ಜುಲೈ 4 ರಂದು ‘ಮೆಟ್ರೋ…ಇನ್ ಡಿನೋ’ ಚಿತ್ರ ತೆರೆಗೆ
ಬಾಲಿವುಡ್ ನಿರ್ದೇಶಕ ಅನುರಾಗ್ ಬಸು ನಿರ್ದೇಶನದಲ್ಲಿ ಆದಿತ್ಯ ರಾಯ್ ಕಪೂರ್ ಮತ್ತು ಸಾರಾ ಅಲಿ ಖಾನ್ ಜೋಡಿಯಾಗಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ಚಿತ್ರ ‘ಮೆಟ್ರೋ…ಇನ್ ಡಿನೋ’ ಜುಲೈ 4 ರಂದು ವಿವಿಧ ಭಾಷೆಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ.

ಚಿತ್ರ ಬಿಡುಗಡೆಯ ಹಿನ್ನೆಲೆಯಲ್ಲಿ ಆದಿತ್ಯ ರಾಯ್ ಕಪೂರ್ ಮತ್ತು ಸಾರಾ ಅಲಿ ಖಾನ್ ಗಾಯಕ ಶಾಶ್ವತ್ ಸಿಂಗ್ ಜೊತೆಗೂಡಿ ಪ್ರಚಾರಕ್ಕೆ ಬೆಂಗಳೂರಿಗೆ ಆಗಮಿಸಿತ್ತು.
‘ಮೆಟ್ರೋ ಇನ್ ಡಿನೋ’ ನಾಲ್ಕು ಪರಸ್ಪರ ಸಂಬಂಧ ಹೊಂದಿರುವ ಕಥೆ ಒಳಗೊಂಡಿದೆ. ಪ್ರೀತಿ, ನಿಷ್ಠೆ ಮತ್ತು ಆಧುನಿಕ ಸಂಬಂಧಗಳ ಭಾವನಾತ್ಮಕ ವಿಷಯಗಳ ಕುರಿತು ಬೆಳಕು ಚೆಲ್ಲಲಿದೆ, ಚಿತ್ರ ಜನರು ಜೀವನ ಮತ್ತು ಸಂಬಂಧಗಳ ಅವ್ಯವಸ್ಥೆಯನ್ನು ಅನಾವರಣ ಮಾಡಲಾಗಿದೆ. ಭಾವನಾತ್ಮಕ ಅಲೆಗಳನ್ನು ಪ್ರಚೋದಿಸಲಿದೆ.
`ಮೆಟ್ರೋ ಇನ್ ಡಿನೋ’ ಚಿತ್ರದಲ್ಲಿ ಪಂಕಜ್ ತ್ರಿಪಾಠಿ, ಕೊಂಕಣ ಸೇನ್ಶರ್ಮ, ಅಲಿ ಫಜಲ್, ಫಾತಿಮಾ ಸನಾ ಶೇಖ್, ಅನುಪಮ್ ಖೇರ್ ಮತ್ತು ನೀನಾ ಗುಪ್ತಾ ಸೇರಿದಂತೆ ಅದ್ಭುತ ತಾರಾಗಣವಿದೆ.

ಅನುರಾಗ್ ಬಸು ಪ್ರೊಡಕ್ಷನ್ಸ್ ಪ್ರೈ. ಲಿಮಿಟೆಡ್ ಸಹಯೋಗದೊಂದಿಗೆ ಗುಲ್ಶನ್ ಕುಮಾರ್ ಮತ್ತು ಟಿ-ಸೀರೀಸ್ ಪ್ರೈವೇಟ್ ಲಿಮಿಟೆಡ್, `ಮೆಟ್ರೋ ಇನ್ ಡಿನೋ’ ಪ್ರಸ್ತುತಪಡಿಸುತ್ತದೆ. ಅನುರಾಗ್ ಬಸು ನಿರ್ದೇಶನದ, ಪ್ರೀತಮ್ ಸಂಗೀತ ಸಂಯೋಜನೆ ಮತ್ತು ಭೂಷಣ್ ಕುಮಾರ್, ಕ್ರಿಶನ್ ಕುಮಾರ್, ಅನುರಾಗ್ ಬಸು ಮತ್ತು ತಾನಿ ಬಸು ನಿರ್ಮಾಣವಿದೆ

