Review:: A heartwarming family story “Madeva”

Review:: ಮನಮಿಡಿಯುವ ಕೌಟಂಬಿಕ ಕಥನ “ಮಾದೇವ” - CineNewsKannada.com

Review:: ಮನಮಿಡಿಯುವ ಕೌಟಂಬಿಕ ಕಥನ “ಮಾದೇವ”

ವಿಮರ್ಶೆ
ಚಿತ್ರ: ಮಾದೇವ
ನಿರ್ದೇಶನ: ನವೀನ್ ರೆಡ್ಡಿ
ನಿರ್ಮಾಣ: ಕೇಶವ ಆರ್ (ದೇವಸಂದ್ರ)
ತಾರಾಗಣ; ವಿನೋದ್ ಪ್ರಭಾಕರ್, ಸೋನಲ್ ತರುಣ್, ಶೃತಿ, ಅಚ್ಯುತ್ ಕುಮಾರ್, ಶ್ರೀನಗರ ಕಿಟ್ಟಿ, ಮಾಲಾಶ್ರೀ, ಕಾಕ್ರೋಚ್ ಸುಧಿ, ಮೈಕ್ರೋ ನಾಗರಾಜ್, ಮುನಿ
, ಬಾಲರಾಜವಾಡಿ ಮತ್ತಿತರರು
ರೇಟಿಂಗ್: **** 4 / 5

ಯಾವುದೇ ಕಲಾವಿದನಿಗೆ ಏಕತಾನತೆ ಇದ್ದರೆ ಅದು ಮಾಮೂಲಿ ಎನಿಸಿಬಿಡುತ್ತದೆ. ಆದರೆ ಕಲಾವಿದನಿಗೆ ಗೆಲುವು ಸಿಗುವುದು, ಆತನ ಕೆಲಸ ಮೆಚ್ಚಿಕೊಂಡು ಹಾಡಿ ಹೊಗಳುವುದು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಾಗ ಮಾತ್ರ. ಅಂತಹ ಒಂದು ಪ್ರಯತ್ನ “ಮಾದೇವ”. ಕೌಟಂಬಿಕದ ಜೊತೆಗೆ ಮನಮಿಡಿಯುವ ದುರಂತ ಕಥನದ ಚಿತ್ರ ಇದು.

ನಾಯಕ ವಿನೋದ್ ಪ್ರಭಾಕರ್, ನಾಯಕಿ ಸೋನಲ್ ತರುಣ್, ಹಿರಿಯ ಕಲಾವಿದೆ ಶೃತಿ, ಸೇರಿದಂತೆ ಪ್ರತಿಯೊಬ್ಬ ಕಲಾವಿದರು ತಾವು ಇದುವರೆಗೆ ನಟಿಸಿದ ಪಾತ್ರಕ್ಕಿಂತ ಒಂದು ಕೈ ಮೇಲೆ ಎನ್ನುವಂತೆ ನಟಿಸಿದ್ದಾರೆ.ಜೊತೆಗೆ ಬೇರೊಂದು ಬಗೆಯ ಪಾತ್ರ ಸಿನಿ ಪ್ರೇಕ್ಷಕರನ್ನು ಚಿತ್ರದತ್ತ ಆಕರ್ಷಿಸುವಂತೆ ಮಾಡಿದೆ.

ನಿರ್ದೇಶಕ ನವೀನ್ ರೆಡ್ಡಿ ಇಂತಹದೊಂದು ಪ್ರಯತ್ನವನ್ನು ಜನರ ಮುಂದಿಡುವ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ.ಇನ್ನು ಜನರು ಇಷ್ಟಪಟ್ಟರೆ ಕೈಹಿಡಿದರೆ ಚಿತ್ರತಂಡದ ಖುಷಿ ಮತ್ತಷ್ಟು ಹಿಮ್ಮಡಿಯಾಗಲಿದೆ.

ಆತ ಮಾದೇವ (ವಿನೋದ್ ಪ್ರಭಾಕರ್) ನಿರ್ಜೀವಿ. ಆತನಲ್ಲಿ ಭಾವನೆಗಳು ಸತ್ತು ಹೋಗಿ ಅದೆಷ್ಟೇ ವರ್ಷಗಳು ಸಂದಿವೆ. ಯಾರನ್ನು ಕಂಡರೂ ಕಿಂಚಿತ್ತು ಕನಿಕರ ಮರುಕ ಇಲ್ಲ, ಆತನಿಗೆ ಗೊತ್ತಿರುವುದು ಒಂದೇ, ಜೈಲಿನಲ್ಲಿ ಮರಣದಂಡನೆಗೆ ಗುರಿಯಾದವರಿಗೆ ನೇಣು ಬಿಗಿಯುವುದು, ಹೆಣದ ಮುಂದೆ ಬಿರಿಯಾನಿ ತಿಂದು ವಿಕೃತ ನೋಟ ಬೀರುವುದು. ಇಂತವನಿಗೆ ಇಬ್ಬರೇ ಸ್ನೇಹ.

ತನ್ನದಲ್ಲದ ತಪ್ಪಿಗೆ ಜೈಲು ಪಾಲಾಗಿರುವ ಅಮ್ಮನ್ನು ಬಿಡಿಸಿಕೊಂಡು ಬರಲು ಮತ್ತು ಆಕೆಯನ್ನು ನೋಡುವುದು ಪಾರ್ವತಿ ( ಸೋನಲ್ ತರುಣ್) ನಿತ್ಯದ ಕೆಲಸ, ಆದರೆ ಅದಕ್ಕೆ ಜೈಲು ಅಧಿಕಾರಿಗಳಿಂದ ಸಿಗದ ಅವಕಾಶ, ಜೈಲನ್ನೇ ಮನೆಯನ್ನಾಗಿ ಮಾಡಿಕೊಂಡ ಮಾದೇವನ ಸಂಪರ್ಕ ಪಡೆದರೆ ಅಮ್ಮನ ಭೇಟಿ ಸುಲಭವಾಗಬಹುದೆಂದು ಭಾವಿಸುತ್ತಾಳೆ,
ಆದರೆ ಆಗುವುದೇ ಬೇರೆ, ಏನೇ ಮಾಡಿದರೂ ಜಗ್ಗದವ.

ಮತ್ತೊಂದೆಡೆ ಮರಣದಂಡನೆಗೆ ಗುರಿಯಾದ ಮಗನನ್ನು ಬಿಡಿಸಿಕೊಳ್ಳಲು (ಶೃತಿ) ಇನ್ನಿಲ್ಲದ ಪ್ರಯತ್ನ ಮಾಡ್ತಾರೆ. ಮಾದೇವನ ಬಳಿ ಸಹಾಯಕ್ಕೂ ಬರ್ತಾರೆ. ಆದರೆ ಮುಂದಾಗುವುದೇ ರಣ ರೋಚಕ. ಊಹಿಸಲೂ ಆಗದ ಘಟನೆ. ಅದೇನು ಎನ್ನುವುದನ್ನು ಚಿತ್ರದಲ್ಲಿ ನೋಡಿದರೆ ಚೆನ್ನ.

ಮಾದೇವ ನಿರ್ಭಾವುಕ ಯಾಕಾದ ಅದರ ಹಿಂದಿನ ಕಥೆ ಮನಕಲಕುವಂತಹುದು, ಇಂತಹನ ಬಾಳಲ್ಲಿ ಬೆಳಕಾಗಿ ಬಂದ ಪಾರ್ವತಿ ಕಥೆ ಏನಾಯಿತು, ಹಿರಿಯ ಶೃತಿ ಪಾತ್ರವೇನು, ಶ್ರೀನಗರ ಕಿಟ್ಟಿ, ಮಾಲಾಶ್ರೀ ಯಾಕಾಗಿ ಬರುತ್ತಾರೆ ಎನ್ನುವುದನ್ನು ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕುಳಿತು ನೋಡುವಂತೆ ಮಾಡುವ ಪ್ರಯತ್ನದಲ್ಲಿ ನಿರ್ದೇಶಕ ನವೀನ್ ರೆಡ್ಡಿ ಸಫಲರಾಗಿದ್ದಾರೆ. ಭರ ಪೂರ ಆಕ್ಷನ್ ಜೊತೆಗೆ ಸೆಂಟಿಮೆಂಟ್,ದೃಶ್ಯಗಳು ಗಮನ ಸೆಳೆದಿವೆ.
ನಾಯಕನಾಗಿ ವಿನೋದ್ ಪ್ರಭಾಕರ್, ವಿಭಿನ್ನ ಪಾತ್ರದಲ್ಲಿ ಗಮನ ಸೆಳೆದಿದ್ಧಾರೆ,

ಮೊದಲರ್ದ ಮತ್ತು ದ್ವೀತೀಯಾರ್ಧದಲಿ ಪೈಪೋಟಿಗೆ ಬಿದ್ದವರಂಂತೆ ನಟಿಸಿದ್ದಾರೆ, ಸೋನಲ್ ತರುಣ್ ಕೂಡ ತಾವೇನು ಕಡಿಮೆ ಇಲ್ಲ ಎನ್ನುವುದನ್ನು ನಿರೂಪಿಸಿದ್ದಾರೆ.

ಮಗ್ದತೆಯ ಮುಖವಾಡ ಹಾಕಿಕೊಂಡ ಘೋಮುಖ ವ್ಯಾಘ್ರನ ಅವತಾರದಲ್ಲಿ ಹಿರಿಯ ನಟಿ ಶೃತಿ ಸಿಕ್ಕ ಪಾತ್ರವನ್ನು ಜೀವಿಸಿ ಬಿಟ್ಟಿದ್ದಾರೆ ಕೆಲವು ಕಡೆ ನೋಟದಲ್ಲಿ ಮರಳು ಮಾಡಿದ್ಧಾರೆ. ಹಿರಿಯ ನಟಿ ಮಾಲಾಶ್ರೀ, ಶ್ರೀನಗರ ಕಿಟ್ಟಿ, ಅಚ್ಯುತ್ ಕುಮಾರ್ ,ಮುನಿ ಸೇರಿದಂತೆ ಎಲ್ಲ ಕಲಾವಿದರ ಪಾತ್ರ ಚಿತ್ರಕ್ಕೆ ಪೂರಕವಾಗಿದೆ,

ಪ್ರದ್ಯೋನ್ನತ್ ಸಂಗೀತ,.. ಛಾಯಾಗ್ರಹಣ ಬಾಲಕೃಷ್ಣ ತೋಟ ಚಿತ್ರಕ್ಕೆ ಪೂರಕವಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin