ರಾಷ್ಟ್ರಪ್ರಶಸ್ತಿ ವಿಜೇತ ನಟ-ಗಾಯಕ ದಿಲ್ಜಿತ್ ದೋಸಾಂಜ್, ‘ಕಾಂತಾರ-ಅಧ್ಯಾಯ 1’ಕ್ಕೆ ಗಾಯನ
ರಾಷ್ಟ್ರ ಪ್ರಶಸ್ತಿ ವಿಜೇತ ನಟ, ಗಾಯಕ ದಲ್ಜಿತ್ ದೋಸಾಂಜ್ ಅವರು “ಕಾಂತಾರ ಅಧ್ಯಾಯ-1 ಕ್ಕೆ ಹಾಡು ಹಾಡಿದ್ದು ಗಮನ ಸೆಳೆದಿದೆ.
ಸಾಮಾಜಿಕ ಜಾಕತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ದಿಲ್ಜಿತ್,’ಕಾಂತಾರ’ ಸಿನಿಮಾ ಮಾಡಿದ ಪರಿಣಾಮ ಸ್ಮರಿಸಿದ್ದಾರೆ. “ದೊಡ್ಡಣ್ಣ ರಿಷಬ್ ಶೆಟ್ಟಿ ಅವರಿಗೆ ನನ್ನ ಸಲಾಂ ನಿಜಕ್ಕೂ ಒಂದು ಮಾಸ್ಟರ್ಪೀಸ್ ಚಿತ್ರ ನಿರ್ಮಿಸಿದ್ದಾರೆ. ಆ ಸಿನಿಮಾದೊಂದಿಗೆ ನನಗೆ ವೈಯಕ್ತಿಕ ನಂಟಿದೆ, ಅದನ್ನು ಹೇಳಲು ಸಾಧ್ಯವಿಲ್ಲ. ಆದರೆ, ಚಿತ್ರಮಂದಿರದಲ್ಲಿ ‘ವರಾಹ ರೂಪಂ’ ಹಾಡು ಬಂದಾಗ, ಆನಂದ ಭಾಷ್ಪದಿಂದ ಕಣ್ಣು ತುಂಬಿಕೊಂಡಿದ್ದೆ” ಎಂದು ಭಾವುಕರಾಗಿ ಬರೆದಿದ್ದಾರೆ.
ಅಕ್ಟೋಬರ್ 2 ರಂದು ಬಿಡುಗಡೆಯಾಗಲಿರುವ ಬಹು ನಿರೀಕ್ಷಿತ ಚಿತ್ರಕ್ಕಾಗಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರೊಂದಿಗೆ ಕೆಲಸ ಮಾಡಿದ ಬಗ್ಗೆಯೂ ದಿಲ್ಜಿತ್ ಸಂತಸ ವ್ಯಕ್ತಪಡಿಸಿದ್ದಾರೆ. “ಕೇವಲ ಒಂದೇ ದಿನದಲ್ಲಿ ಅವರಿಂದ ಸಾಕಷ್ಟು ಕಲಿತುಕೊಂಡೆ” ಎಂದು ತಿಳಿಸಿದ್ದಾರೆ.
ದಿಲ್ಜಿತ್ ದೋಸಾಂಜ್ ಮತ್ತು ರಿಷಬ್ ಶೆಟ್ಟಿ ಅವರ ಈ ಮೈತ್ರಿ, ಹೋಂಬಾಳೆ ಫಿಲ್ಮ್ಸ್ ನಿರ್ಮಾಣದ ‘ಕಾಂತಾರ-ಅಧ್ಯಾಯ 1′ ಚಿತ್ರಕ್ಕೆ ಹೊಸ ಸಂಗೀತದ ಸ್ಪರ್ಶ ನೀಡುವುದು ಖಚಿತ.’ಕಾಂತಾರ-ಅಧ್ಯಾಯ 1’ ಅಕ್ಟೋಬರ್ 2 ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ.

