Hombale organization announces new film 'Mahavatara Parashurama'

“ಮಹಾವತಾರ ಪರಶುರಾಮ’ ಹೊಸ ಚಿತ್ರ ಘೋಷಿಸಿದ ಹೊಂಬಾಳೆ ಸಂಸ್ಥೆ - CineNewsKannada.com

“ಮಹಾವತಾರ ಪರಶುರಾಮ’ ಹೊಸ ಚಿತ್ರ ಘೋಷಿಸಿದ ಹೊಂಬಾಳೆ ಸಂಸ್ಥೆ

ಪರಶುರಾಮ ಜಯಂತಿಯ ಶುಭ ಸಂದರ್ಭದಲ್ಲಿ ಹೊಂಬಾಳೆ ಫಿಲ್ಮ್ಸ್‍ನಿಂದ ಮತ್ತೊಂದು ಅದ್ಧೂರಿ ಚಿತ್ರದ ಘೋಷಣೆ ಮಾಡಿದ್ದು ಹೊಸ ಚಿತ್ರಕ್ಕೆ `ಮಹಾವತಾರ ಪರಶುರಾಮ’ ಎಂದು ಹೆಸರಿಡಲಾಗಿದೆ

ಭಾರತೀಯ ಚಿತ್ರರಂಗದ ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ಪರಶುರಾಮ ಜಯಂತಿಯ ವಿಶೇಷ ದಿನದಂದು ತನ್ನ ಮುಂದಿನ ಮಹತ್ವಾಕಾಂಕ್ಷೆಯ ಚಿತ್ರ `ಮಹಾವತಾರ ಪರಶುರಾಮ’ ಅಧಿಕೃತವಾಗಿ ಘೋಷಿಸಿದೆ.

ರಾಜಕುಮಾರ',ಕೆಜಿಎಫ್’, ಕಾಂತಾರ',ಸಲಾರ್’ ಹಾಗೂ ಇತ್ತೀಚೆಗೆ ಘೋಷಣೆಯಾದ `ಮಹಾವತಾರ ನರಸಿಂಹ’ದಂತಹ ಬ್ಲಾಕ್‍ಬಸ್ಟರ್ ಚಿತ್ರಗಳ ಮೂಲಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿರುವ ಹೊಂಬಾಳೆ ಫಿಲ್ಮ್ಸ್, ಈಗ ತನ್ನ ಯಶಸ್ಸಿನ ಪಯಣದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದೆ.

ಅಶ್ವಿನ್ ಕುಮಾರ್ ನಿರ್ದೇಶನದಲ್ಲಿ ಹಾಗೂ ಕ್ಲೀಂ ಪೆÇ್ರಡಕ್ಷನ್ಸ್ ಸಹಯೋಗದೊಂದಿಗೆ ಪೌರಾಣಿಕ ಕಥೆಯನ್ನು ತೆರೆಗೆ ತರುತ್ತಿದೆ. ಇದು ಹೊಂಬಾಳೆ ಫಿಲ್ಮ್ಸ್ ರೂಪಿಸಿರುವ `ಮಹಾವತಾರ ಸಿನಿಮಾಟಿಕ್ ಯುನಿವರ್ಸ್’ನ ಒಂದು ಪ್ರಮುಖ ಭಾಗವಾಗಿದ್ದು, ಅತ್ಯಾಧುನಿಕ ಅನಿಮ್ಯಾಟಿಕ್ ತಂತ್ರಜ್ಞಾನದ ಮೂಲಕ ಸಾಂಸ್ಕೃತಿಕ ಪರಂಪರೆಯನ್ನು ಇಂದಿನ ಪೀಳಿಗೆಗೆ ದೃಶ್ಯ ವೈಭವದಂತೆ ಉಣಬಡಿಸಲು ಸಜ್ಜಾಗಿದೆ.

ಈ ಘೋಷಣೆಯು ಈಗಾಗಲೇ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ಜಯ ಸ್ಥಾಪಿಸುವ ಮುನ್ಸೂಚನೆ ನೀಡಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin