನ ಶೀರ್ಷಿಕೆ ನೋಂದಣಿ ವಿಚಾರ ತಿಳಿದ ತಕ್ಷಣ ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್ ಹಾಗು ವಾಣಿಜ್ಯ ಮಂಡಳಿ ಸಹಕಾರ ಮರೆಯಲು ಆಗದು ಎಂದು ತಿಳಿದ್ದಾರೆ.
..
ಪ್ಯಾನ್ ಇಂಡಿಯಾ ಮೂವೀ ಮೇಕಿಂಗ್ ಮತ್ತು ರಿಲೀಸ್ ಕಾನ್ಸೆಪ್ಟ್ ಬಂದಾಗಿನಿಂದ ಇಂತಹ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದ್ದು,ಎಷ್ಟೋ ಸಿನಿಮಾ ತಂಡಗಳಿಗೆ ದೊಡ್ಡ ತಲೆ ನೋವಾಗಿದೆ, ಒಂದೇ ಶೀರ್ಷಿಕೆಯನ್ನು ಹಲವು ಭಾಷೆಗಳಲ್ಲಿ ನೋಂದಣಿ ಮಾಡಿರುತ್ತಾರೆ,ಯಾವಾಗ ಬಿಡುಗಡೆ ಕಷ್ಟವಾಗುತ್ತಿದೆ ಎಂದಿದ್ದಾರೆ.
ಹಿರಿಯ ಶಂಕರ್ ನಾಗ್ ಜೊತೆ ಕೆಲಸ ಮಾಡಿದ್ದೇನೆ, ಅವರ ಜೊತೆ ನಟಿಸುವಾಗ, ತುಂಬಾ ಚಿಕ್ಕವನು, ಆಗಿನಿಂದಲೇ ಇಂಡಸ್ಟ್ರಿ ನೋಡಿದ್ದೇನೆ,ಅಣ್ಣಾವ್ರು, ವಿಷ್ಣುವರ್ಧನ್ ಸೇರಿದಂತೆ ಬಹುತೇಕ ಕನ್ನಡದ ಸೂಪರ್ ಸ್ಟಾರ್ಸ್ ಗಳ ಚಿತ್ರಗಳು ಆಗಲೇ ಪ್ಯಾನ್ ಇಂಡಿಯಾ ಮಟ್ಟಕ್ಕೆ ಹೋಗಿದ್ದನ್ನು ಹೆಮ್ಮೆಯಿಂದ ಮಾತಾಡಬೇಕು ಎಂದು ಹೇಳಿದರು.

ಬಾಲಿವುಡ್ ನಿರ್ದೇಶಕಅನುರಾಗ್ ಕಶ್ಯಪ್,ಸುಜಯ್ ಶಾಸ್ತ್ರಿ ಕಾಂಬಿನೇಶನ್ ನಲ್ಲಿ ಬರುತ್ತಿರುವ *8* ಚಿತ್ರಕ್ಕೂ ಡ್ಯೂಡ್ ಗೆ ಯಾವುದೇ ಸಂಭಂದ ಇಲ್ಲ, ಅವರದು ಎಮೋಷನಲ್ ಬಾಂಡಿಂಗ್ ಕಥೆ,ನಮ್ಮದು ಪಕ್ಕಾ ಮನೋರಂಜನೆ ಸಹಿತ,ಕಮರ್ಷಿಯಲ್ ಸಿನಿಮಾ ಎಂದು ತೇಜ್ ಈ ಹಂತದಲ್ಲೇ ಸ್ಪಷ್ಟ ಪಡಿಸಿದ್ದು ಮತ್ತೊಂದು ಪ್ಲಸ್ ಪಾಯಿಂಟ್ ಎಂದರು.
ಅಕ್ಟೋಬರ್ ಒಳಗೆ ಡ್ಯೂಡ್* ಸಿದ್ಧವಾಗಲಿದೆ, ಅದೇ ತಿಂಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ಇದೆ ಎಂದು ಎಂದು ಮಾಹಿತಿ ಹಂಚಿಕೊಂಡರು.

