The film "He Should Have Been" will be released across the state on June 27th

“ಅವನಿರಬೇಕಿತ್ತು” ಚಿತ್ರ ಜೂನ್ 27ಕ್ಕೆ ರಾಜ್ಯದಾದ್ಯಂತ ಬಿಡುಗಡೆ - CineNewsKannada.com

“ಅವನಿರಬೇಕಿತ್ತು” ಚಿತ್ರ ಜೂನ್ 27ಕ್ಕೆ ರಾಜ್ಯದಾದ್ಯಂತ ಬಿಡುಗಡೆ

ಅವನಿರಬೇಕಿತ್ತು.” ಕನ್ನಡ ಚಿತ್ರರಂಗಕ್ಕೆ ಅಚ್ಚರಿಯಾಗಿ ಕಾಣ್ತಿರುವ ಹೊಸಬರ ಹೊಸ ಬಗೆಯ ಸಿನಿಮಾ. ಅಂದಕಾಲತ್ತಿಲ್.. ಇಂದ ಕಾಲತ್ತಿಲ್ ಹಾಡಿನಿಂದ ಗಮನ ಸೆಳೆದಿದ್ದ ಅವನಿರಬೇಕಿತ್ತು.. ಓ ಹೃದಯ ಅನ್ನೋ ಹಾಡಿನಿಂದ ಮತ್ತೊಂದು ಪಟ್ಟು ಭರವಸೆಯನ್ನ ಹೆಚ್ಚಿಸಿದ್ದು ಇದೇ ಜೂನ್ 27 ಕ್ಕೆ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ

ಚಿತ್ರದ ಟ್ರೈಲರ್ ಹಾಗೂ ಹಾಡುಗಳಿಗೆ ಅಪ್ಪಟ ಕನ್ನಡ ಸಿನಿಪ್ರಿಯರಿಂದ ಪ್ರಶಂಸೆಗಳು ವ್ಯಕ್ತವಾಗ್ತಿವೆ.
ಕನ್ನಡ ಚಿತ್ರರಂಗದಲ್ಲಿ ಹಲವು ಚಿತ್ರಗಳಿಗೆ ಕೆಲಸ ಮಾಡಿದ ಅನುಭವವಿರೋ ಬಹುಮುಖ ಪ್ರತಿಭೆ ಅಶೋಕ್ ಸಾಮ್ರಾಟ್ ನಿರ್ದೇಶನದ ಚೊಚ್ಚಲ ಸಿನಿಮಾ ಅವನಿರಬೇಕಿತ್ತು.. ಗೆಳೆಯ ಮುರಳಿ ಬಿಟಿ ಅಶೋಕ್ ಸಿನಿಮಾ ಕನಸಿಗೆ ಬಂಡವಾಳ ಹೂಡಿದ್ದಾರೆ.

ಹಂಸಲೇಖ ಶಿಷ್ಯ ಲೋಕಿ ತವಸ್ಯಾ ಸಂಗೀತ ಸಂಯೋಜಿಸಿದ್ದು, ದೇವರಾಜ್ ಪೂಜಾರಿ ಛಾಯಾಗ್ರಹಣ ಮಾಡಿದ್ದಾರೆ. ತಾಂತ್ರಿಕವಾಗಿ ನಿಪುಣರ ತಂಡವನ್ನ ಕಟ್ಟಿಕೊಂಡು, ಹೊಸ ಬಗೆಯ ಕಥೆಯನ್ನ ಹೆಣೆದು, ವಿನೂತನ ಸ್ಕ್ರೀನ್ ಪ್ಲೇ ಜೊತೆಗೆ ಗುಣ ಮಟ್ಟದ ಮೇಕಿಂಗ್ ಮಾಡಿರೋ ಸಿನಿಮಾ ಅವನಿರಬೇಕಿತ್ತು.

ಅವನಿರಬೇಕಿತ್ತು… ಸಿನಿಮಾ ಹಲವಾರೂ ವಿಶೇಷ ವಿಚಾರಗಳಿಗೆ ಹೆಸರಾಗುವಂತೆ ಕಾಣ್ತಿದೆ.. ಕನ್ನಡ ಪ್ರೇಕ್ಷಕರಿಗೆ ಹೊಸ ಅನುಭವ ಕೊಡುವ ಭರವಸೆಯನ್ನೂ ನೀಡಿದೆ.. ಚಿತ್ರದಲ್ಲಿ ನಾಯಕ ಭರತ್, ನಾಯಕಿ ಸೌಮ್ಯಾ ಹೊಸ ಮುಖಗಳೇ ಆದ್ರೂ ಟ್ರೈಲರ್ ನೋಡಿದಾಗ ಅನುಭವಸ್ಥ ಕಲಾವಿದರಿಗಿಂತ ಏನು ಕಡಿಮೆ ಕಾಣ್ತಿಲ್ಲ.. ಹಾಡುಗಳಲ್ಲಿ ಇವ್ರ ಡ್ಯಾನ್ಸ್ ಮತ್ತು ಅಭಿನಯ ವಿಶೇಷವಾಗಿ ಕಾಣ್ತಿದೆ.. ಚಿತ್ರದಲ್ಲಿ ಪ್ರಶಾಂತ್ ಸಿದ್ದಿ, ಕಿರಣ್ ನಾಯಕ್, ಹಿರಿಯ ನಟಿ ಲಕ್ಷ್ಮೀ ದೇವಮ್ಮ ಸೇರಿದಂತೆ ಹಲವು ಅನುಭವಸ್ಥ ಕಲಾವಿದರು ಅವನಿರಬೇಕಿತ್ತು ಚಿತ್ರಕ್ಕೆ ಶಕ್ತಿಯಾಗಿದ್ದಾರೆ.

ನಿರ್ಮಾಪಕ ಮುರಳಿ ನಿರ್ದೇಶಕ ಅಶೋಕ್ ಹೊಸಬರೇ ಆದ್ರೂ ಅಪಾರ ಸಿನಿಮಾಸಕ್ತಿ, ಸಿನಿಮಾನುಭವವನ್ನ ಹೊಂದಿರೋ ಸ್ನೇಹಿತರು.. ಹಾಗಾಗಿ ಈ ಸಿನಿಮಾ ಪ್ರೇಕ್ಷಕನೊಬ್ಬ ನಿರ್ಮಾಪಕ ನಿರ್ದೇಶಕನಾಗಿ ಮಾಡಿದಂತೆ ಭಾಸವಾಗ್ತಿದೆ. ಈಗಾಗ್ಲೇ ಪ್ರಚಾರ ಕಾರ್ಯದಲ್ಲಿ ತಲ್ಲೀವಾಗಿದೆ. ಕೆ.ಆರ್.ಜಿ ಸ್ಟುಡಿಯೋಸ್ ಈ ಚಿತ್ರವನ್ನ ವಿತರಣೆ ಮಾಡಲು ಮುಂದಾಗಿರೋದು ಈ ಸಿನಿಮಾ ಮೇಲಿನ ನಿರೀಕ್ಷೆ ಮತ್ತೊಂದು ಪಟ್ಟು ಹೆಚ್ಚಾಗುವಂತೆ ಮಾಡಿದೆ. ಈ ನಡುವೆ ಅವನಿರಬೇಕಿತ್ತು ಚಿತ್ರದ ಟ್ರೈಲರ್ ನ ನೋಡಿ ಪಿ.ಆರ್.ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಕೂಡ ಚಿತ್ರತಂಡವನ್ನ ಪ್ರಶಂಸಿಸಿದ್ದಾರೆ.

ಅವನಿರಬೇಕಿತ್ತು.. ಜೂನ್ 27ರಂದು ರಾಜ್ಯದಾದ್ಯಂತ ರಿಲೀಸ್ ಆಗ್ತಿದೆ. ಎಲ್ಲಾ ವರ್ಗದವರನ್ನೂ ಸೆಳೆಯುವಂತಹ ಅಂಶಗಳಿರೋ ಈ ಚಿತ್ರವನ್ನ ಕನ್ನಡ ಪ್ರೇಕ್ಷಕರು ಹೇಗೆ ಸ್ವೀಕರಿಸ್ತಾರೆ ಅನ್ನೋದೇ ಸದ್ಯದ ಕುತೂಹಲ.

ಚಿತ್ರದಲ್ಲಿ ಭರತ್, ಸೌಮ್ಯಾ ಜಾನ್, ಜಯಸಿಂಹ, ಲಕ್ಷ್ಮೀದೇವಮ್ಮ, ಪ್ರಶಾಂತ್ ಸಿದ್ದಿ, ಕಿರಣ್ ನಾಯಕ್, ಮಂಜುನಾಥ್ ಎಜಿ, ತೀರ್ಥ ಪೊನ್ನಮ್ಮ, ರಂಗನಾಥ್, ಬಸವ ಮೇತ್ರಿ, ಆಚಾರ್ಯ, ವಿಶೇಷ್, ನಾಗರಾಜ್ ಮತ್ತಿತರರು ಕಾಣಿಸಿಕೊಂಡಿದ್ದಾರೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin