ನಟ ಕಮಲ್ ರಾಜ್ ಹೆಸರು `ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ಗೆ ಸೇರ್ಪಡೆ
ಕನ್ನಡ ಚಿತ್ರರಂಗದಲ್ಲಿ ನಟ, ನಿರ್ಮಾಪಕ, ನಿರ್ದೇಶಕ, ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿರುವವರು ಕಮಲ್ ರಾಜ್ (ಕಲೀಂ ಪಾಷ) ಇದೀಗ ವಿಶ್ವದ ಪ್ರತಿಷ್ಟಿತ ದಾಖಲೆ ಪುಸ್ತಕಗಳಲ್ಲಿ ಒಂದಾಗಿರುವ `ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ಗೆ ಸೇರ್ಪಡೆಯಾಗಿದ್ದಾರೆ

ಸಿನಿಮಾ, ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಕೂಡ ಸುಮಾರು ಎರಡೂವರೆ ದಶಕಗಳಿಂದ ತೊಡಗಿಸಿಕೊಂಡಿರುವ ಕಮಲ್ ರಾಜ್, ಕನ್ನಡ, ಹಿಂದಿ ಸೇರಿದಂತೆ ಸುಮಾರು ನೂರಕ್ಕೂ ಹೆಚ್ಚು ಸಂಗೀತ ಆಲ್ಬಮ್ ಗಳನ್ನು ಇಲ್ಲಿಯವರೆಗೆ ಸಂಯೋಜಿಸಿ, ಪ್ರಮುಖ ಡಿಜಿಟಲ್ ವೇದಿಕೆಗಳಲ್ಲಿ ಬಿಡುಗಡೆ ಮಾಡಿದ್ದಾರೆ.
ಆಧ್ಯಾತ್ಮ, ಜೀವನ, ಪ್ರೀತಿ, ಮಾನವೀಯತೆ ಕುರಿತಾದ ಸುಮಾರು ಐದು ಸಾವಿರಕ್ಕೂ ಅಧಿಕ ಶಾಯರಿ ರಚಿಸಿರುವ ಕಮಲ್ ರಾಜ್,ಪುಸ್ತಕ ರೂಪದಲ್ಲಿ ಕನ್ನಡ, ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಲ್ಲಿ ಹೊರತಂದಿದ್ದಾರೆ.
ನಟ ಕಮಲ್ ರಾಜ್ ಪ್ರತಿಕ್ರಿಯಿಸಿ ಕೆಲಸಗಳು ಇತರರಿಗೆ ಅನುಕೂಲವಾಬೇಕು, ಮಾದರಿಯಾಗಿರಬೇಕು ಮತ್ತು ಸುತ್ತಮುತ್ತಲಿನವರಿಗೆ ಪ್ರೇರಣೆಯಾಗಬೇಕು ಬಹುಶಃ ಕೆಲಸದ ಅದೇ ಶೈಲಿ ಇಂದುಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ಗೆ ಗುರುತಿಸುವಂತೆ ಮಾಡಿದೆ. ಮುಂದೆಯೂ ನನ್ನ ಅಭಿರುಚಿಯ ಕಲಾ ಸೇವೆ ನಿರಂತರವಾಗಿರುತ್ತದೆ’ ಎಂದಿದ್ದಾರೆ.

