“ಕರಳೆ” ಚಿತ್ರದ ವಿವಾದಿತ ಪೋಸ್ಟರ್ ಬಳಸದಂತೆ ಕಟ್ಟುನಿಟ್ಟಿನ ಸೂಚನೆ
ಕನ್ನಡ ದೇಶದೊಳ್ ಹಾಗೂ ಕಲಿವೀರ ಚಿತ್ರಗಳ ನಿರ್ದೇಶಕ ಅವಿರಾಮ್ ಕಂಠೀರವ ನಿರ್ದೇಶನ ಮಾಡಿರುವ “ಕರಳೆ” ಚಿತ್ರದ ವಿವಾದಿತ ಪೆÇೀಸ್ಟರ್ ಬಳಸದಂತೆ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ಕಟ್ಟಪ್ಪಣೆ ಹೊರಡಿಸಿದೆ

ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬ್ಯಾನ್ ಮಾಡಲಾಗಿದೆ. ಕನ್ನಡ ಚಲನಚಿತ್ರದ ಇತಿಹಾಸದಲ್ಲಿ ಪ್ರಥಮಬಾರಿಗೆ ಒಂದು ಚಿತ್ರದ ಪೋಸ್ಟರ್ ಬ್ಯಾನ್ ಆಗಿರುವುದು ಕಂಡು ಬಂದಿದೆ.
ಕರಳೆ ಚಿತ್ರದ ನಾಯಕಿ ಕುಂಕುಮ್ ಹರಿಹರ್ ಇತ್ತೀಚಿಗೆ ಕರೆಳೆಯ ಫಸ್ಟ್ ಲುಕ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಚಿತ್ರದ ನಿರ್ದೇಶಕರ ವಿರುದ್ಧ ವಾಣಿಜ್ಯ ಮಂಡಳಿಯಲ್ಲಿ ದೂರು ನೀಡಿದರು. ವಿಚಾರಕ್ಕೆ ಸಂಬಂಧಿಸಿ ವಾಣಿಜ್ಯ ಮಂಡಳಿಯಲ್ಲಿ ಚಿತ್ರದ ನಿರ್ಮಾಪಕರು, ನಿರ್ದೇಶಕರು ಹಾಗೂ ನಟಿ ಸೇರಿದಂತೆ ಚಿತ್ರತಂಡವನ್ನು ವಾಣಿಜ್ಯ ಮಂಡಳಿ ಕರೆದು ವಿವಾದದ ಇತ್ಯರ್ಥ ಪಡಿಸಿದೆ
ಚಿತ್ರದ ನಾಯಕಿ ಕುಂಕುಮ್ ಮತ್ತೊಂದು ಬೋಲ್ಡ್ ಪೋಸ್ಟರ್ ನಿರ್ದೇಶಕರು ಬಿಡುಗಡೆ ಮಾಡುವ ಆತಂಕ ನಟಿ ಕುಂಕುಮ್ ವ್ಯಕ್ತ ಪಡಿಸಿದರು.
ನಿರ್ದೇಶಕ ಅವಿರಾಮ್ ಕಂಠೀರವ ಮಾತನಾಡಿ ಪೋಸ್ಟರ್ ವಿವಾದ ಬೇಡವಾದ ವಿವಾದವಾಗಿದೆ, ನನ್ನ ನೇರ ಹಾಗು ಸ್ಪಷ್ಟ ದೃಷ್ಟಿಕೋನದಿಂದ ಪೋಸ್ಟರ್ ರಚಿಸಿದ್ದೆ. ಈ ಪೋಸ್ಟರ್ ನಿಂದ ಇಷ್ಟು ದೊಡ್ಡ ವಿವಾದ ಆಗಲಿದೆ ಎನ್ನುವ ಕಲ್ಪನೆ ನನಗಿರಲಿಲ್ಲ. ನನ್ನ ಸಿನಿಮಾದಲ್ಲಿನ ಕಥೆಯ ಆಳವನ್ನು ಬಹಳ ಬಲವಾಗಿ ಪ್ರಸ್ತುತ ಪಡಿಸುವ ಕಾರಣಕ್ಕಾಗಿ ಪೋಸ್ಟರ್ ಮಾಡಿದ್ದೆ. ಅದರಲ್ಲಿ ತಾಯಿ ಮಗುವಿನ ಸಂಬಂಧ ತೋರಿಸಲಾಗಿದೆ. ಹಾಗಾಗಿ ದೃಷ್ಟಿಯಿಂದ ಅದು ವಿವಾದಿತ ಪೋಸ್ಟರ್ ಆಗಿರಲಿಲ್ಲ. ವಾಣಿಜ್ಯ ಮಂಡಳಿ ಅಧ್ಯಕ್ಷರು, ನಿರ್ಮಾಪಕರ ಸಂಘದ ಅಧ್ಯಕ್ಷರ ಜೊತೆಗೆ ಮಾತುಕತೆ ನಡೆಸಿದ ನಂತರ ಇದೀಗ ನಟಿಯ ಸೆಕೆಂಡ್ ಲುಕ್ ಪೋಸ್ಟರ್ ಬಿಡುಗಡೆಗೆ ಮುನ್ನ ಅದನ್ನು ಅವರಿಗೆ ಹಾಗೂ ಮಂಡಳಿಯ ಅಧ್ಯಕ್ಷರಿಗೂ ತೋರಿಸಲು ಸಮ್ಮತಿಸಿದ್ದೇನೆ ಎಂದರು.
ನಟಿ ಕುಂಕುಮ್ ಹರಿಹರ್ ಮಾತನಾಡಿ, ಚಿತ್ರದ ಭಾಗವಾಗಿರುವ ಕಾರಣಕ್ಕೆ ನನಗೆ ಸಂಬಂದಿಸಿದ ಚಿತ್ರದ ಪೋಸ್ಟರ್ ಬಿಡುಗಡೆಯಂತಹ ವಿಷಯಗಳು ನನಗೂ ತಿಳಿಯಬೇಕಿದೆ ಎನ್ನುವುದು ಮಾತು. ಆದರೆ ಈಗ ನಿರ್ದೇಶಕರು ಪೋಸ್ಟರ್ ಗೆ ಸಂಬಂಧಿಸಿ ಸ್ಪಷ್ಟನೆ ಕೊಟ್ಟಿರುವುದರಿಂದ ಸಹ ಅವರ ಮುಂದಿನ ನಡೆಗೆ ಒಪ್ಪಿಗೆ ಸೂಚಿಸಿದ್ದೇನೆ ಎಂದರು.

ನಾನೊಬ್ಬ ಕಲಾವಿದೆಯಾಗಿ ಈ ಪೋಸ್ಟರ್ ನೋಡಿದರೆ ನನಗೆ ಈ ಪೋಸ್ಟರ್ ಬಹಳ ಚೆನ್ನಾಗಿ ಕಾಣುತ್ತದೆ. ಆದರೆ ಪೋಸ್ಟರ್ ನೋಡುವವರೆಲ್ಲಾ ಇದನ್ನು ಕಲಾವಿದರ ದೃಷ್ಟಿಕೋನದಿಂದಲೇ ನೋಡುತ್ತಾರೆ ಎನ್ನಲಾಗುವುದಿಲ್ಲ. ಕೆಟ್ಟದಾಗಿ ನೋಡುವವರಿಗೆ ಅದು ಕೆಟ್ಟದಾಗಿಯೇ ಕಾಣುತ್ತದೆ. ನನಗೀಗಾಗಲೇ ಸಾಕಷ್ಟು ಜನರು ಕರೆ ಮಾಡಿ ಈ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಸಿನಿಮಾ ಅದೆಷ್ಟು ಚೆನ್ನಾಗಿ ಮೂಡಿ ಬಂದಿದೆ ಎನ್ನುವುದು ನನಗೆ ತಿಳಿದಿದೆ. ಆದರೆ ಈ ಪೋಸ್ಟರ್ ನೋಡಿದರೆ ಜನರಿಗೆ ತಪ್ಪು ತಿಳುವಳಿಕೆ ಮೂಡಿಸುತ್ತದೆ. ಇದರ ಬಗ್ಗೆ ನಿರ್ದೇಶಕರು ಸ್ಪಷ್ಟನೆ ಕೊಡಬೇಕಾಗಿತ್ತು. ಹಾಗೆ ಸ್ಪಷ್ಟನೆ ಕೊಟ್ಟಿದ್ದೇ ಆಗಿದ್ದರೆ ನಾನಿಲ್ಲಿಗೆ ಬರುವ ವಿಷಯವೇ ಇರುತ್ತಿರಲಿಲ್ಲ, ಇಷ್ಟು ದೊಡ್ಡ ವಿವಾದವೂ ಆಗುತ್ತಿರಲಿಲ್ಲ ಎಂದು ಹೇಳಿದರು.
ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಮಾತನಾಡಿ, ದೂರು ಕೊಟ್ಟ ಕಲಾವಿದೆ ಮತ್ತು ನಿರ್ದೇಶಕರು ರಾಜಿ ಮಾಡಿಕೊಂಡಿದ್ದಾರೆ. ಹಾಗಾಗಿ ಇದನ್ನು ನಾವೀಗ ಅಂತಿಮವಾಗಿ ಬಗೆಹರಿಸಿದ್ದೇವೆ. ಮುಂದಿನ ದಿನದಲ್ಲಿ ನಿರ್ದೇಶಕರು ಯಾವುದೇ ಪೋಸ್ಟರ್ ಮಾಡಿದರೂ ಕಲಾವಿದರೆಲ್ಲರಿಗೆ ತೋರಿಸಿಯೇ ಬಿಡುಗಡೆ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ. ಹಾಗಾಗಿ ವಿವಾದ ಸುಖಾಂತ್ಯವಾಗಿದೆ ಎಂದು ಬಣಕಾರ್ ಹೇಳಿದರು.

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ನರಸಿಂಹುಲು ಮಾತನಾಡಿ ನಾವೆಂದೂ ಹೆಣ್ಣಿಗೆ ನೋವಾಗುವ ಸೂಕ್ಷ್ಮ ವಿಚಾರಗಳನ್ನು ಸಹಿಸುವುದಿಲ್ಲ. ಹೆಣ್ಣು ಮಕ್ಕಳಿಗೆ ನೋವಾಗುವ ಯಾವ ವಿಚಾರವನ್ನೂ ತೋರಿಸಲು ವಾಣಿಜ್ಯ ಮಂಡಳಿ ಒಪ್ಪಿಗೆ ಸೂಚಿಸಿರುವುದಿಲ್ಲ ಎಂದರು.’
ಚಿತ್ರದ ನಿರ್ಮಾಪಕ ಪಾಲಾಕ್ಷ ಮಾತನಾಡಿ ಪೋಸ್ಟರ್ ವಿವಾದ ಬಗೆಹರಿಸಿದಕ್ಕೆ ಧನ್ಯವಾದ ಸೂಚಿಸಿದರು ಮತ್ತು ಸಿನಿಮಾ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ. ಇದರಲ್ಲಿ ಯಾವ ಅಶ್ಲೀಲತೆ ಇಲ್ಲ. ಇಂದು ಈ ವಿವಾದ ಬಗೆಹರಿದಿದ್ದು ಮುಂದಿನ ದಿನದಲ್ಲಿ ಯಾವ ಅಡ್ಡಿ ಆತಂತವಿಲ್ಲದೆ ಚಿತ್ರ ಪೂರ್ಣವಾಗುತ್ತದೆ ಎನ್ನುವ ಭರವಸೆ ಇದೆ. ಇಂತಹಾ ಉತ್ತಮವಾದ ಚಿತ್ರಕ್ಕೆ ಮಾಧ್ಯಮದವರು, ಜನರು ಬೆಂಬಲಿಸಿ ಪ್ರೊತ್ಸಾಹವಿರಲಿ ಎಂದು ಅವರು ಮನವಿ ಮಾಡಿದರು.

