Review: ಅಪ್ಪ-ಮಗನ ಬಾಂಧವ್ಯದ ಮನ ಮಿಡಿಯುವ ಕಥನ ” ಸನ್ ಆಫ್ ಮುತ್ತಣ್ಣ”
ಚಿತ್ರ ; ಸನ್ ಆಫ್ ಮುತ್ತಣ್ಣ
ನಿರ್ದೇಶನ : ಶ್ರೀಕಾಂತ್ ಹುಣಸೂರು
ತಾರಾಗಣ: ಪ್ರಣಮ್ ದೇವರಾಜ್, ಖುಷಿರವಿ , ರಂಗಾಯಣ ರಘು, ಗಿರೀಶ್ ಶಿವಣ್ಣ, ಸುಚೇಂದ್ರ ಪ್ರಸಾದ್, ಸುಧಾ ಬೆಳವಾಡಿ ಮತ್ತಿತರರು
ರೇಟಿಂಗ್ : * 3/5
ಶಿವು,ಜೀವನದಲ್ಲಿ ಕೆಲವು ಸಲ ಹೆಜ್ಜೆಗಳನ್ನು ಒಂಟಿಯಾಗಿ ಇಡಬೇಕಾಗುತ್ತೆ ..ಎಂದು ಅಪ್ಪ ಹೇಳಿದ್ದ ಮಾತು..
ಅಪ್ಪ ಮೋಸ್ಟ್ ಪವರ್ ಫುಲ್ ವೆಪನ್ ಇನ್ ಮೈ ಲೈಫ್ .. ಅಂತಾ ಟೀ ಕಪ್ ಹಿಡಿಡುಕೊಂಡು ಆತ ಹೇಳ್ತಾನೆ.
ವ್ಯಕ್ತಿಗಳಾಗಲಿ, ವಸ್ತುಗಳು ಜೊತೆಯಲ್ಲಿದಾಗ ಅದರ ಬೆಲೆ ಗೊತ್ತಾಗಲ್ಲ. ದೂರವಾದಾಗ ಬೆಲೆ ಗೊತ್ತಾಗೋದು. ಎನ್ನುವ ಸಾರ್ವಕಾಲಿಕ ಸತ್ಯದ ಅನಾವರಣ.
ಅಪ್ಪ- ಮಗನ ಬಾಂಧವ್ಯ ಕುರಿತ ಚಿತ್ರ ಮನಮಿಡಿಯುವ ಕಥೆಯನ್ನು ಮುಂದಿಟ್ಡುಕೊಂಡು ತೆರೆಗೆ ತಂದಿರುವ ಚಿತ್ರ ” ಸನ್ ಆಫ್ ಮುತ್ತಣ್ಣ”… ಸಂಭಾಷಣೆ , ಸನ್ನಿವೇಶಗಳು ಅಪ್ಪ- ಮಗನ ಕಥೆ ಎನ್ನುವುದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ.
ಅಪ್ಪ- ಮಗ, ಅಪ್ಪ- ಮಗಳ ಬಾಂಧವ್ಯ , ಸೆಂಟಿಮೆಂಟ್, ಪ್ರೀತಿ, ಪ್ರೇಮದ ಕಥೆಯನ್ನು ಮುಂದಿಟ್ಟುಕೊಂಡು ನಿರ್ದೇಶಕ ಶ್ರೀಕಾಂತ್ ಹುಣಸೂರು ಚಿತ್ರವನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ.
ಚಿತ್ರದ ಮೊದಲರ್ದ ಲವಲವಿಕೆ, ಅಪ್ಪ- ಮಗನ ಸುತ್ತ ಕಥೆ ಸಾಗಿದೆ. ದ್ವಿತೀಯಾರ್ಧದಲ್ಲಿ ಚಿತ್ರದ ಕಥೆಯ ವೇಗ ಮತ್ತೊಂದು ಮಗ್ಗಲು ಪಡೆದುಕೊಂಡಿದ್ದು ತೀವ್ರ ಕುತೂಹಲ ಕಾಪಾಡಿಕೊಂಡೇ ಕೊನೆಯಲ್ಲಿ ಕಣ್ಣಂಚಿನಲ್ಲಿ ನೀರು ತರಿಸುತ್ತದೆ. ಅಪ್ಪ- ಮಗನ ಕಥಾನಕ ಕರುಳು ಹಿಂಡುತ್ತದೆ.
ಅಪ್ಪ- ಮಗನ ಸಂಬಂಧ ಬರೀ ರಕ್ತ ಸಂಬಂದಿಂದ ಅಷ್ಟೇ ಬರುವುದಿಲ್ಲ ರಸ್ತೆಯಲ್ಲಿ ಸಿಕ್ಕ ಸಂಬಂಧ ಕೂಡ ಅಷ್ಟೇ ಪ್ರಾಮುಖ್ಯತೆ ಪಡೆದಿದೆ. ಹೆತ್ತಮಕ್ಕಳು ಅಪ್ಪ- ಅಮ್ಮನ್ನು ದೂರ ಮಾಡಿದರೆ ದೇವರು ಅದಕ್ಕಾಗಿ ಮತ್ತೊಬ್ಬರನ್ನು ಸೃಷ್ಠಿ ಮಾಡಿರುತ್ತಾರೆ ಎನ್ನುವುದಕ್ಕೆ ಚಿತ್ರ ಉದಾಹರಣೆ.
ಮೇಜರ್ ಮತ್ತಣ್ಣ ( ರಂಗಾಯಣ ರಘು) ಸೇನೆಯಲ್ಲಿ ಕಲಸ ಮಾಡಿ ನಿವೃತ್ತಿ ಪಡೆದವರು. ಶಿವು (ಪ್ರಣಂ ದೇವರಾಜ್) ಅಪ್ಪನ ಆರೈಕೆ ಅವರ ಆಗು ಹೋಗುಗಳನ್ನು ನೋಡಿಕೊಳ್ಳುವುದಕ್ಕೆ ಇಡೀ ಜೀವನ ಮೀಸಲಿಟ್ಟವ. ಮತ್ತೊಂದೆಡೆ ಸತ್ಯಮೂರ್ತಿ ( ಸುಚೇಂದ್ರ ಪ್ರಸಾದ್) ಗೆ ಮಗಳು ಸಾಕ್ಷಿ ವೈದ್ಯೆ ( ಖುಷಿ ರವಿ) ಮೇಲೆ ಇನ್ನಿಲ್ಲದ ಪ್ರೀತಿ ಮಮಕಾರ. ಮುತ್ತಣ್ಣ ಆರೋಗ್ಯ ತಪಾಸಣೆಗೆ ಆಗಮಿಸುತ್ತಾಳೆ. ಮೊದಲ ನೋಟದಲ್ಲಿಯೇ ಶಿವು ಆಕೆಯ ಸೌಂದರ್ಯಕ್ಕೆ ಮನ ಸೋಲುತ್ತಾನೆ.
ಆಕೆ ವೈದ್ಯೆ, ಈತ ಮನೆ ಕೆಲಸ ಮಾಡಿಕೊಂಡವ. ಇದು ಸಾಕ್ಷಿಯ ತಂದೆಗೆ ಆಗಿ ಬರುವುದಿಲ್ಲ ಅದಕ್ಕಾಗಿ ಆತ ಕುತಂತ್ರ ಮಾಡ್ತಾನೆ. ಮುತ್ತಣ್ಣ ಇಬ್ಬರನ್ನು ಹೊಂದು ಮಾಡಲು ಪ್ರಯತ್ನ ಪಡ್ತಾನೆ.ಇಂತಹುದರಲ್ಲಿ ಇದ್ದಕ್ಕಿದ್ದಂತೆ ಅಪ್ಪ ವಾರಣಾಸಿ ತಲುಪುತ್ತಾನೆ, ಆತನ್ನು ಹುಡುಕಿಕೊಂಡ ಹೊರಟ ಮಗನಿಗೆ ಅಲ್ಲಿ ಕಂಡಿದ್ದೇನು,ಅಷ್ಟಕ್ಕೂ ಆಗಿದ್ದೇನು ಎನ್ನುವುದನ್ನು ಚಿತ್ರದಲ್ಲಿಯೇ ನೋಡಬೇಕು
ನಿರ್ದೇಶಕ ಶ್ರೀಕಾಂತ್ ಹುಣಸೂರು, ಒಳ್ಳೆಯ ಕತೆಯನ್ನು ಮುಂದಿಟ್ಟುಕೊಂಡಿದ್ದಾರೆ, ಅದನ್ನು ಇನ್ನಷ್ಟು ಚೆಂದವಾಗಿ ಮಾಡಬಹುದಿತ್ತು. ಆಸ್ಪತ್ರೆಯ ಸನ್ನಿವೇಶದಲ್ಲಿ ಹಾಸಿಗೆ ಮೇಲೆ ಮಲಗಿರುವ ಮತ್ತಣ್ಣ, ನಂತರದ ಸನ್ನಿವೇಶದಲ್ಲಿ ಆರಾಮರಾಗಿ ಕ್ಲೀನ್ ಶೇವ್ ಮಾಡಿಕೊಂಡು ವೈದ್ಯರ ಜೊತೆ ಮಾತನಾಡೋದು, ಶಿವಲಿಂಗದ ಮುಂದೆ ಕುಳಿತಿದ್ದ ವೇಲೆ ಕಣ್ಣು ಮಿಟಿಕಿಸುವುದು ಸನ್ನಿವೇಶ ವೃತ್ತಿಪರತೆಯನ್ನು ಬಿಂಬಿಸುವುದಿಲ್ಲ. ಅಂತಹ ಸಣ್ಣ ಪುಟ್ಟ ಕೆಲಸಗಳ ಕಡೆಗೆ ಗಮನ ಹರಿಸಬಹುದಿತ್ತು.
ನಾಯಕ ಪ್ರಣಾಮ್ ದೇವರಾಜ್ ನೃತ್ಯ, ಸಾಹಸ ದೃಶ್ಯದಲ್ಲಿ ಒಕೆ, ನಟನೆಯಲ್ಲಿ ಇನ್ನಷ್ಟು ಪಳಗಬೇಕಾಗಿದೆ, ಅದರಲ್ಲಿಯೂ ಅನುಭವಿ ನಟಿ ಖುಷಿ ರವಿ ಮುಂದೆ ಮಂಕಾಗಿ ಕಾಣ್ತಾರೆ., ಚಿತ್ರವನ್ನು ಆವರಿಸಿಕೊಂಡಿರುವುದು ರಂಗಾಯಣ ರಘು ನಟನೆ ಮತ್ತು ಚಿತ್ರದುದ್ದಕ್ಕೂ ಅರ್ಥಗರ್ಭಿತ ಸಂಭಾಷೆಣೆ, ಚಿತ್ರದ ಪ್ರೇಕ್ಷಕರಿಗೆ ಇಡಿಸಿದರೆ ಈ ಶ್ರೇಯ ಇಬ್ಬರಿಗೆ ಸಲ್ಲಬೇಕು. ಜೊತೆಗೆ ಗಿರೀಶ್ ಶಿವಣ್ಣ ಮತ್ತು ಸುಚೇಂದ್ರ ಪ್ರಸಾದ್ ಪಾತ್ರಗಳೂ ಗಮನ ಸೆಳೆದಿದೆ.
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – ***** /

