The teaser of the film “Time Pass” has been praised by many.

“ಟೈಮ್ ಪಾಸ್” ಚಿತ್ರದ ಟೀಸರ್ ಗೆ ಬಾರಿ ಮೆಚ್ಚುಗೆ - CineNewsKannada.com

“ಟೈಮ್ ಪಾಸ್” ಚಿತ್ರದ ಟೀಸರ್ ಗೆ ಬಾರಿ ಮೆಚ್ಚುಗೆ

ಚೇತನ್ ಜೋಡಿದಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ `ಟೈಮ್ ಪಾಸ್’ ಫಸ್ಟ್ ಲುಕ್ ಪೆÇೀಸ್ಟರ್ ಮೂಲಕ ಗಮನ ಸೆಳೆದಿತ್ತು, ಇದೀಗ ಟೀಸರ್ ಮೂಲಕ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಈ ನಡುವೆ ರಾಜ್ಯಾದ್ಯಂತ ಅಕ್ಟೋಬರ್ 17ರಂದು ಚಿತ್ರ ತೆರೆಗೆ ಬರಲಿದೆ

ಈ ಟೀಸರ್‍ನಲ್ಲಿ ಸಮಾಜಕ್ಕೆ ಕನ್ನಡಿ ಹಿಡಿದ ಕಥೆಯೊಂದರ ಸುಳಿವು ಗೋಚರವಾಗುತ್ತವೆ. ಮನೋರಂಜನೆಯನ್ನೇ ಪ್ರಧಾನವಾಗಿಟ್ಟುಕೊಂಡು ಸಿನಿಮಾ ಮಾಡಲಾಗಿದೆ

ಚೇತನ್ ಜೋಡಿದಾರ್ ನಿರ್ದೇಶನದ ಚೊಚ್ಚಲ ಸಿನಿಮಾ. ಈವರೆಗೂ ಯಾವ ನಿರ್ದೇಶಕರ ಬಳಿಯೂ ಕೆಲಸ ಮಾಡಿದ ಅನುಭವ ಇಲ್ಲದಿದ್ದರೂ ಕೂಡಾ, ಸಿನಿಮಾ ಪ್ರೇಮದಿಂದ ಎಲ್ಲವನ್ನೂ ಸ್ವತಃ ಕಲಿತುಕೊಂಡು ಚೇತನ್ ಜೋಡಿದಾರ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ

ಸರೆಗಮ ಕನ್ನಡ ಸಂಸ್ಥೆ ಟೈಮ್ ಪಾಸ್ ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ. ಯೂ ಯೂಟ್ಯೂಬ್ ಚಾನೆಲ್ಲಿನಲ್ಲಿ ಹಾಡುಗಳು ಬಿಡುಗಡೆಗೊಂಡಿವೆ. ಡಾರ್ಕ್ ಹ್ಯೂಮರ್ ಜಾನರಿಗೆ ಸೇರಿಕೊಳ್ಳುವ ಚಿತ್ರವನ್ನು ಗುಂಡೂರು ಶೇಖರ್, ಕಿರಣ್ ಕುಮಾರ್ ಶೆಟ್ಟಿ ಎಂ.ಹೆಚ್ ಕೃಷ್ಣಮೂರ್ತಿ ನಿರ್ಮಾಣ ಮಾಡಿದ್ದಾರೆ.

ಇಮ್ರಾನ್ ಪಾಷಾ, ವೈಸಿರಿ ಕೆ ಗೌಡ, ರತ್ಷಾರಾಮ್, ಕೆ. ಚೇತನ್ ಜೋಡಿದಾರ್, ಓಂ ಶ್ರೀ ಯಕ್ಷಶಿಫ್, ಪ್ರಭಾಕರ್ ರಾವ್, ನವೀನ್ ಕುಮಾರ್, ಸಂಪತ್ ಕುಮಾರ್, ಅಶ್ವಿನಿ ಶ್ರೀನಿವಾಸ್ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಗಿರೀಶ್ ಗೌಡ ಸಾಹಸ ನಿರ್ದೇಶನ, ವೈಷ್ಣವಿ ಸತ್ಯನಾರಾಯಣ್ ನೃತ್ಯ ನಿರ್ದೇಶನ, ರಾಜೀವ್ ಗಣೇಶ್ ಛಾಯಾಗ್ರಹಣ, ಮಣಿ ಪ್ರಚಾರ ಕಲೆ, ಡಿ. ಶಾಮಸುಂದರ್, ಬಿ.ಕೆ ದಯಾನಂದ ನಿರ್ಮಾಣ ನಿರ್ವಹಣೆ, ಹರಿ ಪರಮ್ ಸಂಕಲನ, ಡಿ.ಎಂ ಉದಯ ಕುಮಾರ್ (ಡಿಕೆ) ಸಂಗೀತ ನಿರ್ದೇಶನ ಚಿತ್ರಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin