ಸ ರಿ ಗ ಮ ಪ’ ಮಹಾ ಫಿನಾಲೆ: ವಿಜಯಮಾಲೆ ಯಾರಿಗೆ: ಕುತೂಹಲಕ್ಕೆ ಎಡೆ
ಕನ್ನಡದ ಟಿ.ವಿ ಇತಿಹಾಸದಲ್ಲಿ ಅತಿಹೆಚ್ಚು ಜನಮನ್ನಣೆ ಗಳಿಸಿದ ಸಿಂಗಿಂಗ್ ರಿಯಾಲಿಟಿ ಶೋ ಸರಿಗಮಪ. 6 ವರುಷದಿಂದ 60 ವರುಷದವರೆಗಿನ ವಯೋಮಿತಿಯ ಸ್ಪರ್ಧಿಗಳು ಭಾಗವಹಿಸಿದ ಈ ಆವೃತ್ತಿ ಜನರ ಪ್ರಶಂಸೆಗೆ ಪಾತ್ರವಾಗಿದೆ. ಈ ಬಾರಿಯ ಆವೃತ್ತಿಯು ಅಂತಿಮ ಘಟ್ಟ ತಲುಪಿದ್ದು 6 ಸ್ಪರ್ಧಿಗಳಲ್ಲಿ ಸ ರಿ ಗ ಮ ಪ ಟೈಟಲ್ ಯಾರ ಮುಡಿಗೇರಲಿದೆ ಎಂಬ ಕುತೂಹಲ ಜನರಲ್ಲಿ ಹೆಚ್ಚಾಗಿದೆ.

ಫಿನಾಲೆಯಲ್ಲಿ ದ್ಯಾಮೇಶ, ಬಾಳು ಬೆಳಗುಂದಿ, ಶಿವಾನಿ, ಆರಾಧ್ಯ ರಾವ್, ರಶ್ಮಿ, ಅಮೋಘ ವರ್ಷ ನಡುವೆ ಪೈಪೋಟಿ ನಡೆಯಲಿದ್ದು ವಿನ್ನರ್ ಪಟ್ಟ ಯಾರಿಗೆ ಸಿಗಲಿದೆ ಎಂದು ಕಾದು ನೋಡಬೇಕಿದೆ.ಸರಿಗಮಪ ಫಿನಾಲೆ ಕ್ಷಣಗಳನ್ನು ಜೂನ್ 5 ರಂದು ನಡೆಯಲಿದೆ
ಸ್ಪರ್ದಿಗಳು ಮತ್ತು ಜನರಲ್ಲಿ ಮೂಡಿರುವ ಕುತೂಹಲಕ್ಕೆ
ಜೂನ್ 7 ರಂದು ಸಂಜೆ 6 ಗಂಟೆಗೆ ಉತ್ತರ ದೊರೆಯಲಿದೆ.ಈ ಆವೃತ್ತಿಯಲ್ಲಿ ಸ್ಪರ್ಧಿಗಳ ನಡುವೆ ಕೇವಲ ಪೈಪೋಟಿ ಮಾತ್ರವಲ್ಲದೇ . ಸ್ಪೂರ್ತಿದಾಯಕ ಕಥೆಗಳು ಕೂಡ ಜನರನ್ನು ಮತ್ತಷ್ಟು ಪ್ರೇರೇಪಿಸಿದೆ.
ನಿರೂಪಣಾ ಜವಾಬ್ದಾರಿಯನ್ನು ನಿರೂಪಕಿ ಅನುಶ್ರೀ ಹೊತ್ತಿದ್ದಾರೆ. ತೀರ್ಪುಗಾರರಾದ ವಿಜಯ ಪ್ರಕಾಶ್, ರಾಜೇಶ್ ಕೃಷ್ಣನ್ ಮತ್ತು ಅರ್ಜುನ್ ಜನ್ಯ ಫಿನಾಲೆಯಲ್ಲಿಯೂ ತಮ್ಮ ಗೈಡೆನ್ಸ್ ನ ಸ್ಪರ್ಧಿಗಳಿಗೆ ಕೊಡಲಿದ್ದಾರೆ. ಅಷ್ಟೇ ಅಲ್ಲದೇ ವೀಕ್ಷಕರು ಫಿನಾಲೆಯನ್ನು ಲೈವ್ ಆಗಿ ಜೀ – 5 ಒಟಿಟಿ ವೇದಿಕೆಯಲ್ಲಿ ವೀಕ್ಷಿಸಬಹುದಾಗಿದೆ.
ಜೀ – 5 ನಲ್ಲಿ ಲೈವ್ ನೋಡಲು ಮಿಸ್ ಮಾಡಿದವರು ಬೇಸರ ಪಡಬೇಕಾದ ಅವಶ್ಯಕತೆ ಇಲ್ಲ.’ಸ ರಿ ಗ ಮ ಪ’ ಫಿನಾಲೆಯ ಸಂಭ್ರಮದ ಕ್ಷಣಗಳನ್ನು 7 ರಂದು ಸಂಜೆ 6 ಗಂಟೆಗೆ ಜೀ಼ ಕನ್ನಡದಲ್ಲಿ ನೋಡಬಹುದು ಮತ್ತು ಯಾರು ಗೆಲುವು ಸಾಧಿಸಿದರು ಎಂಬ ಮಾಹಿತಿ ಪಡೆಯಬಹುದಾಗಿದೆ.

