Daali Dhananjaya to play Jadaga in historical film “Hadagali”: A two-part film

ಐತಿಹಾಸಿಕ ಚಿತ್ರ “ಹಡಗಲಿ’ ಚಿತ್ರದಲ್ಲಿ ಜಡಗ ಪಾತ್ರದಲ್ಲಿ ಡಾಲಿ ಧನಂಜಯ: ಎರಡು ಭಾಗಗಳಲ್ಲಿ ಸಿನಿಮಾ - CineNewsKannada.com

ಐತಿಹಾಸಿಕ ಚಿತ್ರ “ಹಡಗಲಿ’ ಚಿತ್ರದಲ್ಲಿ ಜಡಗ ಪಾತ್ರದಲ್ಲಿ ಡಾಲಿ ಧನಂಜಯ: ಎರಡು ಭಾಗಗಳಲ್ಲಿ ಸಿನಿಮಾ

“ಪಾಪ್‍ಕಾರ್ನ್ ಮಂಕಿ ಟೈಗರ್ ” ಚಿತ್ರದ ಬಳಿಕ ನಟ ಡಾಲಿ ಧನಂಜಯ ಮತ್ತು ನಟಿ ಸಪ್ತಮಿ ಗೌಡ ಮತ್ತೊಮ್ಮೆ ಜೊತೆಯಾಗಿ ನಟಿಸುತ್ತಿರುವ “ಹಲಗಲಿ” ಚಿತ್ರ. ಬಾಗಲಕೋಟೆಯ ಹಲಗಲಿ ಬೇಡರ ಕುರಿತಾದ ಐತಿಹಾಸಿಕ ಚಿತ್ರ. ಸ್ವಾತಂತ್ರ್ಯಕ್ಕಾಗಿ ಗೆರಿಲ್ಲಾ ವಾರ್ ಮೂಲಕ ಬ್ರಿಟೀಷರಿಗೆ ಸಿಂಹ ಸ್ವಪ್ನವಾಗಿ ಕಾಡಿದ ಘಟನೆ ಆಧರಿಸಿದ ಚಿತ್ರ ಹಲಗಲಿ.

ಚಿತ್ರದ ಮೊಲದ ಗ್ಲಿಂಪ್ಸ್ ಬಿಡುಗಡೆಗೆ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ನಿವೃತ್ತ ಪೆÇಲೀಸ್ ಅಧಿಕಾರಿ ಎಸ್‍ಕೆ ಉಮೇಶ್ ಕುಮಾರ್ ಮತ್ತಿತರರು ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ‘ಹಲಗಲಿ’ ಇದು ನಮ್ಮ ಮಣ್ಣಿನ ಕಥೆಯಾಧರಿಸಿದ ಚಿತ್ರ. ಈ ಹಿನ್ನೆಲೆಯಲ್ಲಿ ಕನ್ನಡದ ಜೊತೆಗೆ ತೆಲುಗುಮ ತಮಿಳು, ಮಲೆಯಾಳಂ ಮತ್ತು ಹಿಂದಿ ಭಾಷೆ ಸೇರಿದಂತೆ ವಿವಿಧ ಭಾಷೆಯಲ್ಲಿ ಚಿತ್ರವನ್ನು ತೆರೆಗೆ ತರಲು ಸಿದ್ದತೆ ನಡೆಸಲಾಗಿದೆ

“ಕೃಷ್ಣತುಳಸಿ” ಚಿತ್ರ ನಿರ್ದೇಶನ ಮಾಡಿದ್ದ ಸುಕೇಶ್ ನಾಯಕ್ ಎರಡನೇ ಚಿತ್ರದಲ್ಲಿ ಐತಿಹಾಸಿಕ ಚಿತ್ರಕ್ಕೆ ಆಕ್ಷನ್‍ಕಟ್ ಹೇಳುತ್ತಿದ್ದಾರೆ, ಬಳ್ಳಾರಿಯ ಉದ್ಯಮಿ ಕಲ್ಯಾಣ್ ಚಕ್ರವರ್ತಿ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಹಲಗಲಿ ಬೇಡರ ಕುರಿತಾದ ಐತಿಹಾಸಿಕ ಚಿತ್ರವನ್ನು ಕನ್ನಡದಲ್ಲಿ ಐತಿಹಾಸಿಕವಾಗಿಸಲು ಚಿತ್ರತಂಡ ಮುಂದಡಿ ಇಟ್ಟಿದೆ.

ಚಿತ್ರದ ಮೊದಲ ಗ್ಲಿಂಪ್ಸ್ ಬಿಡುಗಡೆ ಮಾಡಿದ ಬಳಿಕ ಚಿತ್ರತಂಡ ಮಾತಿಗಿಳಿಯಿತು, ಈ ವೇಳೆ ನಟ ಡಾಲಿ ಧನಂಜಯ ಮಾತನಾಡಿ ಹಲಗಲಿ ಬೇಡರ ಕುರಿತ ಚಿತ್ರದ ಮೂಲಕ ಐತಿಹಾಸಿಕ ಚಿತ್ರದಲ್ಲಿ ನಟಿಸುವ ಕನಸು ನನಸಾಗಿದೆ. ಚಿತ್ರ ಚೆನ್ನಾಗಿ ಮೂಡಿ ಬರುತ್ತಿದೆ. ಚಿತ್ರದ ಭಾಗವಾಗಿರುವುದಕ್ಕೆ ಹೆಮ್ಮೆ ಇದೆ ಎಂದು ಹೇಳಿಕೊಂಡರು

ನಟಿ ಸಪ್ತಮಿಗೌಡ ಮಾತನಾಡಿ,ಹಲಗಲಿಯಲ್ಲಿ ಹೊನ್ನಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ, ನೈಜಘಟನೆಯಾಧರಿಸಿದ ಪಾತ್ರವಾಗಿರುವ ಹಿನ್ನೆಲೆಯಲ್ಲಿ ಪಾತ್ರಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದೇನೆ. ನನ್ನ ಪಾತ್ರವೂ ಚೆನ್ನಾಗಿ ಮೂಡಿ ಬರುತ್ತಿದೆ, ಕಾಂತಾರದಿಂದ ಬ್ರೇಕ್ ಸಿಕ್ತು, ಫೈಟು ಮಾಡಿದ್ದೇನೆ. ನಾಯಕಿರಿಗೆ ಕಷ್ಠಕರ, ಆಕ್ಷನ್ ಸನ್ನಿವೇಶ ಮಾಡಲು ಖುಷಿ ಪಡ್ತೇನೆ ಎಂದರು.

ನಿರ್ದೇಶಕ ಸುಕೇಶ್ ನಾಯಕ್ ಮಾತನಾಡಿ ಕೃಷ್ಣತುಳಸಿ ಮೊದಲ ಸಿನಿಮಾ ಅದು ಓಡಲಿಲ್ಲ ಆದರೆ ಸಿನಿಮಾ ಕುರಿತು ಬಂದ ಪ್ರತಿಕ್ರಿಯೆ ಯಿಂದ. ದೊಡ್ಡ ಸಿನಿಮಾ ಮಾಡಲು ಸಹಕಾರಿಯಾಯಿತು. ಹಲಗಲಿ ಚಿತ್ರ ಮಾಡುತ್ತಿದ್ದೇನೆ. ಚಿತ್ರಕ್ಕಾಗಿ ಸಾಕಷ್ಟು ಸಿದ್ದತೆ ಮತ್ತು ತಯಾರಿ ಮಾಡಿಕೊಂಡಿದ್ದೇನೆ ಎಂದರು

ಹಲಗಲಿ ಹೋರಾಟಗಾರರು ಬಳಸುತ್ತಿದ್ದ ಶಸ್ತ್ರಾಸ್ತ್ರಗಳನ್ನು ಇಂದಿಗೂ ಪೂಜಿಸುತ್ತಿದ್ದಾರೆ. ಚಿಕ್ಕದಾಗಿ ಸಿನಿಮಾ ಮಾಡಲು ಉದ್ದೇಶಿದ್ದೆ. ನಿರ್ಮಾಪಕರು ಕಥೆ ಕೇಳಿ ದೊಡ್ಡ ಮಟ್ಟದಲ್ಲಿ ಮಾಡೋಣ ಎಂದು ಪ್ರೋತ್ಸಾಹಿಸಿದರು, ಮತ್ತೆ ಕಥೆ ಮಾಡಿ ಕಮರ್ಷಿಯಲ್ ಆಗಿ ಕಥೆಗೆ ಏನು ಬೇಕೋ ಆಗೆ ಸಿನಿಮಾ ಚಿತ್ರೀಕರಣ ಮಾಡುತ್ತಿದ್ದೇವೆ ಎಂದು ಹೇಳಿದರು

ಈಗಾಗಲೇ ಮೈಸೂರು ಚಿತ್ರೀಕರಣದ ಮಾಡಲಾಗಿದೆ, ನೆಲಮಂಗಲ, ಮಾಗಡಿ ರಸ್ರೆಯಲ್ಲಿ ಸೆಟ್ ಹಾಕಿದ್ದೇವೆ. ಶೇಕಡ 40 ರಷ್ಟು ಚಿತ್ರೀಕರಣ ಮುಗಿದಿದೆ. ಬಾಲ, ಜಡಗ, ಹೊನ್ನಿ, ರಾಮಿ ಸೇರಿದಂತೆ ಇನ್ನಿತರೆ ಕುಟುಂಬಗಳ ಮಾಹಿತಿ ಪಡೆಯಲಾಗಿದೆ. ತಾತ ಮುತ್ತಾತರು ಶಸ್ತ್ರಾಸ್ತ್ರ ತೋರಿಸಿ ಕುಟುಂಬದ ಸಹಕಾರ ನೀಡಿದ್ದಾರೆ ಸೆಪ್ಟೆಂಬರ್‍ನಲ್ಲಿ ಉಳಿದ ಚಿತ್ರೀಕರಣ ಮಾಡಲಾಗುವುದು. ಜಡಗ ಪಾತ್ರಕ್ಕೆ ಡಾಲಿ ಧನಂಜಯ ಸಿದ್ದತೆ ಮಾಡಿಕೊಂಡು ಸಿನಿಮಾ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು

ನಿರ್ಮಾಪಕ ಕಲ್ಯಾಣ್ ಚಕ್ರವರ್ತಿ ಡಿ ಮಾತನಾಡಿ ಉತ್ತರ ಕರ್ನಾಟಕದ ಕಥೆ, ವಾಲ್ಕೀಕಿ, ಬೇಡ ಸಮುದಾಯದ ಕಥೆ. ಮೊದಲು ಕನ್ನಡದಲ್ಲಿ ಸಿನಿಮಾ ಮಾಡಲು ಉದ್ದೇಶಿಸಿದ್ದೆ. ಬೇಡರು ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರ ಮದ್ಯೆ ಹುಟ್ಟಿ ಬೆಳೆದವನು ಹಲಗಲಿ ಮಣ್ಣಿನ ಕಥೆ, 180 ವರ್ಷ ಹಿಂದೆ ಮಾಡಿದ ಕಥೆ ಬೇಡರು ಬೇಟೆಯ ಮೂಡ್ ನಲ್ಲಿ ಇರ್ತಾರೆ. ಕಥೆ ಮಾಡುವುದ ಸವಾಲಿನ ಸಿನಿಮಾ ಮಾಡುವಾಗ ಜವಾಬ್ದಾರಿ ಹೆಚ್ಚಿತ್ತು. ಕಥೆ ಕೇಳಿ ದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡಲು ಉದ್ದೇಶಿಸಲಾಗಿದೆ ಎಂದರು

ಚಿತ್ರವನ್ನು 2 ಭಾಗದಲ್ಲಿ ಮಾಡುತ್ತಿದ್ದೇವೆ. ಮೊದಲ ಭಾಗವನ್ನು ಮುಂದಿನ ವರ್ಷ ದಸರಾ ವೇಳೆಗೆ ತೆರೆಗೆ ತರುವ ಉದ್ದೇಶವಿದ್ದು ಎರಡನೇ ಭಾಗವನ್ನು 2028ರಲ್ಲಿ ತೆರೆಗೆ ತರುವ ಉದ್ದೇಶವಿದೆ. ಬಜೆಟ್ ನೋಡ್ತಾ ಇದ್ದರೆ ನಿದ್ರೆ ಬರ್ತಾ ಇಲ್ಲ ಆದರೂ ಮಣ್ಣಿನ ಕಥೆಯನ್ನು ಅದ್ದೂರಿಯಾಗಿ ತೋರಿಸಲಾಗುತ್ತಿದೆ. ಜನರಿಗೆ ತಲುಪಿದರೆ ಮತ್ತಷ್ಟು ಐತಿಹಾಸಿಕ ಸಿನಿಮಾ ಮಾಡಲು ಸಹಕಾರಿಯಾಗಲಿದೆ ಎಂದರು

ಸಂಗೀತ ನಿರ್ದೇಶಕ ವಾಸುಕಿ ವೈಭವ್ ಮಾತನಾಡಿ ಹಲಗಲಿ ಬೇಡರ ದಂಗೆ ಆಧರಿಸಿದ ಕಥೆ, ಚಿತ್ರದ ಮೊದಲ ಗ್ಲಿಂಪ್ಸ್ ಬಿಡುಗಡೆಯಾಗಿದೆ. 6ಹಾಡು, ಜೊತೆಗೆ ಬಿಟ್ ಇದೆ. ಜನಾಂಗದ ಹಾಡು ಜೊತೆಗೆ ಕಮರ್ಷಿಯಲ್ ಹಾಡುಗಳಿವೆ. ಹಾಡುಗಳನ್ನು ಹೊಸದಾಗಿ ಬರೆಯಲಾಗಿದೆ ಬೇಡರ ಬೊಮ್ಮ ವರ ಆರಾದ್ಯ ದೈವ ಎಂದು ಹೇಳಿದರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin