“ಕುಂಭ ಸಂಭವ” ಚಿತ್ರದ ಟೀಸರ್ ಬಿಡುಗಡೆ
“ಭೀಮ” ಚಿತ್ರದ ಗಿರಿಜಾ ಪಾತ್ರದ ಮೂಲಕ ಗಮನ ಸೆಳೆದಿದ್ದ ನಟಿ ಪ್ರಿಯಾ, ಇದೀಗ “ಕುಂಭಸಂಭವ” ಚಿತ್ರದ ಮೂಲಕ ಮತ್ತೊಮ್ಮೆ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.

ಟಿ.ಎನ್.ನಾಗೇಶ್ ನಿರ್ದೇಶನವಿದ್ದುಪರಿಪೂರ್ಣ ಸನಾತನ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಸಂಸ್ಥಾಪಕ ಗುರೂಜಿ ಡಾ. ಶ್ರೀ ಎ. ವಿ. ಶ್ರೀನಿವಾಸನ್ ಟೀಸರ್ ಬಿಡುಗಡೆ ಮಾಡಿ ಶುಭ ಹಾರೈಸಿದರು
ನಾಗ ನಾಯ್ಕ , ನರೇಶ್ ಕುಮಾರ್, ತಾರಾ.ಆರ್, ಸುನಂದ ಹಾಗು ಪುರುಷೋತ್ತಮ ನಿರ್ಮಿಸುತ್ತಿರುವ ಚಿತ್ರ ಮಂಡ್ಯ ಬಳಿ ನಡೆದ ನೈಜಘಟನೆ ಆಧರಿಸಿದ ಕಥಾಹಂದರ ಹೊಂದಿದೆ. ಯಾರು ಕೂಡ ಹೆಣ್ಣು ಭ್ರೂಣ ಹತ್ಯೆ ಮಾಡಬೇಡಿ ಎಂಬ ಉತ್ತಮ ಸಂದೇಶವನ್ನು ಚಿತ್ರದ ಮೂಲಕ ನೀಡಲಾಗಿದ್ದಯ ಚಿತ್ರೀಕರಣ ಮುಕ್ತಾಯವಾಗಿದೆ.
ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ಟಿ,ಎನ್ ನಾಗೇಶ್, ಪೋಸ್ಟ್ ಪ್ರೊಡಕ್ಷನ್ಸ್ ವರ್ಕ್ ನಡೆಯತ್ತಿದೆ. ಅಕ್ಟೋಬರ್ ನಲ್ಲೇ ಚಿತ್ರ ತೆರೆಗೆ ತರುವ ಯೋಜನೆ ಇದೆ. ಕನ್ನಡದ ಸಾಕಷ್ಟು ಅನುಭವಿ ಹಾಗೂ ಹಿರಿಯ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಮುಹೂರ್ತದ ದಿನ ಕೂಡ ಶ್ರೀನಿವಾಸನ್ ಗುರೂಜಿ ಹಾರೈಸಿದ್ದರು. ಟೀಸರ್ ಬಿಡುಗಡೆ ಮಾಡಿಕೊಟ್ಟಿರುವುದು ಬಹಳ ಖುಷಿಯಾಗಿದೆ ಎಂದರು

ನಟಿ ಪ್ರಿಯ ಮಾತನಾಡಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಥಾಹಂದರವಿರುವ ಚಿತ್ರದಲ್ಲಿ ಅಭಿನಯಿಸಿರುವುದು ಬಹಳ ಖುಷಿಯಾಗಿದೆ. ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಜಾನಕಿ ನನ್ನ ಪಾತ್ರದ ಹೆಸರು ಎಂದರು
ಚಿತ್ರದ ನಿರ್ಮಾಪಕರಾದ ನಾಗಾ ನಾಯ್ಕ, ಪುರುಷೋತ್ತಮ, ಚಿತ್ರದಲ್ಲಿ ನಟಿಸಿರುವ ಶೋಭಿತ, ಮಧುಶ್ರೀ, ಆದಿದೇವ್ ಶಂಕರ್ ಅಶ್ವಥ್, ಅರ್ಜುನ್ ದೇವ್, ಕೋಟೆ ಪ್ರಭಾಕರ್, ವಿಜಯ್ ಚೆಂಡೂರ್, ಕಮಲ್, ಮುಬಾರಕ್, ಛಾಯಾಗ್ರಾಹಕ ಸಿದ್ದರಾಜು, ಸಂಕಲನಕಾರ ಆಕಾಶ್ ಮಹೇಂದ್ರಕರ್ ಹಾಗೂ ಕಾರ್ಯಕಾರಿ ನಿರ್ಮಾಪಕರಾದ ನಿಂಗರಾಜು ಮತ್ತು ವಲ್ಲಿ ಮುಂತಾದವರು ಮಾಹಿತಿ ಹಂಚಿಕೊಂಡರು.

