” ಲವ್ ಮ್ಯಾಟ್ರು” ಆಗಸ್ಟ್ 22 ಕ್ಕೆ ರಾಜ್ಯಾದ್ಯಂತ ತೆರೆಗೆ
ನಟ ವಿರಾಟ್ ಬಿಲ್ವ ನಿರ್ದೇಶನದ ” ಲವ್ ಮ್ಯಾಟ್ರು” ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಆಗಸ್ಟ್ 1 ಕ್ಕೆ ತೆರೆಗೆ ಬರಬೇಕಾಗಿತ್ತು. ಸು ಪ್ರಮ್ ಸೋ ಸೇರಿದಂತೆ ಕೆಲ ಚಿತ್ರಗಳು ಉತ್ತಮ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಚಿತ್ರವನ್ನು ಆಗಸ್ಟ್ 22 ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ

ಅರ್ಧ ವರ್ಷ ಮುಗಿದೇ ಹೋಗಿದೆ. ಆದರೆ ಸ್ವಲ್ಪ ಹಿಂದೆ ನೋಡಿದಾಗ ಅದ್ಯಾಕೋ ಏನೋ ಥಿಯೇಟರ್ ಗಳು ನಿರೀಕ್ಷಿತ ಮಟ್ಟಕ್ಕೆ ತುಂಬ್ತಾ ಇರ್ಲಿಲ್ಲ. ಆಗ ಎಲ್ಲಾ ಮಾತಾಡಿಕೊಂಡಿದ್ದು ಪ್ರೇಕ್ಷಕರ್ಯಾರು ಸಿನಿಮಾ ನೋಡೋದಕ್ಕೆ ಬರ್ತಿಲ್ಲ ಅನ್ನೋದು. ಇದು ನಿರ್ಮಾಪಕರ ಎನರ್ಜಿಯನ್ನು ಕುಂದುವಂತೆ ಮಾಡಿತ್ತು. ಸು ಫ್ರಂ ಸೋ ಸಿನಿಮಾ. ಥಿಯೇಟರ್ ಮಾಲೀಕರಿಗೆ ಹಬ್ಬ, ಜನಗಳಿಗೆ ನಕ್ಕು ನಲಿದು ಬಂದ ತೃಪ್ತಿ. ಹೀಗಾಗಿ ಒಳ್ಳೆ ಸಿನಿಮಾಗಳು ಬಂದರೆ ಜನ ಕೂಡ ಮೊಬೈಲ್ ಬಿಟ್ಟು ಬಿಗ್ ಸ್ಕ್ರೀನ್ ನಲ್ಲಿ ಸಿನಿಮಾ ನೋಡೋದಕ್ಕೆ ಬರ್ತಾರೆ ಅನ್ನೋದು ಪಕ್ಕಾ ಆಗಿದೆ.
ಆಗಸ್ಟ್ 1ಕ್ಕೆ ತೆರೆಗೆ ಬರಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿತ್ತು ಕೆಲ ಚಿತ್ರಗಳು ಉತ್ತಮವಾಗಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳುವ ಗೋಜಿಗೆ ಹೋಗಿಲ್ಲ. ಬದಲಾಗಿ ಆಗಸ್ಡ್ 22 ರಂದು ರಾಜ್ಯಾದ್ಯಂತ ತೆರೆಗೆ ತರಲು ಮುಂದಾಗಿದ್ದಾರೆ.

ವಂದನಾ ಪ್ರಿಯ ನಿರ್ಮಾಣ ಮಾಡಿದ್ದು ಚಿತ್ರವನ್ನು ಆಗಸ್ಟ್ 22ಕ್ಕೆ ಸಿನಿಮಾ ಬಿಡುಗಡೆ ಮಾಡ್ತಾ ಇದ್ದೇವೆ. ಕನ್ನಡ ಚಿತ್ರಗಳನ್ನ ನೋಡೋದಕ್ಕೆ ಜನ ಬರ್ತಾ ಇಲ್ಲ ಅಂತ. ಆ ಸುಳ್ಳನ್ನ ಮುರಿದು ಹಾಕಿರೋದು ಸು ಫ್ರಂ ಸೋ ಸಿನಿಮಾ. ಸಿನಿಮಾ ತುಂಬಾ ಚೆನ್ನಾಗಿ ಆಗ್ತಾ ಇದೆ ಅಂದಾಗ, ಅದರಲ್ಲೂ ಕನ್ನಡ ಸಿನಿಮಾ ಅದ್ಭುತವಾದ ರೆಸ್ಪಾನ್ಸ್ ಪಡೆಯುತ್ತಿದೆ ಎಂದಾಗ ನಾವೂ ಪೂರಕವಾಗಿ ನಿಂತುಕೊಳ್ಳಬೇಕು. ಹೀಗಾಗಿ ನಮ್ಮ ಸಿನಿಮಾವನ್ನು ಪೋಸ್ಟ್ ಪೋನ್ ಮಾಡಿದ್ದೇವೆ ಎಂದಿದ್ದಾರೆ.

ನಿರ್ಮಾಪಕರು ಯಾವತ್ತಿಗೂ ಬಿಸಿನೆಸ್ ಬಗ್ಗೆಯೂ ಯೋಚನೆ ಮಾಡ್ತಾರೆ. ಅದೇ ರೀತಿ ವಂದನಾ ಕೂಡ ಯೋಚನೆ ಮಾಡಿದ್ದು, ಬಿಸಿನೆಸ್ ಆಯಾಮ, ಇಂಡಸ್ಟ್ರಿಯ ಓವರ್ ಆಲ್ ಆಯಾಮ ನೋಡಿ ಒಂದು ನಿರ್ಧಾರಕ್ಕೆ ಬಂದೆವು. ತುಂಬಾ ತುಂಬಾ ನಂಬಿರೋದು ಕಂಟೆಂಟ್ ಕಿಂಗ್ ಅಂತ. ಅಟ್ ದಿ ಸೇಮ್ ಟೈಮ್ ಆಡಿಯನ್ಸ್ ಕೂಡ ಕಿಂಗ್. ಹೀಗಾಗಿ ಒಂದೊಳ್ಳೆ ಸಮಯ ಮಾಡಿಕೊಂಡು ಸಿನಿಮಾ ರಿಲೀಸ್ ಮಾಡ್ಬೇಕು ಅಂತ ಈ ನಿರ್ಧಾರ ತೆಗೆದುಕೊಂಡೆವು ಎಂದಿದ್ದಾರೆ ವಂದನಾ.


