A tribute to Abhinaya Saraswati Sarojadevi

ಅಭಿನಯ ಸರಸ್ವತಿ ಸರೋಜಾದೇವಿಗೆ ಅಭಿಮಾನದ ಶ್ರದ್ದಾಂಜಲಿ - CineNewsKannada.com

ಅಭಿನಯ ಸರಸ್ವತಿ ಸರೋಜಾದೇವಿಗೆ ಅಭಿಮಾನದ ಶ್ರದ್ದಾಂಜಲಿ

ಕಳೆದ ತಿಂಗಳು ಇಹಲೋಕದಿಂದ ದೂರವಾದ ಹಿರಿಯ ನಟಿ, ಅಭಿನಯ ಸರಸ್ವತಿ, ಪದ್ಮಭೂಷಣ ಡಾಕ್ಟರ್ ಬಿ. ಸರೋಜಾದೇವಿ ಅವರ ಚಿತ್ರರಂಗದ ಗಣ್ಯರು ಅಭಿಮಾನದಿಂದ ಶ್ರದ್ದಾಂಜಲಿ ಸಲ್ಲಿಸಿದರು.

ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮುಂದಾಳತ್ವದಲ್ಲಿ ನಡೆದ ಶ್ರದ್ಧಾಂಜಲಿ ಹಾಗೂ ನುಡಿ ನಮನ ಕಾರ್ಯಕ್ರಮದಲ್ಲಿ ಕನ್ನಡ, ತೆಲುಗು, ತಮಿಳು ಚಿತ್ರರಂಗದ ಹಲವು ಕಲಾವಿದರು, ತಂತ್ರಜ್ಞರು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ದೇಶಕರ ಸಂಘ, ನಿರ್ಮಾಪಕರ ಸಂಘ, ಕಲಾವಿದರ ಸಂಘ ಮುಂತಾದ ಚಿತ್ರರಂಗದ ಸಂಘಟನೆಗಳಿಂದ ಆಯೋಜನೆ ಮಾಡಲಾಗಿತ್ತು.

ಸರೋಜಾದೇವಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಸರೋಜಾದೇವಿ ಅವರು ನಡೆದು ಬಂದ ದಾರಿಯ ವಿಡಿಯೋ ಪ್ರದರ್ಶನ ಮಾಡಲಾಯಿತು.

ನಿರ್ಮಾಪಕ, ನಟ ರಾಕ್ ಲೈನ್ ವೆಂಕಟೇಶ್, ‘ಈ ಕಾರ್ಯಕ್ರಮವನ್ನು ಕಲಾವಿದರ ಸಂಘದಲ್ಲಿ ನಡೆಸಲು ಕಾರಣವಿದೆ. ಈ ಕಟ್ಟಡ ಆಗಲು ಸರೋಜಮ್ಮನವರ ಶ್ರಮ ಕೂಡ ತುಂಬಾ ಇದೆ. ಇಡೀ ಚಿತ್ರರಂಗ ಒಂದು ಕುಟುಂಬವಾಗಿ ಈ ಕಾರ್ಯಕ್ರಮ ನಡೆಸುತ್ತಿದ್ದೇವೆ. ಬೇರೆ ಬೇರೆ ಚಿತ್ರರಂಗದಿಂದ ನಟರಾದ ನಾಸರ್, ಕಲಾವತಿ ಆಗಮಿಸಿದ್ದಾರೆ. ರಾಜ್ ಕುಮಾರ್ ಕನಸು ಕಲಾವಿದರ ಭವನ ಕಟ್ಟುವುದು ಆಗಿತ್ತು. ಅದನ್ನು ಅಂಬರೀಶ್ ಅವರು ನನಸು ಮಾಡಿದರು. ಈ ಭವನ ಕಟ್ಟಲು ಸರೋಜಾದೇವಿ ಅವರು ಅಧ್ಯಕ್ಷರಾಗಿದ್ದರು’ ಎಂದು ತಮ್ಮ ಹಾಗೂ ಸರೋಜಾದೇವಿ ಅವರ ಒಡನಾಟ ನೆನೆದು ಬಾವುಕರಾದರು.

ಹಿರಿಯ ನಟಿ ಸುಮಲಾತಾ ಅಂಬರೀಶ್, ‘ಸರೋಜಮ್ಮನವರ ಬಗ್ಗೆ ಮಾತನಾಡಲು ನಾವು ಚಿಕ್ಕವರು. ಚಿತ್ರರಂಗದಲ್ಲಿ ಛಾಪನ್ನು ಮೂಡಿಸಿದವರು. ಇಂದಿಗೂ ದೇಶ ವಿದೇಶಗಳಲ್ಲೂ ಅವರ ಹಾಡುಗಳನ್ನು ಇಷ್ಟ ಪಡುತ್ತಾರೆ. ಅವರು ಯಾವಾಗಲೂ ಚಿಕ್ಕ ಮಕ್ಕಳ ತರ ಇರತಾ ಇದ್ದರು. ಅಂಬರೀಶ್ ಅವರನ್ನು ತಮ್ಮನ ತರ ನೋಡತಾ ಇದ್ದರು. ಅವರು ತುಂಬಾ ಚನ್ನಾಗಿ ಪ್ರೊಫೆಶನಲ್ ಹಾಗೂ ಪರ್ಸನಲ್ ಲೈಫ್ ಕ್ಯಾರಿ ಮಾಡಿದರು. ಇದು ಎಲ್ಲರಿಗೂ ಮಾದರಿ ಆಗಬೇಕು ಎಂದರು

ಕಲಾವಿದ ಭವನ ಮಾಡಲು ರಾಜಕುಮಾರ್ ಹಾಗೂ ಅಂಬರೀಶ್ ಅವರಂತೆಯೇ ಸರೋಜಾದೇವಿ ಅವರ ಶ್ರಮ ಕೂಡ ಇದೆ. ಇಂತಹ ಭವನ ಇಡೀ ಇಂಡಿಯಾದಲ್ಲಿಯೇ ಇಲ್ಲ. ಇಂತಹ ಭವನವನ್ನು ಕಲಾವಿದರು ಚನ್ನಾಗಿ ಬಳಸಿಕೊಂಡು, ಮುಂದುವರೆಸಿಕೊಂಡು ಹೋಗಬೇಕು’ ಎಂದು ಹೇಳಿದರು

ಚೆನೈನಿಂದ ಆಗಮಿಸಿದ್ದ ಬಹು ಭಾಷಾ ನಟ ನಾಸರ್ ತಮ್ಮ ಹಾಗೂ ಸರೋಜಾದೇವಿ ಅವರ ಒಡನಾಟದ ನೆನಪುಗಳು ಮೆಲುಕು ಹಾಕಿದರು.

ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು , ಅನು ಪ್ರಭಾಕರ್, ರಘು ಮುಖರ್ಜಿ, ನೆನಪಿರಲಿ ಪ್ರೇಮ್, ಮುಖ್ಯಮಂತ್ರಿ ಚಂದ್ರು, ಸುಂದರರಾಜ್, ಗಿರಿಜಾ ಲೋಕೇಶ್ ಮುಂತಾದವರು ಭಾಗವಹಿಸಿ ಅನುಭವ ಹಂಚಿಕೊಂಡರು.

ವಿಶೇಷವಾಗಿ ಈ ಕಾರ್ಯಕ್ರಮದಲ್ಲಿ ಸರೋಜಾದೇವಿ ಅವರ ಪುತ್ರಿ ಹಾಜರಿದ್ದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin