ಹೊಂಬಾಳೆ ಫಿಲ್ಮ್ಸ್ ಮತ್ತು ಪಿವಿಆರ್ ಐನಾಕ್ಸ್ ಲೋಗೋ
ಭಾರತದ ಅತಿದೊಡ್ಡ ಮತ್ತು ಅತ್ಯಂತ ಪ್ರೀಮಿಯಂ ಸಿನಿಮಾ ಪ್ರದರ್ಶಕ ಸಂಸ್ಥೆ ಪಿವಿಆರ್ ಐನಾಕ್ಸ್, ಹೊಂಬಾಳೆ ಫಿಲ್ಮ್ಸ್ ಜೊತೆಗೂಡಿ ಹೊಸತನ ಮತ್ತು ವೈಶಿಷ್ಟ್ಯಪೂರ್ಣ ಪ್ರೇಕ್ಷಕ ಅನುಭವ ನೀಡುತ್ತಿದೆ.ಪಿವಿಆರ್ ಐನಾಕ್ಸ್ ತನ್ನ ಲೋಗೋಗೆ ಕಾಂತಾರ ಚಿತ್ರದ ಅಗ್ನಿ ಅಂಶಗಳನ್ನು ಸೇರಿಸಿರುವುದು ವಿಶೇಷ. ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ‘ಕಾಂತಾರ: ಚಾಪ್ಟರ್ 1’ ಚಿತ್ರದ ಪೂರ್ವಭಾವಿ ತಯಾರಿ. ಈ ಚಿತ್ರ ಅಕ್ಟೋಬರ್ 2ರಂದು ಬಿಡುಗಡೆಯಾಗಲಿದೆ.
ಆಗಸ್ಟ್ 14ರಿಂದ, ‘ಕೂಲಿ’ ಮತ್ತು ‘ವಾರ್ 2’ ಚಿತ್ರಗಳನ್ನು ನೋಡಲು ಬರುವ ಪ್ರೇಕ್ಷಕರು ಎಲ್ಲಾ ಪಿವಿಆರ್ ಐನಾಕ್ಸ್ ಚಿತ್ರಮಂದಿರಗಳಲ್ಲಿ ಅಗ್ನಿ-ಆಧಾರಿತ ಅನಿಮೇಷನ್ ಹೊಂದಿರುವ ಲೋಗೋ ನೋಡಲಿದ್ದಾರೆ. ಅತ್ಯಾಧುನಿಕ ಪೆÇ್ರಜೆಕ್ಷನ್ ವ್ಯವಸ್ಥೆಗಳು ಮತ್ತು ಡಿಜಿಟಲ್ ತಂತ್ರಜ್ಞಾನದ ನೆರವಿನಿಂದ ಲೋಗೋವನ್ನು ವಿಶೇಷವಾಗಿ ರೂಪಿಸಲಾಗಿದೆ. ಕಾಂತಾರ ಚಿತ್ರದ ಮೂಲ ಶಕ್ತಿ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಪ್ರತಿಬಿಂಬಿಸುತ್ತದೆ. ಒಂದು ಬ್ರಾಂಡ್ ಗುರುತನ್ನು ಸಹ ಪ್ರೇಕ್ಷಕರಿಗೆ ಒಂದು ವಿಶೇಷ ಕಥಾ ಪ್ರಪಂಚಕ್ಕೆ ಕರೆದೊಯ್ಯುವ ಸಾಧನವಾಗಿ ಹೇಗೆ ಬಳಸಬಹುದು ಎಂಬುದನ್ನು ಇದು ತೋರಿಸುತ್ತದೆ.
ಪಿವಿಆರ್ ಐನಾಕ್ಸ್ನ ಎಲ್ಲಾ ಚಿತ್ರಮಂದಿರಗಳ ದೊಡ್ಡ ಪರದೆಗಳ ಮೇಲೆ ಈ ಲೋಗೋ ಪ್ರದರ್ಶನಗೊಳ್ಳಲಿದೆ. ವರ್ಷದ ಅತಿದೊಡ್ಡ ಸಿನಿಮ್ಯಾಟಿಕ್ ಘಟನೆಗಳಲ್ಲಿ ಒಂದಕ್ಕೆ ಪ್ರೇಕ್ಷಕರನ್ನು ಸಜ್ಜುಗೊಳಿಸಲಿದೆ.
ಪಿವಿಆರ್ ಐನಾಕ್ಸ್ ಲಿಮಿಟೆಡ್ನ ಸಿಇಒ ಗೌತಮ್ ದತ್ತಾ ಮಾತನಾಡಿ “ಸಿನಿಮಾ ಕೇವಲ ಮನರಂಜನೆಯಲ್ಲ, ರಾಷ್ಟ್ರವನ್ನು ಒಂದುಗೂಡಿಸುವ ಒಂದು ಭಾವನೆ. ಪಿವಿಆರ್ ಐನಾಕ್ಸ್ನಲ್ಲಿ ನಿರಂತರವಾಗಿ ತೆರೆಯ ಆಚೆಗಿನ ಭವ್ಯ ಅನುಭವಗಳನ್ನು ಸೃಷ್ಟಿಸಲು ಶ್ರಮಿಸುತ್ತೇವೆ ಎಂದಿದ್ದಾರೆ
ನಿರ್ಮಾಪಕ ವಿಜಯ್ ಕಿರಗಂದೂರು ಮಾತನಾಡಿ “ಭಾರತದ ಅತಿ ದೊಡ್ಡ ಮಲ್ಟಿಪ್ಲೆಕ್ಸ್ ಚೈನ್, ಅಂದರೆ ಪಿವಿಆರ್ ಐನಾಕ್ಸ್, ಜಾಗತಿಕವಾಗಿ ಅತಿದೊಡ್ಡ ಪ್ರೇಕ್ಷಕ ಸಂಪರ್ಕವನ್ನು ಹೊಂದಿದೆ. ಕಾಂತಾರ ಚಿತ್ರವನ್ನು ಅನನ್ಯ ರೀತಿಯಲ್ಲಿ ಆಚರಿಸಲು ನಿರ್ಧರಿಸಿರುವುದು ನಮಗೆ ಹೆಮ್ಮೆಯ ವಿಷಯ. ಎಂದರು

