Another powerhouse, “Zee Power,” arrives in the Kannada television world

ಕನ್ನಡ ಕಿರುತೆರೆಲೋಕಕ್ಕೆ ಮತ್ತೊಂದು ಪವರ್ “ಜೀ ಪವರ್” ಆಗಮನ - CineNewsKannada.com

ಕನ್ನಡ ಕಿರುತೆರೆಲೋಕಕ್ಕೆ ಮತ್ತೊಂದು ಪವರ್ “ಜೀ ಪವರ್” ಆಗಮನ

ಕನ್ನಡದ ಕಿರುತೆರೆ ಲೋಕದಲ್ಲಿ ಧೂಳ್ ಎಬ್ಬಿಸಲು “ಜೀ ಪವರ್” ಆಗಮನಕ್ಕೆ ವೇದಿಕೆ ಸಜ್ಜಾಗಿದೆ. ಆಗಸ್ಟ್ 23 ರಿಂದ ಕನ್ನಡ ನಾಡಿನ ಜನರ ಮನೆ ಮನ ತಲುಪಲು ಹೊಸ ವಿಶ್ವಾಸ ಮತ್ತು ಆತ್ಮ ವಿಶ್ವಾಸದೊಂದಿಗೆ ಪಾದಾರ್ಪಣೆ ಮಾಡುತ್ತಿದೆ.

ದೇಶದ ಅತಿದೊಡ್ಡ ಹಾಗೂ ಜನಪ್ರಿಯ ಮಾಧ್ಯಮ ಸಂಸ್ಥೆಗಳಲ್ಲೊಂದಾದ ಜೀ ಎಂಟಟೈನ್‍ಮೆಂಟ್ ಪ್ರೈವೈಟ್ ಲಿಮಿಟೆಡ್ ಕಳೆದ ಮೂರು ದಶಕಳಿಂದ ಕಿರುತೆರೆ ಲೋಕದಲ್ಲಿ ಹೊಸ ಮನ್ವಂತರವನ್ನೇ ಸೃಷ್ಠಿಸಿದೆ. ಕನ್ನಡದಲ್ಲಿ ಜೀ ಕನ್ನಡ ವಾಹಿನ ಕಳೆದ ಏಳೆಂದು ವರ್ಷದಿಂದ ಕರುನಾಡಿನ ಜನರಿಗೆ ಮನರಂಜನೆಯ ರಸದೌತಣ ಉಣ ಬಡಿಸುತ್ತಿದೆ.

ಇದೀಗ ಮತ್ತಷ್ಟು ಮಂದಿಗೆ, ಪ್ರತಿಭಾನ್ವಿತ್ವರಿಗೆ ವೇದಿಕೆ ಸೃಷ್ಠಿಸುವ ಜೊತೆಗೆ ಹೊಸ ಹೊಸ ಕಾರ್ಯಕ್ರಮಗಳನ್ನು ಜನರ ಮುಂದಿಡಲು ಇದೇ ಆಗಸ್ಟ್ 25ರಿಂದ “ಜೀ ಪವರ್” ಹೊಸ ವಾಹಿನಿಯ ಉದಯವಾಗುತ್ತಿದೆ. ಹೊಸ ವಾಹಿನಿಯನ್ನು ದೊಡ್ಡಮಟ್ಟದಲ್ಲಿ ಜನರ ಮುಂದಿಡಲು ಜೀ ವಾಹಿನಿಯ ತಂಡ ಹಗಲು ಇರಳು ಶ್ರಮಿಸಿದೆ.

ಹೊಸ ವಾಹಿನಿ ಆರಂಭದ ಬಗ್ಗೆ ಮಾಹಿತಿ ಹಂಚಿಕೊಂಡ ಜೀಲ್‍ನ ದಕ್ಷಿಣ ಮತ್ತು ಪಶ್ವಿಮ ವಿಭಾಗದ ಕ್ಲಸ್ಟರ್ ಹೆಡ್ ಸಿಜು ಪ್ರಭಾಕರನ್, ಜೀ ಪವರ್ ಕರ್ನಾಟಕದಲ್ಲಿ ಹೊಸ ಪಯಣ ಆರಂಭಿಸುತ್ತಿದೆ. ಜೀ ಕನ್ನಡಕ್ಕೆ ನೀಡಿದ ಸಹಕಾರ ಮತ್ತು ಪ್ರೋತ್ಸಾಹವನ್ನು ಹೊಸ ವಾಹಿನಿಗೂ ನೀಡಿಮ ಪ್ರೇಕ್ಷಕರ ಅಭಿರುಚಿಯನ್ನು ಅರ್ಥ ಮಾಡಿಕೊಂಡು ಎಲ್ಲ ಸಮುದಾಯವದ ಮಂದಿಗೆ ತಲುಪುವ ಕಾರ್ಯಕ್ರಮ ನೀಡುವುದು ನಮ್ಮ ಉದ್ದೇಶ ಎಂದು ಹೇಳಿದರು

ಜೀ ಪವರ್ ಬಿಸಿನೆಸ್ ಹೆಡ್ ಭಾಸ್ಕರ್ ಅಯ್ಯರ್ ಮಾತನಾಡಿ ಎಲ್ಲಾ ವರ್ಗದ ಜನರನ್ನು ಆಕರ್ಷಣೆ ಮಾಡುವ ಉದ್ದೇಶದಿಂದ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಜೀ ಪವರ್ ಆರಂಭದ ಹಿನ್ನೆಲೆಯಲ್ಲಿ ನಾಲ್ಕು ಹೊಸ ಧಾರಾವಾಹಿ ಆರಂಭ ಮಾಡುತ್ತಿದ್ದೇವೆ. ಜೀ ಕನ್ನಡದ ಪ್ರೇಕ್ಷಕರನ್ನು ಉಳಿಸಿಕೊಂಡು ಹೊಸ ಪ್ರೇಕ್ಷಕರನ್ನು ಸೆಳೆಯುವ ಉದ್ದೇಶ ನಮ್ಮದು ಎಂದು ಮಾಹಿತಿ ನೀಡಿದರು

ಜೀ ವಾಹಿನಿಯ ಮತ್ತೊಬ್ಬ ಆಧಾರ ಸ್ತಂಭಗಳಲ್ಲಿ ಒಬ್ಬರಾದ ಸುಧೀಂದ್ರ ಭಾರದ್ವಜ್ ಮಾತನಾಡಿ, ಜೀ ಪವರ್ ವಾಹಿನಿ ಆರಂಭದ ಹಿನ್ನೆಲೆಯಲ್ಲಿ ರಾಜಕುಮಾರಿ, ಶುಭಸ್ಯ ಶೀಘ್ರಂ, ಜೋಡಿ ಹಕ್ಕಿ ಮತ್ತು ಗೌರಿ ಧಾರಾವಾಹಿಗಳು ಆರಂಭವಾಗುತ್ತಿದ್ದು ಈ ಎಲ್ಲಾ ಧಾರಾವಾಹಿಗಳು ಆಗಸ್ಟ್ 25ರಿಂದ ಪ್ರಸಾರ ಆಗಲಿವೆ, ಇದರ ಜೊತೆಗೆ ಹಳ್ಳಿ ಪವರ್ ಮತ್ತು ಭಕ್ತಿ ಕಾರ್ಯಕ್ರಮಗಳೂ ಪ್ರಸಾರವಾಗುತ್ತಿವೆ ಪ್ರತಿದಿನ ಬೆಳಗ್ಗೆ 7.30 ರಿಂದ 9 ಗಂಟೆಯ ತನಕ ಜ್ಯೋತಿಷಿ ಗೋಪಾಲಕೃಷ್ಣ ಶರ್ಮಾ ಅವರು ಜ್ಯೋತಿಷ್ಯ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದರು

ಸಂಜೆ 7 ಗಂಟೆಗೆ “ರಾಜಕುಮಾರಿ” ಧಾರಾವಾಹಿ ಪ್ರಸಾರ ಆಗಲಿದೆ, ಸಿಹಿ ತಿಂಡಿ ಮಾರುವ ಹುಡುಗಿ ದೊಡ್ಡ ಸಿಹಿ ಅಂಗಡಿ ಇಡುವ ಕನಸು ಕಂಡವಳು. ಈ ಧಾರಾವಾಹಿಯ ಮೂಲಕ ಮಹಾನಟಿ ಶೋನಲ್ಲಿ ಗಮನ ಸೆಳೆದ ಗಗನ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಸಂಬಂಧಗಳನ್ನೇ ಸರ್ವಸ್ವ ಅಂದುಕೊಂಡ ತಂಗಿ, ಸಂಬಂಧಕ್ಕೆ ಬೆಲೇಯೇ ಕೊಡದ ಅಕ್ಕ. ತಂಗಿ ಹೇಗೆಲ್ಲಾ ಕಷ್ಟಗಳನ್ನು ನಗುತ್ತಲೇ ಎದುರಿಸುತ್ತಾಳೆ ಎನ್ನುವ ಕಥಾಹಂದರ ಹೊಂದಿರುವ “ಗೌರಿ’ ಪ್ರತಿನಿತ್ಯ ಸಂಜೆ 7.30ಕ್ಕೆ ಪ್ರಸಾರವಾಗಲಿದೆ.

ಶಿಕ್ಷಣವೇ ಸರ್ವಸ್ವ ಎಂದುಕೊಂಡಿರುವ ಅಕ್ಷರಾ ಮತ್ತು ಹಣವೇ ಎಲ್ಲವೂ ಎಂದುಕೊಂಡಿರುವ ಗ್ರಾಮದ ಮುಖ್ಯಸ್ಥೆ ಭುವನೇಶ್ವರಿ ನಡುವಿನ ಸೈದ್ಧಾಂತಿಕ ಸಂಘರ್ಷದ ಕಥೆಯ “ಜೋಡಿ ಹಕ್ಕಿ” ರಾತ್ರಿ 8 ಗಂಟೆಯಿಂದ ಪ್ರಸಾರವಾಗಲಿದೆ.

ತನ್ನ ನಾಲ್ವರು ಹೆಣ್ಣುಮಕ್ಕಳು ಉತ್ತಮ ಮನೆಗೆ ಸೊಸೆಯಾಗಿ ಹೋಗಲಿ ಎಂದು ಬಯಸುವ ತಾಯಿ ಕುರಿತಾದ ಕೌಟಂಬಿಕ ಕಥಾ ಹಂದರ ಹೊಂದಿರುವ “ಶುಭಸ್ಯ ಶೀಘ್ರಂ’ ರಾತ್ರಿ 8.30ಕ್ಕೆ ಜನರ ಮುಂದೆ ಬರಲಿದೆ.

ರಾತ್ರಿ 9 ರಿಂದ 10 ಗಂಟೆಯ ತನಕ ನಿರೂಪಕ ಅಕುಲ್ ಬಾಲಾಜಿ ನಡೆಸಿಕೊಡುವ “ಹಳ್ಳಿ ಪವರ್” ರಿಯಾಲಿಟಿ ಶೋ ಪ್ರಸಾರವಾಗಲಿದ್ದು ನಗರದ ಹುಡುಗಿಯರು ಹಳ್ಳಿಯ ಜೀವನ ಹೇಗೆ ನಡೆಸಲಿದ್ದಾರೆ ಎನ್ನುವ ತಿರುಳು ಹೊಂದಿರುವ ಕಥೆ.
ಇದರ ಜೊತೆಗೆ ಇನ್ನೂ ಹೊಸ ಹೊಸ ಕಾರ್ಯಕ್ರಗಳನ್ನು ಜನರ ಮುಂದಿಡುವುದಾಗಿ ಜೀ ವಾಹಿನಿ ವಿವಿಧ ವಿಭಾಗಗಳ ಮುಖ್ಯಸ್ಥರು ಮಾಹಿತಿ ಹಂಚಿಕೊಂಡರು.

ಈ ವೇಳೆ ದೀಪಕ್ ಶ್ರೀರಾಮುಲು, ಹೊಸ ಧಾರಾವಾಹಿಯ ನಿರ್ಮಾಪಕರು, ನಿರ್ದೇಶಕರುಮ ನಟ, ನಟಿಯರು ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಂಡರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin