Andondithu Kaala" movie to release on August 29th

ಆಗಸ್ಟ್ 29ರಂದು “ಅಂದೊಂದಿತ್ತು ಕಾಲ” ಸಿನಿಮಾ ಬಿಡುಗಡೆ - CineNewsKannada.com

ಆಗಸ್ಟ್ 29ರಂದು “ಅಂದೊಂದಿತ್ತು ಕಾಲ” ಸಿನಿಮಾ ಬಿಡುಗಡೆ

ಚಂದನವನದಲ್ಲಿ ಸಿನಿಮಾಗಳ ರಂಗು ಕಳೆಕಟ್ಟಿದೆ .ಇತ್ತೀಚೆಗೆ ಬಿಡುಗಡೆಯಾದ ಬಹುತೇಕ ಚಿತ್ರಗಳು ಪ್ರೇಕ್ಷಕರ ಮನಸ್ಸು ಗೆದ್ದು ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕಂಟೆಂಟ್ ಇರುವ ಚಿತ್ರಗಳನ್ನು ಪ್ರೇಕ್ಷಕರು ಒಪ್ಪಿಕೊಂಡು ಅಪ್ಪಿಕೊಂಡಿದ್ದಾರೆ. ಇದೇ ಹುರುಪಿನಲ್ಲಿ 90ರ ಕಾಲಘಟ್ಟದ ಮನಸೆಳೆಯುವ ಪ್ರೇಮಕಥೆ “ಅಂದೊಂದಿತ್ತು ಕಾಲ” ಆಗಸ್ಟ್ 29ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಭುವನ್ ಸುರೇಶ್ ನಿರ್ಮಾಣದಚಿತ್ರಕ್ಕೆ ಕಥೆ , ಚಿತ್ರಕಥೆ ಬರೆದು ನಿರ್ದೇಶಕ ಮಾಡಿದ್ದಾರೆ ಯುವ ಸಾರಥಿ ಕೀರ್ತಿ ಕೃಷ್ಣ. ಈಗಾಗಲೇ ಬಿಡುಗಡೆಯಾಗಿರುವ ಪ್ರತಿಗೊಂದು ಹಾಡು ವಿಭಿನ್ನವಾಗಿ ಮೂಡಿ ಬಂದಿದ್ದು , ರಾಘವೇಂದ್ರ. ವಿ ಸಂಗೀತದಲ್ಲಿ ಹಾಡುಗಳು ಸಿನಿಪ್ರಿಯ ಮನಸ್ಸನ್ನು ಸೆಳೆದಿದೆ. ಅದರಲ್ಲೂ ವಿಶೇಷವಾಗಿ ಧನಂಜಯ್ ರಂಜನ್ ಸಾಹಿತ್ಯದಲ್ಲಿ ಗಾಯಕ ಸಿದ್ಧ ಶ್ರೀರಾಮ್ ದ್ವನಿಯಲ್ಲಿ ಮೂಡಿಬಂದ’ ಮುಂಗಾರು ಮಳೆಯಲ್ಲಿ… ತಂದಲೇ ನೀನಿಲ್ಲಿ… ಪ್ರೀತಿಯ ಮುನ್ಸೂಚನೆ…’ ಹಾಡು ಕೇಳುಗರ ಮನವನ್ನು ಗೆದ್ದಿದೆ. ಈ ಹಾಡು ಚಿತ್ರ ಪ್ರೇಮಿಗಳನ್ನು ಸಿನಿಮಾ ಮಂದಿರಕ್ಕೆ ಕರೆತರುವ ಮೊದಲ ಆಮಂತ್ರಣವಾಗಿ ಭರ್ಜರಿ ಸದ್ದು ಮಾಡುತ್ತಿದೆ.

ಚಿತ್ರದ ಟೀಸರ್ ಹಾಗೂ ಟ್ರೇಲರ್ ಕೂಡ ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿದ್ದು ಚಿತ್ರ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. `ಅಂದೊಂದಿತ್ತು ಕಾಲ’ ಚಿತ್ರದಲ್ಲಿ ನಟ ವಿನಯ್ ರಾಜ್‍ಕುಮಾರ್ ಎರಡು ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದರಂತೆ, ಈ ಚಿತ್ರ ವಿನಯ್ ಸಿನಿ ಪಯಣದ ವಿಭಿನ್ನ ಚಿತ್ರವಾಗಿ ಹೊರಬರಲಿದೆ ಚಿತ್ರ ತಂಡದ ಅನಿಸಿಕೆ.

ನಿರ್ದೇಶಕನ ಜೀವನದ ಕಥೆ.ಚಿತ್ರದ ನಿರ್ದೇಶಕ ಕೀರ್ತಿ ಜೀವನದಲ್ಲಿ ಅನುಭವಿಸಿದ ಘಟನೆಗಳು, ಅವರ ಸ್ನೇಹಿತರ ಅನುಭವಗಳನ್ನು ಸೇರಿಸಿ ಒಂದೊಳ್ಳೆಯ ಕಥೆ ಹೇಳಿದ್ದಾರೆ. ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ನನಗಿದೆ ಎಂದಿದ್ದಾರೆ.

ನಟಿ ಅದಿತಿ ಪ್ರಭುದೇವ ಪ್ರತಿಕ್ರಿಯಿಸಿ ಚಿತ್ರದ ಟೈಟಲ್ಲಿ ಬಹಳ ಸೊಗಸಾಗಿದೆ. ನಿರ್ದೇಶಕ ಕೀರ್ತಿ ಮತ್ತು ನಿರ್ಮಾಪಕ ಸುರೇಶ್ ಸುಂದರವಾದ ಪಾತ್ರ ಕೊಟ್ಟಿದ್ದಾರೆ.ಚಿತ್ರದಲ್ಲಿ ನನಗೆ ಕಣ್ಣಲ್ಲೇ ಮಾತಾಡುವ ಪಾತ್ರವಿದೆ. ವಿನಯ್ ಜೊತೆಗೆ ಬಹಳ ಖುಷಿಯಿಂದ ಕೆಲಸ ಮಾಡಿದ್ದೇನೆ. ಸಂಗೀತ ನಿರ್ದೇಶಕ ರಾಘವೇಂದ್ರ ಬಹಳ ಒಳ್ಳೆಯ ಹಾಡುಗಳನ್ನು ಕೊಟ್ಟಿದ್ದಾರೆ. ಖಂಡಿತವಾಗಿ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ ನೋಡಿ ಎಂದಿದ್ದಾರೆ.

ಕಿರುತೆರೆ ನಟಿ ನಿಶಾ ರವಿಕೃಷ್ಣನ್ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ ಪ್ರಮುಖ ಅತಿಥಿ ಪಾತ್ರ ಒಂದರಲ್ಲಿ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅಭಿನಯಿಸಿರುವುದು ವಿಶೇಷ. ಚಿತ್ರದಲ್ಲಿ ಅರುಣಾ ಬಾಲರಾಜ್ , ಜಗಪ್ಪ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ

ಸುಂದರ ಪ್ರೇಮಮಯ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ್ದಾರೆ ನಿರ್ಮಾಪಕ ಭುವನ್ ಸುರೇಶ್. ಇದಕ್ಕೆ ಪೂರಕವಾಗಿ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಕೀರ್ತಿ ಕೃಷ ಒಂದಷ್ಟು ನೈಜ ಘಟನೆಗಳ ಸುತ್ತ ಮನೋರಂಜನೆಯ ಅಂಶಗಳೊಂದಿಗೆ ಈ ಚಿತ್ರವನ್ನು ತೆರೆ ಮೇಲೆ ತರುತ್ತಿದ್ದಾರೆ.

ಬೆಂಗಳೂರು, ತೀರ್ಥಹಳ್ಳಿ ಮುಂತಾದ ಕಡೆ ಚಿತ್ರದ ಚಿತ್ರೀಕರಣ ಮಾಡಿದ್ದು , ಅಷ್ಟೇ ಅದ್ಭುತವಾಗಿ ತಮ್ಮ ಕ್ಯಾಮೆರಾ ಕೈಚಳಕದ ಮೂಲಕ ಅಭಿಷೇಕ್ ಕಾಸರಗೋಡು ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆಯಂತೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ವಿ. ರಾಘವೇಂದ್ರ ಸಂಗೀತ ನೀಡಿದ್ದಾರೆ. ಎ ಆರ್ ಕೃಷ್ಣ , ಸುರೇಶ್ ಆರ್ಮುಗಂ ಸಂಕಲನ ಮಾಡಿದ್ದು , ರವಿವರ್ಮ ಸಾಹಸ , ರಘು ಆರ್ ಜೆ ನೃತ್ಯ ನಿರ್ದೇಶನ , ಸಿನಿಮಾ ಪ್ರಚಾರಕರ್ತ ಸುಮಂತ್ , ಕ್ರಿಯೇಟಿವ್ ನಿರ್ಮಾಪಕರಾಗಿ ಶಿವು ಗೌಡ ಹಾಗೂ ಎಕ್ಸಿಕ್ಯೂಟಿವ್ ಪೆÇ್ರಡ್ಯೂಸರ್ ಆಗಿ ಲೊಕೇಶ್ ಎನ್ ಚಿತ್ರದ ಜವಾಬ್ದಾರಿ ನಿಭಾಯಿಸಿದ್ದಾರೆ. ಎಲ್ಲಾ ಅಂದುಕೊಂಡಂತೆ ಚಿತ್ರ ಮೂಡಿ ಬಂದಿದ್ದು , ಈಗಾಗಲೇ ಅದ್ದೂರಿ ಪ್ರಚಾರದ ಮೂಲಕ ಎಲ್ಲರ ಗಮನವನ್ನು ಸೆಳೆದಿರುವ ಚಿತ್ರ ಅದ್ದೂರಿಯಾಗಿ ಬೆಳ್ಳಿ ಪರದೆಯ ಮೇಲೆ ಇದೇ ಆಗಸ್ಟ್ 29ರಂದು ತೆರೆಗೆ ಬರಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin