Anushka Shetty's "Ghaati" to hit the screens on September 5

ಸೆಪ್ಟಂಬರ್ 5ಕ್ಕೆ ಅನುಷ್ಕಾ ಶೆಟ್ಟಿ ಅಭಿನಯದ “ಘಾಟಿ” ಚಿತ್ರ ತೆರೆಗೆ - CineNewsKannada.com

ಸೆಪ್ಟಂಬರ್ 5ಕ್ಕೆ ಅನುಷ್ಕಾ ಶೆಟ್ಟಿ ಅಭಿನಯದ “ಘಾಟಿ” ಚಿತ್ರ ತೆರೆಗೆ

ಕೊತ್ತಲವಾಡಿ ಚಿತ್ರದ ಮೂಲಕ ನಿರ್ಮಾಪಕರಾದ ನಟ ಯಶ್ ಅವರ ತಾಯಿ ಪುಷ್ಪ ಇದೀಗ ತೆಲುಗಿನ “ಘಾಟಿ” ಚಿತ್ರದ ಮೂಲಕ ವಿತರಕರಾಗದ್ದಾರೆ. ಕ್ರಿಶ್ ನಿರ್ದೇಶನದ ಹಾಗೂ ಕನ್ನಡದ ನಟಿ ಅನುಷ್ಕ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ “ಘಾಟಿ” ಚಿತ್ರ ಸೆಪ್ಟೆಂಬರ್ 5 ರಂದು ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

ಕರ್ನಾಟಕದಲ್ಲಿ ಚಿತ್ರದ ವಿತರಣೆಯ ಹಕ್ಕನ್ನು ನಿರ್ಮಾಪಕಿ ಪುಷ್ಪ ಅರುಣ್ ಕುಮಾರ್ (ನಟ ರಾಕಿಂಗ್ ಸ್ಟಾರ್ ಯಶ್ ತಾಯಿ) ಪಡೆದುಕೊಂಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ದೇಶಕ ಕ್ರಿಶ್, ನಾಯಕ ವಿಕ್ರಮ್ ಪ್ರಭು ಹಾಗೂ ವಿತರಕಿ ಪುಷ್ಪ ಅರುಣ್ ಕುಮಾರ್ ಭಾಗಿಯಾಗಿದ್ದರು.

ಪುಷ್ಪ ಅರುಣ್ ಕುಮಾರ್ ಮಾತನಾಡಿ ನಾಯಕಿ ಅನುಷ್ಕಾ ಶೆಟ್ಟಿ ನಮ್ಮ ಕನ್ನಡದ ಹೆಣ್ಣು ಮಗಳು. ಅವರು ನಟಿಸಿರುವ ಚಿತ್ರವನ್ನು ಮೊದಲ ಚಿತ್ರವಾಗಿ ವಿತರಣೆ ಮಾಡುತ್ತಿರುವುದು ಖುಷಿಯಾಗಿದೆ. ಮುಂದಿನ ದಿನಗಳಲ್ಲಿ ಚಿತ್ರದ ಕನ್ನಡ ವರ್ಷನ್ ಸಹ ಬಿಡುಗಡೆಯಾಗುತ್ತಿದ್ದು, ಅದರ ವಿತರಣೆಯನ್ನು ನಾವೇ ಮಾಡುವ ಮಾತುಕತೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳ ಚಿತ್ರಗಳನ್ನು ನಮ್ಮ ಸಂಸ್ಥೆಯ ಮೂಲಕ ವಿತರಣೆ ಮಾಡುತ್ತೇವೆ ಎಂದರು

ನಿರ್ದೇಶಕ ಕ್ರಿಶ್ ಮಾತನಾಡಿ ಆಂಧ್ರ ಪ್ರದೇಶ ಮತ್ತು ಒರಿಸ್ಸಾದ ಗಡಿ ಪ್ರದೇಶದಲ್ಲಿ ನಡೆಯುವ ಕಥೆ ಇದು. ಅಲ್ಲಿನ ಘಟ್ಟದ ಪ್ರದೇಶದಲ್ಲಿ ವಾಸಿಸುತ್ತಿರುವವರಿಗೆ ಘಾಟಿ ಎಂದು ಕರೆಯಲಾಗುತ್ತದೆ. ವಿಶೇಷತೆಯೆಂದರೆ, ಒಬ್ಬೊಬ್ಬ ಘಾಟಿ 120 ರಿಂದ 150 ಕೆಜಿ ತೂಕ ಎತ್ತಿಕೊಂಡು ಬೆಟ್ಟ ಹತ್ತುತ್ತಾರೆ. ಅವರನ್ನು ಗಾಂಜಾ ಸಾಗಿಸುವುದಕ್ಕೆ ಬಳಸಿಕೊಳ್ಳಲಾಗುತ್ತದೆ. ಅವರ ಕಥೆಯನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು

ನಾಯಕ ವಿಕ್ರಮ್ ಪ್ರಭು ಮಾತನಾಡಿ ಪುನೀತ್ ರಾಜಕುಮಾರ್ ಅವರನ್ನು ಬಹಳ ನೆನಪಿಸಿಕೊಂಡರು ನಿರ್ದೇಶಕ ಕ್ರೀಶ್ ಅವರು ಹೇಳಿದ ಈ ಚಿತ್ರದ ಕಥೆ ಬಹಳ ಇಷ್ಟವಾಯಿತು. ಅ ದೇಸಿ ರಾಜು ಎಂಬ ಪಾತ್ರದಲ್ಲಿ ಅಭಿನಯಿಸಿದ್ದೇನೆ ಎಂದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin